ಬೊಮ್ಮೂರು ಅಗ್ರಹಾರದಲ್ಲಿ ನಿಷೇಧಾಜ್ಞೆ ಜಾರಿ

7
ಖಬರಸ್ತಾನ್‌ ಜಾಗಕ್ಕೆ ಮೀಸಲಾದ ಸ್ಥಳದಲ್ಲಿ ಮದರಸಾ ನಿರ್ಮಾಣ: ಆರೋಪ

ಬೊಮ್ಮೂರು ಅಗ್ರಹಾರದಲ್ಲಿ ನಿಷೇಧಾಜ್ಞೆ ಜಾರಿ

Published:
Updated:
ಬೊಮ್ಮೂರು ಅಗ್ರಹಾರದಲ್ಲಿ ನಿಷೇಧಾಜ್ಞೆ ಜಾರಿ

ಶ್ರೀರಂಗಪಟ್ಟಣ: ತಾಲ್ಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ಖಬರಸ್ತಾನ್‌ ಜಾಗಕ್ಕೆ ಮೀಸಲಾದ ಸ್ಥಳದಲ್ಲಿ ಮದರಸಾ ನಿರ್ಮಿಸಲಾಗುತ್ತಿದ್ದು ಅದಕ್ಕೆ ಅವಕಾಶ ನೀಡಬಾರದು ಎಂಬ ಸ್ಥಳೀಯರ ಆಕ್ಷೇಪದ ಖಬರಸ್ತಾನ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗ್ರಾಮದ ಸ.ನಂ. 241ರ ಆಸುಪಾಸಿನ 500 ಮೀಟರ್‌ ವ್ಯಾಪ್ತಿಯಲ್ಲಿ ಜ. 9ರ ಮಧ್ಯರಾತ್ರಿಯಿಂದ 30ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ವಿಧಿಸಿ ತಹಶೀಲ್ದಾರ್‌ ವಸಂತಕುಮಾರ್‌ ಆದೇಶ ಹೊರಡಿಸಿದ್ದಾರೆ.

ಸಂಭಾವ್ಯ ಕೋಮು ಗಲಭೆ ಇತರ ಅಹಿತಕರ ಘಟನೆ ತಡೆಯುವ ಉದ್ದೇಶದಿಂದ ಬೊಮ್ಮೂರು ಅಗ್ರಹಾರದ ಖಬರಸ್ತಾನ್‌ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡುವಂತೆ ಸಿಪಿಐ ರವೀಂದ್ರ ಅವರು ಸಲ್ಲಿಸಿದ್ದ ವರದಿ ಆಧರಿಸಿ ದಂಡಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

‘ಬೆಂಗಳೂರು– ಮೈಸೂರು ಹೆದ್ದಾರಿಯೂ ಸೇರಿ ಖಬರಸ್ತಾನ್‌ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದು ಜನರು ಗುಂಪು ಗೂಡುವುದು ಇತರ ಚಟುವಟಿಕೆ ನಡೆಸುವುದನ್ನು ನಿಷೇಧಿಸಲಾಗಿದೆ. ಸ್ಥಳದಲ್ಲಿ ಸಿವಿಲ್‌ ಪೊಲೀಸರು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಒಂದು ತುಕಡಿಯನ್ನು ನಿಯೋಜಿಸಲಾಗಿದೆ’ ಎಂದು ಸಿಪಿಐ ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೊಮ್ಮೂರು ಅಗ್ರಹಾರ ಗ್ರಾಮದ ಸ.ನಂ 241ರಲ್ಲಿ 5 ಎಕರೆ 35 ಗುಂಟೆ ಜಾಗವನ್ನು ಸರ್ಕಾರ ಅಲ್ಪಸಂಖ್ಯಾತರ ಖಬರಸ್ತಾನ್‌ಗೆ ಮಂಜೂರು ಮಾಡಿದೆ. ಈ ಪೈಕಿ ಒಂದು ಎಕರೆ ಜಾಗವನ್ನು ಭೂ ಪರಿರ್ತನೆ ಮಾಡಲಾಗಿದೆ. ಈ ಜಾಗದಲ್ಲಿ ಹಲವು ವರ್ಷಗಳಿಂದ ಅನಾಥ ಮುಸ್ಲಿಂ ಮಕ್ಕಳ ವಸತಿ ಶಾಲೆ ನಡೆಯುತ್ತಿದೆ. ಖಬರಸ್ತಾನ್‌ಗೆ ಮೀಸಲಾದ ಜಾಗದಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆಂದು ಮಂಗಳವಾರ ನಸುಕಿನಲ್ಲಿ ಮೈಸೂರಿನ ಮುಸ್ಲಿಂ ಯುವಕರ ಗುಂಪು ಕಾಂಕ್ರೀಟ್‌, ಕಬ್ಬಿಣ ವಸ್ತುಗಳು ಹಾಗೂ ವಾಹನಗಳನ್ನು ತಂದಿತ್ತು.

ಸ್ಥಳೀಯರ ವಿರೋಧ ತೀವ್ರಗೊಂಡ ಕಾರಣ ಪೊಲೀಸರು ಅವುಗಳನ್ನು ತೆರವುಗೊಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry