‘ಬನ್ಸಾಲಿಗೆ ಬೆಳ್ಳಿ ಬೂಟಿನೇಟು’

7

‘ಬನ್ಸಾಲಿಗೆ ಬೆಳ್ಳಿ ಬೂಟಿನೇಟು’

Published:
Updated:

ನವದೆಹಲಿ: ‘ಪದ್ಮಾವತ್ ಚಲನಚಿತ್ರದ ಬಿಡುಗಡೆಯನ್ನು ತಡೆಯುವ ಸಲುವಾಗಿ ಚಿತ್ರಮಂದಿರಗಳಲ್ಲಿ ಸಾರ್ವಜನಿಕರೇ ಕರ್ಫ್ಯೂವನ್ನು ಹೇರಬೇಕು’ ಶ್ರೀ ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಲೇಕೇಂದ್ರ ಸಿಂಗ್ ಕಾಲವಿ ಕರೆ ನೀಡಿದ್ದಾರೆ.

‘ಸಿನಿಮಾವನ್ನು ವೀಕ್ಷಿಸಿದ್ದ ತಜ್ಞರ ಸಲಹೆಯನ್ನು ಕಡೆಗಣಿಸಿ, ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷರು ‘ಪದ್ಮಾವತ್‌’ಗೆ ಪ್ರಮಾಣಪತ್ರ ನೀಡಿದ್ದಾರೆ. ಚಿತ್ರ ಬಿಡುಗಡೆಗೆ ನೀವು ದಿನಾಂಕ ನಿಗದಿ ಮಾಡುತ್ತಲೇ ಇರಿ. ಏನೇ ಆದರೂ ನಾವು ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಯಾವುದೇ ಅನಾಹುತ ಆದರೂ ಚಿತ್ರದ ನಿರ್ದೇಶಕ ಸಂಜಯ್ ಕುಮಾರ್ ಬನ್ಸಾಲಿಯೇ ಹೊಣೆ’ ಎಂದು ಕಾಲವಿ ಎಚ್ಚರಿಕೆ ನಿಡಿದ್ದಾರೆ.

‘ಚಿತ್ರ ಬಿಡುಗಡೆಯಾದರೆ ನಾವು ಬನ್ಸಾಲಿಗೆ ಬೆಳ್ಳಿಯ ಬೂಟಿನಿಂದ ಹೊಡೆಯುತ್ತೇವೆ. ಅದರಿಂದ ಆತನಿಗೆ ಭಾರಿ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗುತ್ತದೆ’ ಎಂದು ಅವರು ಬೆದರಿಕೆ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry