ಗೋಧಿ ಉತ್ಪಾದನೆ ದಾಖಲೆ ನಿರೀಕ್ಷೆ

7

ಗೋಧಿ ಉತ್ಪಾದನೆ ದಾಖಲೆ ನಿರೀಕ್ಷೆ

Published:
Updated:

ನವದೆಹಲಿ: 2017–18ನೇ ಹಣಕಾಸು ವರ್ಷದ ಜುಲೈ– ಜೂನ್‌ ಬೆಳೆ ವರ್ಷದಲ್ಲಿ ಗೋಧಿ ಉತ್ಪಾದನೆಯು ಸಾರ್ವಕಾಲಿಕ ದಾಖಲೆ 10 ಕೋಟಿ ಟನ್‌ಗಳಿಗೆ ತಲುಪಲಿದೆ.

‘2016–17ರ ಬೆಳೆ ವರ್ಷದಲ್ಲಿ ಗೋಧಿ ಉತ್ಪಾದನೆಯು 9.8  ಕೋಟಿ ಟನ್‌ಗಳಷ್ಟಿತ್ತು.  ಪ್ರಸಕ್ತ ಸಾಲಿನಲ್ಲಿ ಸರ್ಕಾರವು 9.75 ಕೋಟಿ ಟನ್‌ ಉತ್ಪಾದನೆಯ ಗುರಿ ನಿಗದಿಪಡಿಸಿತ್ತು. ಆ ಗುರಿ ಮೀರುವ ಸಾಧ್ಯತೆ ಕಂಡುಬರುತ್ತಿದೆ’ ಎಂದು ಕೃಷಿ ಕಾರ್ಯದರ್ಶಿ ಎಸ್‌. ಕೆ. ಪಟ್ಟನಾಯಕ್‌ ಅವರು ಹೇಳಿದ್ದಾರೆ.

ಹಿಂಗಾರಿನ ಪ್ರಮುಖ ಬೆಳೆಯಾಗಿರುವ ಗೋಧಿಯನ್ನು ಅಕ್ಟೋಬರ್‌ನಿಂದ ಬಿತ್ತನೆ ಮಾಡಲಾಗುವುದು. ಮಾರ್ಚ್‌ನಲ್ಲಿ ಫಸಲು ಕೊಯ್ಲಿಗೆ ಬರುತ್ತದೆ.

ಕೃಷಿ ಇಲಾಖೆಯ ಬಳಿ ಇರುವ ಅಂಕಿಅಂಶಗಳ ಪ್ರಕಾರ, ಇದುವರೆಗೆ 2.83 ಕೋಟಿ ಹೆಕ್ಟೇರ್‌ ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ. ವರ್ಷದ ಹಿಂದಿನ 2.97 ಕೋಟಿ ಹೆಕ್ಟೇರ್‌ ಪ್ರದೇಶಕ್ಕೆ ಹೋಲಿಸಿದರೆ ಇದುವರೆಗಿನ ಬಿತ್ತನೆ ಪ್ರಮಾಣ ಶೇ 4.77ರಷ್ಟು ಕಡಿಮೆ ಇದೆ.

ಉತ್ತರ ಪ್ರದೇಶದಲ್ಲಿ ಜನವರಿ ಅಂತ್ಯದವರೆಗೆ ಬಿತ್ತನೆಗೆ ಅವಕಾಶ ಇರುವುದರಿಂದ ಈ ಕೊರತೆ ತುಂಬಿಕೊಳ್ಳುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry