ಎಲೆಕ್ಟ್ರಾನಿಕ್ಸ್‌ ಪ್ರದರ್ಶನ ಮೇಳದಲ್ಲಿ ಆಟೊಮೊಬೈಲ್‌ ಸಡಗರ

7

ಎಲೆಕ್ಟ್ರಾನಿಕ್ಸ್‌ ಪ್ರದರ್ಶನ ಮೇಳದಲ್ಲಿ ಆಟೊಮೊಬೈಲ್‌ ಸಡಗರ

Published:
Updated:
ಎಲೆಕ್ಟ್ರಾನಿಕ್ಸ್‌ ಪ್ರದರ್ಶನ ಮೇಳದಲ್ಲಿ ಆಟೊಮೊಬೈಲ್‌ ಸಡಗರ

ಲಾಸ್‌ ವೆಗಾಸ್‌: ಅಂತರರಾಷ್ಟ್ರೀಯ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೃಹತ್‌ ಪ್ರದರ್ಶನ ಮೇಳ(ಸಿಇಎಸ್‌)ದಲ್ಲಿ ಈ ಬಾರಿ ಆಟೊಮೊಬೈಲ್‌ ಸಂಸ್ಥೆಗಳದ್ದೇ ಕಾರುಬಾರು.

ಪ್ರತಿ ವರ್ಷ ಲಾಸ್‌ ವೆಗಾಸ್‌ನಲ್ಲಿ ಆಯೋಜಿಸಲಾಗುವ ವಿನೂತನ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಪ್ರದರ್ಶನ ಮೇಳದಲ್ಲಿ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌, ಸ್ಮಾರ್ಟ್ ತಂತ್ರಜ್ಞಾನ ಅಳವಡಿಸಿಕೊಂಡ ಪುಟ್ಟ ಮೆಷಿನ್‌ಗಳು ಗಮನ ಸೆಳೆಯುತ್ತವೆ. ಆದರೆ, ಈ ಸಲ ಟಯೋಟಾ, ಹುಂಡೈ ಹಾಗೂ ಫೋರ್ಡ್‌ನಂತಹ ಜಾಗತಿಕ ಆಟೊಮೊಬೈಲ್‌ ಸಂಸ್ಥೆಗಳು ಪಾಲ್ಗೊಂಡಿದ್ದು, ಕಾರು ತಯಾರಿಕೆಯಲ್ಲಿನ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಪುಟ್ಟ ಮಳಿಗೆಗಳಂತೆ ಬಳಸಬಹುದಾದ ಸ್ವಯಂ ಚಾಲಿತ ಮಿನಿ ಬಸ್‌ಗಳನ್ನು ಟೊಯೊಟಾ ಅಭಿವೃದ್ಧಿ ಪಡಿಸುತ್ತಿದೆ. ಪ್ರಸ್ತುತ ಪರಿಕಲ್ಪನೆಯ ಹಂತದಲ್ಲಿರುವ ಯೋಜನೆ 2020ಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ, ಗ್ರಾಹಕರ ಮನೆ ಬಾಗಿಲಿಗೆ ತೆರಳುವ ವಾಹನ ಅವರ ನೆಚ್ಚಿನ ಬಟ್ಟೆ, ಶೂಗಳನ್ನು ಕೊಂಡೊಯ್ಯಲು ಬಳಸಬಹುದು ಎಂದು ಸಂಸ್ಥೆ ಹೇಳಿದೆ.

(ನವ್ಯ ಸಂಸ್ಥೆ ಸ್ವಯಂ ಚಾಲಿತ ರೋಬೊ ಟ್ಯಾಕ್ಸಿಯನ್ನು ಪ್ರದರ್ಶಿಸಿತು)

ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಬಾಷ್‌ ಸಂಸ್ಥೆ ಪಾರ್ಕಿಂಗ್‌ ಸ್ಥಳಾವಕಾಶದ ಮಾಹಿತಿ ಒದಗಿಸುವ ವ್ಯವಸ್ಥೆ ರೂಪಿಸಲು ಮುಂದಾಗಿದೆ.

ಪ್ರಾಯೋಗಿಕವಾಗಿ ಅಮೆರಿಕದ 20 ನಗರಗಳ ಪಾರ್ಕಿಂಗ್‌ ಸ್ಥಳಗಳಲ್ಲಿ ಇದರ ಬಳಕೆಯಾಗಲಿದೆ. ಕಾರಿನ ಚಾಲಕರು ಪಾರ್ಕಿಂಗ್ ಸ್ಥಳಕ್ಕೆ ಬಂದೊಡನೆ ಇರುವ ಸ್ಥಳಾವಕಾಶ, ಕಾರುಗಳ ನಡುವಿನ ಅಂತರದ ಮಾಹಿತಿಯನ್ನು ಕೆಲವೇ ಕ್ಷಣಗಳಲ್ಲಿ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್‌, ಎಲ್‌ಜಿ, ಗೂಗಲ್‌, ಅಮೆಜಾನ್‌ ಹಾಗೂ ಹಲವು ರೊಬಾಟಿಕ್‌ ಸಂಸ್ಥೆ ತಮ್ಮ ನೂತನ ಉಪಕರಣಗಳನ್ನು ಪ್ರದರ್ಶಿಸುತ್ತಿವೆ. 9ರಿಂದ 12ರ ವರೆಗೂ ಪ್ರದರ್ಶನ ಆಯೋಜನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry