ಅಮೆರಿಕದಲ್ಲಿ ಧರ್ಮವಾರು ಜನಸಂಖ್ಯೆ: 2040ರ ವೇಳೆಗೆ ಎರಡನೇ ಸ್ಥಾನಕ್ಕೇರಲಿದ್ದಾರೆ ಮುಸ್ಲಿಮರು

7

ಅಮೆರಿಕದಲ್ಲಿ ಧರ್ಮವಾರು ಜನಸಂಖ್ಯೆ: 2040ರ ವೇಳೆಗೆ ಎರಡನೇ ಸ್ಥಾನಕ್ಕೇರಲಿದ್ದಾರೆ ಮುಸ್ಲಿಮರು

Published:
Updated:
ಅಮೆರಿಕದಲ್ಲಿ ಧರ್ಮವಾರು ಜನಸಂಖ್ಯೆ: 2040ರ ವೇಳೆಗೆ ಎರಡನೇ ಸ್ಥಾನಕ್ಕೇರಲಿದ್ದಾರೆ ಮುಸ್ಲಿಮರು

ವಾಷಿಂಗ್ಟನ್‌: ‘ಅಮೆರಿಕದಲ್ಲಿನ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುಂದಿನ ಎರಡು ದಶಕಗಳ ಅವಧಿಯಲ್ಲಿ ಇಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದ ಧರ್ಮಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ’ ಎಂದು ಪ್ಯೂ ರಿಸರ್ಚ್‌ ಸೆಂಟರ್‌ ಅಧ್ಯಯನ ವರದಿ ನೀಡಿದೆ.

ಅಧ್ಯಯನಕ್ಕೆ 2007, 2011 ಹಾಗೂ 2017ರ ಅಂಕಿ ಅಂಶಗಳನ್ನು ಬಳಸಿಕೊಂಡಿರುವ ಪ್ಯೂ ರಿಸರ್ಚ್‌ ಸೆಂಟರ್‌ ಮುಸ್ಲಿಮರ ಜನಸಂಖ್ಯೆಯಲ್ಲಿನ ಹೆಚ್ಚಳವನ್ನು ಗುರುತಿಸಿದೆ. ಅದರಂತೆ 2017ರಲ್ಲಿ 34.5 ಲಕ್ಷ ಇರುವ ಮುಸ್ಲಿಮರು 2050ರ ವೇಳೆಗೆ 81 ಲಕ್ಷ ದಾಟಲಿದ್ದಾರೆ. ಜತೆಗೆ 2040ರ ವೇಳೆಗೆ ಯಹೂದಿಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಲಿದ್ದಾರೆ ಎಂದು ಹೇಳಲಾಗಿದೆ.

ಹೆಚ್ಚಾಗುತ್ತಿರುವ ವಲಸೆ ಪ್ರಮಾಣ ಹಾಗೂ ಜನನ ಪ್ರಮಾಣ ಮುಸ್ಲಿಂ ಜನಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದ್ದು, ಅಮೆರಿಕದಲ್ಲಿರುವ ಮೂರನೇ ಒಂದರಷ್ಟು ಮುಸ್ಲಿಮರು ವಲಸಿಗರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧ್ಯಯನದಲ್ಲಿ ಭಾಗವಹಿಸಿದ್ದ ಹಿರಿಯ ಸಂಶೋಧಕ ಬೆಷೀರ್‌ ಮೊಹಮದ್‌, ‘ದಶಕಕ್ಕೂ ಹೆಚ್ಚು ಕಾಲದಿಂದ ಪಾಕಿಸ್ತಾನ, ಇರಾನ್‌, ಭಾರತ ಹಾಗೂ ಅಫ್ಘಾನಿಸ್ತಾನ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಅಮೆರಿಕಕ್ಕೆ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಎನ್‌ಬಿಸಿ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸದ್ಯ ಅಮೆರಿಕದಲ್ಲಿ ಕ್ರಿಶ್ಚಿಯನ್ನರು ಅಧಿಕ ಪ್ರಮಾಣದಲ್ಲಿದ್ದು, 2020 ವೇಳೆಗೆ ಈ ಧರ್ಮದವರ ಸಂಖ್ಯೆ 25.2 ಕೋಟಿ ಮೀರಲಿದೆ. ಇದು ಸದ್ಯ ಇರುವ ಮುಸ್ಲಿಂ ಜನಸಂಖ್ಯೆಗಿಂತ 70 ರಷ್ಟು ಹೆಚ್ಚು ಇರಲಿದೆ.

2050ರ ವೇಳೆಗೆ ಕ್ರಿಶ್ಚಿಯನ್ನರ ಸಂಖ್ಯೆ 26.1 ಕೋಟಿ ದಾಟಲಿದೆ. ಆ ವೇಳೆಗೆ ಎರಡನೇ ಸ್ಥಾನದಲ್ಲಿರಲಿರುವ ಮುಸ್ಲಿಮರ ಸಂಖ್ಯೆ ಕೇವಲ ಶೇ. 2.1ರಷ್ಟು ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry