ಯೋಧರಿಂದ ಹತರಾಗುವ ಕಾಶ್ಮೀರಿ ಉಗ್ರರು ಹುತಾತ್ಮರು: ಪಿಡಿಪಿ ಶಾಸಕ ಹೇಳಿಕೆ

7

ಯೋಧರಿಂದ ಹತರಾಗುವ ಕಾಶ್ಮೀರಿ ಉಗ್ರರು ಹುತಾತ್ಮರು: ಪಿಡಿಪಿ ಶಾಸಕ ಹೇಳಿಕೆ

Published:
Updated:
ಯೋಧರಿಂದ ಹತರಾಗುವ ಕಾಶ್ಮೀರಿ ಉಗ್ರರು ಹುತಾತ್ಮರು: ಪಿಡಿಪಿ ಶಾಸಕ ಹೇಳಿಕೆ

ಜಮ್ಮು: ‘ಭ್ರತಾಪಡೆಗಳಿಂದ ಹತ್ಯೆಯಾಗುವ ಕಾಶ್ಮೀರಿ ಉಗ್ರರನ್ನು ಹುತಾತ್ಮರೆಂದು ಪರಿಗಣಿಸಬೇಕು’ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಶಾಸಕ ಐಜಾಜ್ ಅಹ್ಮದ್ ಮಿರ್ ಹೇಳಿದ್ದಾರೆ.

‘ಕಾಶ್ಮೀರಿ ಉಗ್ರರ ಹತ್ಯೆಗೆ ಸಂಭ್ರಮಪಡಬಾರದು. ಅವರು ನಮ್ಮ ಸಹೋದರರು’ ಎಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಬುಧವಾರ ಮಿರ್ ಹೇಳಿದ್ದರು.

‘ಉಗ್ರರ ಹತ್ಯೆಯನ್ನು ನಾವು ಸಂಭ್ರಮಿಸಬಾರದು. ಇದು ನಮ್ಮ ಸಾಮೂಹಿಕ ವೈಫಲ್ಯ. ಭದ್ರತಾಪಡೆ ಸಿಬ್ಬಂದಿ ಹುತಾತ್ಮರಾದಾಗ ನಾವು ಬೇಸರಪಡುತ್ತೇವೆ. ಅವರ ಪಾಲಕರ ಬಗ್ಗೆ ಕನಿಕರ ಭಾವ ಹೊಂದುತ್ತೇವೆ. ಉಗ್ರರ ಪಾಲಕರೂ ಹಾಗೆಯೇ’ ಎಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಹೊರಗೆ ಮಿರ್ ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry