ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ 30ರಿಂದ

7

ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ 30ರಿಂದ

Published:
Updated:

ಬೆಂಗಳೂರು: ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ನಿರ್ಧರಿಸಿದೆ.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಎಸ್‌.ನಾಗರಾಜು, ‘ಇದೇ 25ರಂದು ಎಲ್ಲಾ ವಿಭಾಗಗಳ ಕಚೇರಿಗಳ ಮುಂದೆ ಶಾಂತಿಯುತ ಧರಣಿ ನಡೆಸಲಾಗುವುದು. ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನೌಕರರ ವೇತನದಲ್ಲಿ ತಡೆ ಹಿಡಿದಿರುವ ಜೀವ ವಿಮಾ ಪ್ರೀಮಿಯಂ ಮೊತ್ತ, ಸರ್ಕಾರಿ ನೌಕರರ ಸಂಘಗಳಿಗೆ ಕೊಡಬೇಕಾದ ಹಣ, ಡಿಆರ್‌ಬಿಎಫ್‌ ವಂತಿಗೆಗಳನ್ನು ಸಂಬಂಧಪಟ್ಟವರಿಗೆ ಕಾಲಕಾಲಕ್ಕೆ ಕಳುಹಿಸುತ್ತಿಲ್ಲ. ಪ್ರೀಮಿಯಂ ಹಣ ಕಟ್ಟಿಲ್ಲದ ಕಾರಣಕ್ಕೆ ಪಾಲಿಸಿ ಲ್ಯಾಪ್ಸ್‌ ಆಗಿದೆ ಎಂದು ನೌಕರರ ಮೊಬೈಲ್‌ಗೆ ವಿಮಾ ಸಂಸ್ಥೆಗಳಿಂದ ಸಂದೇಶಗಳು ಬರುತ್ತಿವೆ. ಬಡ್ಡಿ ಸಮೇತ ಪ್ರೀಮಿಯಂ ಹಣ ಪಾವತಿ ಮಾಡಿ ಎಂದು ವಿಮಾ ಸಂಸ್ಥೆಗಳು ನೋಟಿಸ್‌ ನೀಡುತ್ತಿವೆ. ಹಾಗಾದರೆ, ನೌಕರರ ವೇತನದಲ್ಲಿ ಕಡಿತವಾದ ಹಣ ಏನಾಗಿದೆ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry