ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮ ಸೇರಲು ‘ಊನಾ’ ಸಂತ್ರಸ್ತರ ನಿರ್ಧಾರ

Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ಊನಾದ ಹಳ್ಳಿಯೊಂದರಲ್ಲಿ ಸತ್ತ ದನದ ಚರ್ಮ ಸುಲಿದ ಕಾರಣಕ್ಕೆ ಗೋರಕ್ಷಕರಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ದಲಿತ ಕುಟುಂಬವು ಬೌದ್ಧ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದೆ.

ಊನಾದ ಮೋತಾ ಗ್ರಾಮದಲ್ಲಿ ಕಳೆದ ಜುಲೈನಲ್ಲಿ ಏಳು ಜನರ ಮೇಲೆ ಹಲ್ಲೆ ನಡೆದಿತ್ತು. ಅವರಲ್ಲಿ ಒಂದೇ ಕುಟುಂಬದ ನಾಲ್ವರನ್ನು ಊನಾ ಪಟ್ಟಣಕ್ಕೆ ತಂದು ಮತ್ತೆ ಹಲ್ಲೆ ನಡೆಸಲಾಗಿತ್ತು.

‘ಸತ್ತ ದನ, ಎತ್ತುಗಳ ಚರ್ಮ ಸುಲಿಯುವ ನಮ್ಮ ಕುಲಕಸುಬಿನ ಕಾರಣದಿಂದ ನಾವು ತೀರಾ ಅವಮಾನ ಎದುರಿಸುತ್ತಿದ್ದೇವೆ. ಆದರೆ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದು ಆರಾಮವಾಗಿ ಓಡಾಡುತ್ತಿದ್ದಾರೆ. ಮನೆಯಿಂದ ಹೊರಗೆ ಹೆಜ್ಜೆ ಇಡಲೂ ಭಯವಾಗುತ್ತಿದೆ. ಈ ಎಲ್ಲಾ ಕಾರಣದಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದೇವೆ. ಆದರೆ ಮತಾಂತರದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮತಾಂತರವಾಗುವಂತೆ ನಮ್ಮ ಸಮುದಾಯದ ಇನ್ನೂ ಹಲವರನ್ನು ಕೇಳಿಕೊಂಡಿದ್ದೇವೆ’ ಎಂದು ಕುಟುಂಬದ ಹಿರಿಯ ಮಗ ಹೇಳಿದ್ದಾರೆ. ಊನಾದಲ್ಲಿ ನಡೆದಿದ್ದ ಹಲ್ಲೆಯ ಸಂತ್ರಸ್ತರಲ್ಲಿ ಇವರೂ ಒಬ್ಬರು.

‘ಪ್ರಕರಣದ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ರಚಿಸುವುದಾಗಿ ಸರ್ಕಾರ ಹೇಳಿತ್ತು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಹೇಳಿತ್ತು. ಆದರೆ ಯಾವ ಭರವಸೆಯನ್ನೂ ಈಡೇರಿಸಿಲ್ಲ. ದೌರ್ಜನ್ಯ ತಡೆ ಕಾಯ್ದೆ ಅಡಿ ₹ 3 ಲಕ್ಷ ಪರಿಹಾರ ದೊರೆತಿತ್ತು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ನಮ್ಮ ಅಪ್ಪ ಇನ್ನೂ ಗುಣಮುಖರಾಗಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸಲು ಆಗಾಗ ಅಹಮದಾಬಾದ್‌ಗೆ ಹೋಗಬೇಕು. ಚಿಕಿತ್ಸೆ ಮತ್ತು ನ್ಯಾಯಾಲಯ, ವಕೀಲರ ಶುಲ್ಕ ಭರಿಸುವುದರಲ್ಲೇ ಪರಿಹಾರದ ಹಣವೆಲ್ಲಾ ಖಾಲಿಯಾಗಿದೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT