ಇನ್ನೊಂದು ದಾಖಲೆ ಬರೆದ ಸೂಚ್ಯಂಕ

7

ಇನ್ನೊಂದು ದಾಖಲೆ ಬರೆದ ಸೂಚ್ಯಂಕ

Published:
Updated:

ಮುಂಬೈ : ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ ಇನ್ನೊಂದು ಹೊಸ ಎತ್ತರಕ್ಕೆ ಏರಿತು.

ಉದ್ದಿಮೆ ಸಂಸ್ಥೆಗಳ ಮೂರನೇ ತ್ರೈಮಾಸಿಕದ ಹಣಕಾಸು ಸಾಧನೆ ಉತ್ತಮವಾಗಿರುವ ನಿರೀಕ್ಷೆಯು ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ  ಮೂಡಿಸಿದೆ.

ಸೂಚ್ಯಂಕವು 70 ಅಂಶಗಳ ಏರಿಕೆ ಕಂಡು 34,503 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ದಿನದ ಆರಂಭದಲ್ಲಿ ಎಚ್ಚರಿಕೆಯ ವಹಿವಾಟು ಕಂಡುಬಂದಿತು. ಆದರೆ, ನಂತರ ಚೇತರಿಕೆ ಕಂಡಿತು.  ಐ.ಟಿ ಮತ್ತು ರಿಯಾಲ್ಟಿ ಷೇರುಗಳು ಲಾಭ ಬಾಚಿಕೊಳ್ಳುವಲ್ಲಿ ಮುಂಚೂಣಿಯಲ್ಲಿ ಇದ್ದವು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’  ಕೂಡ 19 ಅಂಶಗಳ ಏರಿಕೆಯೊಂದಿಗೆ 10,651 ಅಂಶಗಳಿಗೆ ತಲುಪಿತು.

‘ಶುಕ್ರವಾರ ಪ್ರಕಟವಾಗಲಿರುವ ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು ಏರಿಕೆಯಾಗುವ ಸಾಧ್ಯತೆ ಇದೆ.  ಇದು ಹೂಡಿಕೆದಾರರು ಎಚ್ಚರದಿಂದ ವಹಿವಾಟು ನಡೆಸುವಂತೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry