ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕಕ್ಕೆ ರೋಚಕ ಗೆಲುವು

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಕರುಣ್ ನಾಯರ್ ಮತ್ತು ಕೆ.ಗೌತಮ್‌ ನಡುವಿನ ಶತಕದ ಜೊತೆಯಾಟ ಮತ್ತು ಸ್ಟುವರ್ಟ್ ಬಿನ್ನಿ ನಡೆಸಿದ ಪರಿಣಾಮಕಾರಿ ಬೌಲಿಂಗ್ ದಾಳಿ ಕರ್ನಾಟಕಕ್ಕೆ ರೋಚಕ ಗೆಲುವು ಗಳಿಸಿಕೊಟ್ಟಿತು.

ಇಲ್ಲಿನ ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ಎರಡು ರನ್‌ಗಳ ಅಂತರದಿಂದ ಆತಿಥೇಯ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಸವಾಲಿನ 205 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಹೈದರಾಬಾದ್‌ ಗೆಲುವಿನತ್ತ ದಾಪುಗಾಲು ಹಾಕಿತ್ತು. ಆದರೆ ಅಂತಿಮ ಓವರ್‌ನಲ್ಲಿ ಕೆ.ಗೌತಮ್, ಆರ್‌.ಸಮರ್ಥ್ ಮತ್ತು ಬಿನ್ನಿ ಅವರ ಕೈಚಳಕದಿಂದ ಆ ತಂಡ 203 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ತನ್ಮಯ್ ಅಗರವಾಲ್ ಮತ್ತು ಆಕ್ಷತ್‌ ರೆಡ್ಡಿ (70; 29 ಎ, 3 ಸಿ, 7 ಬೌಂ) ಮೊದಲ ವಿಕೆಟ್‌ಗೆ 35 ಎಸೆತಗಳಲ್ಲಿ 60 ರನ್ ಸೇರಿಸಿ ಹೈದರಾಬಾದ್ ತಂಡದ ಇನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿದ್ದರು. ತೇಜ ಅವರೊಂದಿಗೆ ಎರ ಡನೇ ವಿಕೆಟ್‌ಗೆ 62 ರನ್‌ ಸೇರಿಸಿ ಆಕ್ಷತ್‌ ಔಟಾದ ನಂತರ ತಂಡ ನಿರಂತರ ವಿಕೆಟ್ ಕಳೆದುಕೊಂಡಿತು.

ಆದರೆ ಏಳನೇ ಕ್ರಮಾಂಕದ ಸಂದೀಪ್‌ ದಿಟ್ಟ ಆಟವಾಡಿ ಕರ್ನಾಟಕದ ಪಾಳಯದಲ್ಲಿ ಆತಂಕ ಮೂಡಿಸಿದರು. ಕೊನೆಯ ಓವರ್‌ನಲ್ಲಿ ತಂಡ ಗೆಲುವಿನತ್ತ ಹೆಜ್ಜೆ ಹಾಕಿತ್ತು. 20ನೇ ಓವರ್‌ನ ಎರಡನೇ ಎಸೆತದಲ್ಲಿ ಸಂದೀಪ್ ಅವರನ್ನು ಗೌತಮ್‌ ರನ್‌ ಔಟ್‌ ಮಾಡಿ ಪಂದ್ಯಕ್ಕೆ ತಿರುವು ನೀಡಿದರು.

ಒತ್ತಡಕ್ಕೆ ಸಿಲುಕಿದ ಹೈದರಾಬಾದ್‌ನ ಆಕಾಶ್ ಭಂಡಾರಿ ಅವರನ್ನು ಐದನೇ ಎಸೆತದಲ್ಲಿ ಸಮರ್ಥ್ ರನ್‌ ಔಟ್‌ ಮಾಡಿದರು. ಕೊನೆಯ ಎಸೆತದಲ್ಲಿ ಗೆಲುವಿಗೆ ಮೂರು ರನ್ ಬೇಕಾಗಿದ್ದಾಗ ಮಹ ಮ್ಮದ್ ಸಿರಾಜ್ ಅವರನ್ನು ಬಿನ್ನಿ ಔಟ್‌ ಮಾಡಿದರು.

ಸ್ಫೋಟಿಸಿದ ಕರುಣ್‌ ನಾಯರ್‌, ಗೌತಮ್‌

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ 11 ರನ್‌ ಗಳಿಸುವಷ್ಟರಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಮಯಂಕ್ ಅಗರವಾಲ್ ಅವರ ವಿಕೆಟ್ ಕಳೆದುಕೊಂಡಿತು.

ಈ ಸಂದರ್ಭದಲ್ಲಿ ಜೊತೆಗೂಡಿದ ಕರುಣ್‌ ನಾಯರ್ ಮತ್ತು ಕೆ.ಗೌತಮ್‌ 131 ರನ್‌ಗಳ ಜೊತೆಯಾಟ ಆಡಿದರು.

ಕರುಣ್ ನಾಯರ್‌ 42 ಎಸೆತಗಳಲ್ಲಿ 77 ರನ್ ಗಳಿಸಿದರು.

ಒಂದು ಸಿಕ್ಸರ್ ಮತ್ತು 10 ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು. ಗೌತಮ್‌ 31 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಮತ್ತು ಬೌಂಡರಿ ಒಳಗೊಂಡ 57 ರನ್‌ ಗಳಿಸಿದರು. 13ನೇ ಓವರ್‌ನಲ್ಲಿ ಇವರ ಜೊತೆಯಾಟ ಮುರಿದು ಬಿತ್ತು. ನಂತರ ನಿರಂತರ ವಿಕೆಟ್‌ಗಳು ಉರುಳಿದವು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 205 (ಕರುಣ್ ನಾಯರ್‌ 77, ಕೆ.ಗೌತಮ್‌ 57;ರವಿಕಿರಣ್‌ 33ಕ್ಕೆ2); ಹೈದರಾ ಬಾದ್‌ 30 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 203 (ತನ್ಮಯ್ ಅಗರವಾಲ್‌ 38, ಅಕ್ಷತ್ ರೆಡ್ಡಿ 70, ಬಿ.ಸಂದೀಪ್‌ 34; ಸ್ಟುವರ್ಟ್ ಬಿನ್ನಿ 29ಕ್ಕೆ3)

ಫಲಿತಾಂಶ: ಕರ್ನಾಟಕಕ್ಕೆ 2 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT