ಮಾಜಿ ಅಧಿಕಾರಿಗಳ ಖುಲಾಸೆ, ಸಿಬಿಐಗೆ ಹಿನ್ನಡೆ

7
ಆಗಸ್ಟಾ ವೆಸ್ಟ್‌ಲ್ಯಾಂಡ್‌ ಖರೀದಿ ಒಪ್ಪಂದ

ಮಾಜಿ ಅಧಿಕಾರಿಗಳ ಖುಲಾಸೆ, ಸಿಬಿಐಗೆ ಹಿನ್ನಡೆ

Published:
Updated:

ನವದೆಹಲಿ: ಅತಿಗಣ್ಯರ ಪ್ರಯಾಣಕ್ಕಾಗಿ ಹೆಲಿಕಾಪ್ಟರ್ ಖರೀದಿ ಒಪ್ಪಂದದಲ್ಲಿ ಭಾರತದ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣ ಸಂಬಂಧ ಇಟಲಿಯ ನ್ಯಾಯಾಲಯವೊಂದು ಫಿನ್‌ಮೆಕಾನಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿಯುಸೆಪ್‌ ಒರ್ಸಿ ಮತ್ತು ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಾಜಿ ಸಿಇಒ ಬ್ರೂನೊ ಸ್ಪ್ಯಾಗ್ನೊಲಿನಿ ಅವರನ್ನು ಖುಲಾಸೆಗೊಳಿಸಿದೆ.

ಹಿನ್ನಡೆ: ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ನ್ಯಾಯಾಲಯದ ಈ ಆದೇಶದಿಂದ ಹಿನ್ನಡೆ ಉಂಟಾಗಿದೆ.

ಸಿಬಿಐ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಅವರ ಜೊತೆಗೆ  ಒರ್ಸಿ, ಸ್ಪ್ಯಾಗ್ನೊಲಿನಿ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿತ್ತು.

ಇಟಲಿಯ ಮಿಲಾನ್‌ನಲ್ಲಿರುವ ಮೇಲ್ಮನವಿ ನ್ಯಾಯಾಲಯವು ಈ ಆದೇಶ ಹೊರಡಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ಎಎನ್‌ಎಸ್‌ಎ ವರದಿ ಮಾಡಿದೆ. ಇದಕ್ಕೂ ಮೊದಲು ನ್ಯಾಯಾಲಯವು ಇಬ್ಬರಿಗೂ ಕ್ರಮವಾಗಿ ನಾಲ್ಕೂವರೆ ವರ್ಷ ಮತ್ತು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಮೇಲ್ಮನವಿಗಳ ವಿಚಾರಣೆಯನ್ನು ಪುನರಾರಂಭಿಸುವಂತೆ 2016ರಲ್ಲಿ ಇಟಲಿಯ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry