ಚೀನಾಕ್ಕೆ ಮೇಯರ್‌ ‍ಪ್ರವಾಸ

7

ಚೀನಾಕ್ಕೆ ಮೇಯರ್‌ ‍ಪ್ರವಾಸ

Published:
Updated:

ಬೆಂಗಳೂರು: ಮೇಯರ್‌ ಆರ್‌.ಸಂಪತ್‌ರಾಜ್‌ ಮತ್ತು ಪಾಲಿಕೆ ಆಡಳಿತ ಪಕ್ಷದ ನಾಯಕ ಮಹಮದ್‌ ರಿಜ್ವಾನ್‌ ನವಾಬ್‌ ವಾಣಿಜ್ಯ ಮತ್ತು ಕೈಗಾರಿಕಾ ವ್ಯಾಪಾರ ಮೇಳದಲ್ಲಿ ಭಾಗವಹಿಸಲು ಬುಧವಾರ ಸಂಜೆ ಚೀನಾಕ್ಕೆ ಪ್ರಯಾಣ ಆರಂಭಿಸಿದರು.

ಸಾನ್ಯ ಸಿಟಿಯಲ್ಲಿ ನಡೆಯಲಿರುವ ಈ ಮೇಳಕ್ಕೆ ದೇಶದ ಎಲ್ಲ ಮಹಾ ನಗರಗಳ ಮೇಯರ್‌ಗಳಿಗೆ ಭಾಗವಹಿಸಲು ಚೀನಾ ಆಹ್ವಾನ ನೀಡಿದೆ. ಪಾಲಿಕೆ ಅಧಿಕಾರಿಗಳೂ ಈ ಮೇಳದಲ್ಲಿ ಭಾಗವಹಿಸಬೇಕಿತ್ತು. ಆದರೆ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಹೊಸ ಮತದಾರರ ನೋಂದಣಿ ನಡೆಯುತ್ತಿರುವುದರಿಂದ ಮೇಯರ್‌ ಮತ್ತು ಆಡಳಿತ ಪಕ್ಷದ ನಾಯಕ ಮಾತ್ರ ಮೇಳದಲ್ಲಿ ಭಾಗವಹಿಸಲಿದ್ದಾರೆ. ಜ.15ರಂದು ನಗರಕ್ಕೆ ವಾಪಸಾಗಲಿದ್ದಾರೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry