ಶೌಚದ ಕಮೋಡ್‌ನಲ್ಲಿ ಭ್ರೂಣ!

7

ಶೌಚದ ಕಮೋಡ್‌ನಲ್ಲಿ ಭ್ರೂಣ!

Published:
Updated:

ಬೆಂಗಳೂರು: ಸೇಂಟ್‌ ಜಾನ್ಸ್ ಆಸ್ಪತ್ರೆಯ ಶೌಚದ ಕಮೋಡ್‌ ಸ್ವಚ್ಛಗೊಳಿಸುವಾಗ ಮೂರು ತಿಂಗಳ ಗಂಡು ಭ್ರೂಣ ಪತ್ತೆಯಾಗಿದ್ದು, ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವೆಂಕಟಾಪುರದ ಸಂದೀಪ್ ಎಂಬುವರು ಒಂದೂವರೆ ವರ್ಷದಿಂದ ಆಸ್ಪತ್ರೆಯ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಬೆಳಿಗ್ಗೆಯಿಂದ ಕಮೋಡ್‌ನಲ್ಲಿ ನೀರು ಕಟ್ಟಿಕೊಂಡಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಸಂದೀಪ್ ಅವರು ಅದರಲ್ಲಿ ಪೈಪ್ ಹಾಕಿ ನೀರು ಸುರಿಯುತ್ತಿದ್ದಂತೆಯೇ ಭ್ರೂಣ ಮೇಲೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಭ್ರೂಣ ನೋಡಿ ಗಾಬರಿಗೊಂಡ ಸಂದೀಪ್, ಕೂಡಲೇ ಡಾ.ವರ್ಗೀಸ್ ಅವರಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರ ಸೂಚನೆಯಂತೆ ಕೋರಮಂಗಲ ಠಾಣೆಗೆ ದೂರು ಕೊಟ್ಟಿದ್ದಾರೆ. ಭ್ರೂಣ ಅಥವಾ ಶಿಶುವನ್ನು ಬಿಸಾಡಿದ ಆರೋಪದಡಿ (ಐಪಿಸಿ 318) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವೈದ್ಯರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

‘ಭಾನುವಾರ ಬೆಳಿಗ್ಗೆ ಕಮೋಡ್‌ ಕಟ್ಟಿಕೊಂಡಿದೆ. ಬೆಳಿಗ್ಗೆಯಿಂದ ಯಾರ‍್ಯಾರು ಶೌಚಾಲಯದ ಒಳಗೆ ಹೋಗಿದ್ದರು ಎಂಬುದನ್ನು ತಿಳಿಯಲು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry