‘ಜಮೀನು ರಾಮ ಸೇವಾ ಟ್ರಸ್ಟ್‌ಗೆ ಸೇರಿದ್ದು’

7

‘ಜಮೀನು ರಾಮ ಸೇವಾ ಟ್ರಸ್ಟ್‌ಗೆ ಸೇರಿದ್ದು’

Published:
Updated:

ಬೆಂಗಳೂರು: ‘ಕಗ್ಗಲೀಪುರದ 4 ಎಕರೆ ಜಮೀನನ್ನು ಶ್ರೀ ರಾಮ ಸೇವಾ ಮಂಡಳಿ ಕಬಳಿಸಿಲ್ಲ. ಸಂಗೀತ ಗ್ರಾಮ ನಿರ್ಮಿಸಲೆಂದು 2001ರಲ್ಲಿ ಸರ್ಕಾರ ಈ ಜಾಗವನ್ನು ಮಂಡಳಿಗೆ ಮಂಜೂರು ಮಾಡಿತ್ತು’ ಎಂದು ಮಂಡಳಿಯ ಸಂಚಾಲಕ ವರದರಾಜ್‌ ತಿಳಿಸಿದ್ದಾರೆ.

ನಂಜಪ್ಪ ಬೋವಿ ಎಂಬುವರಿಗೆ ಸೇರಿದ್ದ 4 ಎಕರೆ ಜಮೀನು ಕಬಳಿಸಲು ಶ್ರೀರಾಮ ಸೇವಾ ಮಂಡಳಿಯು ಹುನ್ನಾರ ನಡೆಸಿದೆ ಎಂದು ಆರೋಪಿಸಿ ರಾಜ್ಯ ಆದಿಜಾಂಬವ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು ‘ಜಾಗವು ಶ್ರೀರಾಮ ಸೇವಾ ಟ್ರಸ್ಟ್‌ಗೆ ಸೇರಿರುವುದರ ದಾಖಲೆಗಳು ನಮ್ಮ ಬಳಿ ಇವೆ. ಜಮೀನು ತಮ್ಮದೆಂದು ಆರೋಪ ಮಾಡುತ್ತಿರುವವರು ದಾಖಲೆಗಳಿದ್ದರೆ ತೋರಿಸಲಿ’ ಎಂದು ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry