ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ವಿಚಾರ, ಚಾಣಕ್ಯ ನೀತಿ ಅನುಸರಿಸುವ ನರೇಂದ್ರ ಮೋದಿ ವಿಶ್ವಗುರುವಾಗಲಿದ್ದಾರೆ: ಪ್ರಹ್ಲಾದ ‌ಮೋದಿ

Last Updated 12 ಜನವರಿ 2018, 7:49 IST
ಅಕ್ಷರ ಗಾತ್ರ

ಬೆಂಗಳೂರು: ವಿವೇಕಾನಂದರ ವಿಚಾರ, ಚಾಣಕ್ಯನ ನೀತಿಯನ್ನು ಒಟ್ಟುಗೂಡಿಸಿಕೊಂಡು ನರೇಂದ್ರ ಮೋದಿ ವಿಶ್ವಗುರುವಾಗಲು ಮುಂದಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ ದಾಮೋದರ ದಾಸ ‌ಮೋದಿ ಹೇಳಿದರು.

ನಗರದ ಬನಶಂಕರಿಯ ಶ್ರೀಕೃಷ್ಣ ಶಾಲೆಯಲ್ಲಿ ಶುಕ್ರವಾರ ನಡೆಯುತ್ತಿರುವ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ - ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರು ದೇಶದ ಆಂತರಿಕ ಸುರಕ್ಷತೆಯ ವಿಷಯದಲ್ಲಿ ಮಾತೃಭೂಮಿಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇಂತಹ ಸಂಘಟನೆಯನ್ನು ಉಗ್ರ ಸಂಘಟನೆ ಎನ್ನುವುದು, ಇದನ್ನು ನಿಷೇಧಿಸಬೇಕು ಎಂಬುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪ್ರಹ್ಲಾದ ದಾಮೋದರ ದಾಸ ಮೋದಿ ಪ್ರತಿಕ್ರಿಯಿಸಿದರು.

ಕಾರ್ಯಕ್ರಮದಲ್ಲಿ ಕೆಎಎಸ್ ಅಧಿಕಾರಿ ಕೆ.ಮಥಾಯ್, ಪ್ರಹ್ಲಾದ ದಾಮೋದರ ದಾಸ ಮೋದಿ, ಶ್ರೀಕೃಷ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ. ರುಕ್ಮಾಂಗದ ನಾಯ್ಡು ಮತ್ತಿತರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT