ಬುಧವಾರ, ಜೂಲೈ 8, 2020
23 °C
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಆಲೋಚನೆ

ರಫ್ತು ಹೆಚ್ಚಿಸಲು ರಾಜ್ಯಗಳಿಗೆ ಉತ್ತೇಜನ

ಪಿಟಿಐ Updated:

ಅಕ್ಷರ ಗಾತ್ರ : | |

ರಫ್ತು ಹೆಚ್ಚಿಸಲು ರಾಜ್ಯಗಳಿಗೆ ಉತ್ತೇಜನ

ನವದೆಹಲಿ: ರಫ್ತು ಉತ್ತೇಜನಕ್ಕೆ ಹೆಚ್ಚು ಆಸಕ್ತಿ ತೋರುವ ರಾಜ್ಯಗಳಿಗೆ ಉತ್ತೇಜನಾ ಕೊಡುಗೆ ನೀಡುವುದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

‘ದೇಶಿ ರಫ್ತು ಹೆಚ್ಚಳಗೊಳ್ಳುವುದರಿಂದ ಆರ್ಥಿಕತೆಗೂ  ಉತ್ತೇಜನ ಸಿಗಲಿದೆ. ಈ ಸಂಬಂಧ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಲಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ. ಇತ್ತೀಚೆಗೆ ನಡೆದಿದ್ದ ವ್ಯಾಪಾರ ಅಭಿವೃದ್ಧಿ ಮತ್ತು ಉತ್ತೇಜನಾ ಮಂಡಳಿಯ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಪ್ರಸ್ತಾವಗೊಂಡಿತ್ತು.

‘ರಫ್ತು ಉತ್ತೇಜಿಸಲು ರಾಜ್ಯ ಸರ್ಕಾರಗಳಿಗೆ ಯಾವ ಬಗೆಯಲ್ಲಿ ಉತ್ತೇಜನ ನೀಡಬೇಕು ಎನ್ನುವುದರ ಬಗ್ಗೆ ವಾಣಿಜ್ಯ ಸಚಿವಾಲಯ ಚಿಂತಿಸುತ್ತಿದೆ. ನಾನು ಈ ಸಲಹೆಯನ್ನು ರಾಜ್ಯಗಳ ಗಮನಕ್ಕೆ ತಂದಿರುವೆ. ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳಗೊಂಡರೆ ಅದು ದೇಶದ ಆರ್ಥಿಕ ಬೆಳವಣಿಗೆಗೂ ನೆರವು ನೀಡಲಿದೆ. ಒಟ್ಟಾರೆ ರಫ್ತು ವಹಿವಾಟು ಉತ್ತೇಜಿಸಿ, ಕೈಗಾರಿಕಾ ಬೆಳವಣಿಗೆ ವೃದ್ಧಿಸಲು ವಾಣಿಜ್ಯ ಸಚಿವಾಲಯ ಕಾರ್ಯತಂತ್ರ ರೂಪಿಸುತ್ತಿದೆ’ ಎಂದು ಹೇಳಿದ್ದಾರೆ.

*

ಮರುಪಾವತಿಗೆ ‘ಇ–ವಾಲೆಟ್‌’ ಪರಿಹಾರ

‘ಜಿಎಸ್‌ಟಿ ಮರುಪಾವತಿ ಕುರಿತು ರಫ್ತುದಾರರು ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿರುವ ಅವರು, ಈ ಸಮಸ್ಯೆಗೆ ‘ಇ–ವಾಲೆಟ್‌’ ವ್ಯವಸ್ಥೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಏಪ್ರಿಲ್‌ – ನವೆಂಬರ್‌ ಅವಧಿಯಲ್ಲಿ ದೇಶದ ರಫ್ತು ವಹಿವಾಟು ಶೇ 12 ರಷ್ಟು ಹೆಚ್ಳಳಗೊಂಡು ₹ 12.77 ಲಕ್ಷ ಕೋಟಿಗಳಷ್ಟಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.