ಬಾಣಂತಿ ಸಾವಿಗೆ ಕೊನೆ ಇಲ್ಲವೇ?

7

ಬಾಣಂತಿ ಸಾವಿಗೆ ಕೊನೆ ಇಲ್ಲವೇ?

Published:
Updated:
ಬಾಣಂತಿ ಸಾವಿಗೆ ಕೊನೆ ಇಲ್ಲವೇ?

ಬಾಣಂತಿಯರ ಸಾವಿನ ಪ್ರಮಾಣವು ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಅಧಿಕ. ಹಿಂದುಳಿದ ಪ್ರದೇಶವಾಗಿರುವ ಹೈದರಾಬಾದ್‌ ಕರ್ನಾಟಕದಲ್ಲಿ ಇದು ಇನ್ನೂ ಹೆಚ್ಚು.

ರಕ್ತಹೀನತೆ, ರಕ್ತದ ಅತಿ ಒತ್ತಡ, ಪ್ರಸವ ನಂತರ ತೀವ್ರ ರಕ್ತಸ್ರಾವ, ಸೋಂಕು...

ಇವು ಹೆರಿಗೆ ಸಂದರ್ಭದಲ್ಲಿ ಮತ್ತು ನಂತರದ ಕೆಲ ದಿನಗಳ ಅವಧಿಯಲ್ಲಿ ತಾಯಿಯ ಸಾವಿಗೆ ಪ್ರಮುಖ ಕಾರಣಗಳಾಗುತ್ತಿವೆ. ಪ್ರಸವ ನಂತರದ ಸೋಂಕುಗ

ಳಿಗೆ ತಾಯಿ ಸುಲಭವಾಗಿ ತುತ್ತಾಗಲು ರಕ್ತಹೀನತೆ ಪ್ರಮುಖ ಕಾರಣವಾಗುತ್ತಿದೆ. ಇದು ಬಹುಪಾಲು ತಾಯಂದಿರ ಪ್ರಾಣಕ್ಕೆ ಎರವಾಗುತ್ತಿದೆ. ಕಾಮಾಲೆ ಮತ್ತು ಅಪೌಷ್ಟಿಕತೆ ನವಜಾತ ಶಿಶುಗಳ ಪ್ರಾಣ ಹಿಂಡುತ್ತಿವೆ.

ಪ್ರಸೂತಿ ಆರೈಕೆ, ಮಡಿಲು, ತಾಯಿಭಾಗ್ಯ, ಜನನಿ ಸುರಕ್ಷಾ, ತಾಯಂದಿರ ಆರೋಗ್ಯ ತರಬೇತಿ... ಹೀಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೂ, ಮಾತೃಮರಣ ಪ್ರಮಾಣ ಕಡಿಮೆಯಾಗುತ್ತಿಲ್ಲ.

ಮದುವೆ ಮಾಡುವುದೇ ದೊಡ್ಡ ಸಾಹಸ. ಮುಂದೆ ಮಗಳು ಮತ್ತು ಆಕೆಯ ಮಗುವಿನ ಚಿಕಿತ್ಸೆಗೆ ಮತ್ತೆ ಸಾಲ ಮಾಡುವ ದುಃಸ್ಥಿತಿ ಬಡ ಪೋಷಕರದು. ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಬೇಕು ಎಂಬ ಜಾಗೃತಿ ಗ್ರಾಮೀಣ ಪ್ರದೇಶದವರಲ್ಲಿಯೂ ಹೆಚ್ಚಿದೆ. ಇದರಿಂದಾಗಿ ಮನೆಯಲ್ಲೇ ಹೆರಿಗೆ ಕಡಿಮೆಯಾಗುತ್ತಿದೆ ಎಂಬುದು ನಿಜ. ಆದರೆ ಪ್ರಸವಪೂರ್ವ ಮತ್ತು ಪ್ರಸವದ ನಂತರದ ಆರೈಕೆ, ಗುಣಮಟ್ಟದ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಕುಟುಂಬಗಳ ವಲಸೆ ಸಮಸ್ಯೆಯೂ ಇದಕ್ಕೆ ಕಾರಣ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಟೆಂಗಳಿಯ ಜಯಶ್ರೀ ಅವರ ದುರಂತ ಅಂತ್ಯದ ಕತೆ ಹೀಗಿದೆ... ಜಯಶ್ರೀ ಅವರನ್ನು ಹುಚ್ಚೇಶ್ವರ ಹಡಪದ ಅವರ ಜೊತೆ ವಿವಾಹ ಮಾಡಿಕೊಡಲಾಯಿತು. ಈ ದಂಪತಿ ದುಡಿಯಲು ಬೆಂಗಳೂರಿಗೆ ಹೋದರು. ಗರ್ಭವತಿಯಾದ ಐದು ತಿಂಗಳಿಗೆ ಊರಿಗೆ ವಾಪಸಾದ ಜಯಶ್ರೀ, ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು. ಅಲ್ಲಿ ಅವರ ‘ತಾಯಿ ಕಾರ್ಡ್‌’ ಸಹ ಮಾಡಲಾಯಿತು. ಪತಿಯ ತಂದೆ ವೀರಭದ್ರ ಅವರು ಕಲಬುರ್ಗಿ ಎಪಿಎಂಸಿಯಲ್ಲಿ ಹಮಾಲಿ. ಕಲಬುರ್ಗಿಯಲ್ಲಿ ಮನೆ ಮಾಡಿಕೊಂಡಿದ್ದಾರೆ. ಒಳ್ಳೆಯ ಚಿಕಿತ್ಸೆ ಕೊಡಿಸಲು ಸೊಸೆಯನ್ನು ಕಲಬುರ್ಗಿಗೆ ಕರೆತಂದರು.

ಕಲಬುರ್ಗಿಯಲ್ಲಿ ಖಾಸಗಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಬಳಿ ಚಿಕಿತ್ಸೆ ಕೊಡಿಸಿದರು. ಹೆರಿಗೆಗೆ ತವರೂರು ಚಿತ್ತಾಪುರ ತಾಲ್ಲೂಕು ಹೆಬ್ಬಾಳಕ್ಕೆ ಕಳಿಸಿದರು. ಹೆಬ್ಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಯಿತು. ತಾಯಿ–ಮಗಳು ಇಬ್ಬರೂ ಆರೋಗ್ಯವಾಗಿದ್ದರು.

‘ಹೆರಿಗೆಯ ಮರುದಿನವೇ ಆಸ್ಪತ್ರೆಯವರು ಮನೆಗೆ ಕಳಿಸಿದರು. ದಿನ ಉರುಳುವಷ್ಟರಲ್ಲಿ ಮಗು ಅನಾರೋಗ್ಯಕ್ಕೆ ಈಡಾಯಿತು. ಕಲಬುರ್ಗಿಯ ದೊಡ್ಡ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದೆ. ಕೆಲ ದಿನಗಳ ನಂತರ ತಾಯಿಗೂ ವಿಪರೀತ ಜ್ವರ. ಇಬ್ಬರನ್ನೂ ಒಂದೇ ಆಸ್ಪತ್ರೆಗೆ ಸೇರಿಸಿದೆ. ತಾಯಿ ಚಿಕಿತ್ಸೆಗೆ 40 ಸಾವಿರ ರೂಪಾಯಿ ಕಟ್ಟಬೇಕಾಗುತ್ತದೆ ಎಂದರು ಆಸ್ಪತ್ರೆಯವರು. ಅಷ್ಟರಲ್ಲಿ ನನ್ನ ಹತ್ತಿರ ಇದ್ದ ಹಣವೆಲ್ಲ ಖಾಲಿ ಆಗಿತ್ತು. ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆ. ಆಗ ನನ್ನ ಬಳಿ ಇದ್ದದ್ದು 200 ರೂಪಾಯಿ ಮಾತ್ರ. ಅಲ್ಲಿದ್ದವರಿಂದ 100 ರೂಪಾಯಿ ಕೈಗಡ ಪಡೆದು ಆಂಬುಲೆನ್ಸ್‌ನವರಿಗೆ 300 ರೂಪಾಯಿ ಕೊಟ್ಟು ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಿದೆ. ಫಿಟ್ಸ್‌ ಬಂದು ಆಕೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಳು. ಶವ ಊರಿಗೆ ಒಯ್ಯಲು 2,600 ರೂಪಾಯಿ ಖರ್ಚಾಯಿತು. ಊರವರು ಹಣ ಹೊಂದಿಸಿಕೊಟ್ಟರು’ ಎನ್ನುತ್ತ ಮೌನಕ್ಕೆ ಶರಣಾದರು ವೀರಭದ್ರ.

‘ಮೊಮ್ಮಗಳು ಈಗ ಅಜ್ಜಿ ಮನೆಯಲ್ಲಿ (ತಾಯಿ ತವರು) ಇದ್ದಾಳೆ. ಆಕೆಗೆ ಭಾಗ್ಯಲಕ್ಷ್ಮಿ ಬಾಂಡ್‌ ಮಾಡಿಕೊಡಿ ಎಂದರೆ ಏನೇನೋ ದಾಖಲೆ ಕೇಳುತ್ತಿದ್ದಾರೆ’ ಎಂದು ಅಲವತ್ತುಕೊಂಡರು.

ಕಲಬುರ್ಗಿ ತಾಲ್ಲೂಕು ಅಷ್ಟಗಾ ಗ್ರಾಮದ ಮಲ್ಲಮ್ಮ ಅವರದ್ದು ಇನ್ನೊಂದು ಮನಕಲಕುವ ಪ್ರಕರಣ. ಮಲ್ಲಮ್ಮ ಪದವೀಧರೆ. ಆಳಂದ ತಾಲ್ಲೂಕು ಬಸವಂತವಾಡಿಯ ಬಸವರಾಜ ಬಿರಾದಾರ ಅವರೊಂದಿಗೆ ಮದುವೆ ಆಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸಿಜೇರಿಯನ್‌ನ ಹೊಲಿಗೆ ತೆಗೆಯುವ ಸಮಯದಲ್ಲಿ ಆರಂಭವಾದ ರಕ್ತಸ್ರಾವ ನಿಯಂತ್ರಣಕ್ಕೆ ಬಾರದೆ ಅವರು ಮೃತಪಟ್ಟರು.

ಅಷ್ಟಗಿ ಗ್ರಾಮದ ಮನೆಯಲ್ಲಿ ಅಳುತ್ತಲೇ ಮಾತು ಆರಂಭಿಸಿದ ಮಲ್ಲಮ್ಮ ಅವರ ತಾಯಿ ವಿಮಲಾಬಾಯಿ ನೀಲಕಂಠ ನಿಡಂಚಿ, ‘ಗುಲ್ಬರ್ಗಾದ ದವಾಖಾನಿ ಡಾಕ್ಟರ್‌ ಆಪರೇಷನ್‌ನ್ಯಾಗ ಫಾಲ್ಟ್‌ ಮಾಡಿದ್ದರಿಂದ ನಮ್‌ ಮಗ್ಳು ಸತ್ಲು’ ಎಂದು ಹಣೆಗೆ ಕೈಹಚ್ಚಿ ಕೂತರು.

‘ಮಲ್ಲಮ್ಮಳದ್ದು ಬಾಲ್ಯ ವಿವಾಹ ಅಲ್ಲ. ಹತ್ತಿರದ ರಕ್ತ ಸಂಬಂಧದಲ್ಲೂ ವಿವಾಹ ಮಾಡಿಲ್ಲ’ ಎಂದು ದನಿಗೂಡಿಸಿದರು ಮಲ್ಲಮ್ಮಳ ಅಕ್ಕ ಸುಧಾರಾಣಿ.

‘ಹೊಲಿಗಿ ಬಿಚ್ಚಿದ್‌ಮ್ಯಾಗ್‌ ರಕ್ತ ಹಂಗ ಸೋರಾಕ್‌ ಹತ್ತಿತ್ತು. ಅಲ್ಲಿ ಡಾಕ್ಟರ್‌ ಒಳಗ ಕರಕೊಂಡ ಹ್ವಾದ್ರು. ಸತ್ನೆ ಯವ್ವಾ... ಬಿಡ್ರೆ ಯವ್ವಾ... ಎಂದು ಮಗ್ಳು ಚೀರಿದ್‌ ಕೇಳ್ಸಿತು. ಅಲ್ಲಿ ಏನ್‌ ಮಾಡಿದ್ರೊ ಏನೋ?’ ಎಂದು ರೋದಿಸಲಾರಂಭಿಸಿದರು ವಿಮಲಾಬಾಯಿ.

‘ಕೂಸು ಹುಟ್ಟಿದಾಗ ಎರಡ್‌ ಕಿಲೋ ಇತ್ತು. ಕಾಮನಿ (ಕಾಮಾಲೆ) ಆಗೇತಿ ಅಂತ ಹೇಳಿ ಕಾಜಿನ್ಯಾಗ (ಇನ್‌ಕ್ಯುಬೇಟರ್‌) ಇಟ್ರು. ಅದ್ಕೂ ಭಾಳ್‌ ರೊಕ್ಕಾ ಹಾಕ್ದಿವಿ. 7–8 ತಿಂಗಳ ಪೌಡರ್‌ ಹಾಲು ಕೊಟ್ವಿ. ಈಗ ಆಕಳ ಹಾಲು ಹಾಕಾಕತ್ತೀವಿ. ಆಕಿ ಅಜ್ಜ ಆಕಳಾ ತಂದಾನ’ ಎಂದು 10 ತಿಂಗಳ ಮೊಮ್ಮಗ ಮಹಾದೇವನನ್ನು ಅಪ್ಪಿಕೊಂಡರು.

‘ಈ ಮಗುವಿನ ಚಿಕಿತ್ಸೆಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಬೇಕು. ತವರಿನವರಿಗೂ ಇರಲು ಸ್ವಂತ ಮನೆ ಇಲ್ಲ– ಜಮೀನು ಇಲ್ಲ. ಸಾಲ ಮಾಡಿ ಮದುವೆ ಮಾಡಿದ್ದಾರೆ. ಮಲ್ಲಮ್ಮಳ ಚಿಕಿತ್ಸೆಗೂ ಸಾಲ ಮಾಡಿದ್ದಾರೆ. ಈಗ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸುವುದೂ ಕಷ್ಟವಾಗುತ್ತಿದೆ’ ಎಂದು ಕಣ್ಣೀರಾದರು ಸುಧಾರಾಣಿ.

‘ಇಷ್ಟೆಲ್ಲ ಆದ್ರೂ ಸರ್ಕಾರಿ ಆಸ್ಪತ್ರೆಯವರು ಬಂದಿಲ್ಲ. ಕೂಸು ಹೆಂಗೈತಿ ಅಂತ ಕೇಳಿಲ್ಲ. ಈಗ ಅಂಗನವಾಡಿ ಅವ್ರು ಬಂದ್‌ ಪೌಡರ್‌ (ಪೌಷ್ಟಿಕ ಆಹಾರ) ಒಯ್ರಿ ಅಂತಾರ. ನಾವು ಆ ಪೌಡರ್‌ ತಂದಿಲ್ಲ’ ಎಂದರು ವಿಮಲಾಬಾಯಿ. ತಾಯಿ ಮರಣ–ಅನಾಥ ಶಿಶುಗಳ ಪಾಲನೆಯ ವಿಷಯದಲ್ಲಿ ಅದೆಷ್ಟೋ ಕುಟುಂಬಗಳು ಹೀಗೆ ನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿವೆ.

ತಾಯಿ ಮರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅಂಕಿ ಅಂಶ ಕೊಡುತ್ತದೆ. (ಕೋಷ್ಟಕದಲ್ಲಿದೆ) ಆದರೆ, ‘ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಇಂತಹ ಬಹುಪಾಲು ಸಾವುಗಳು ದಾಖಲಾಗದೇ ಹೋಗುತ್ತಿವೆ’ ಎನ್ನುತ್ತಾರೆ ಕರ್ನಾಟಕ ಜನಾರೋಗ್ಯ ಚಳವಳಿಯ ಕಲಬುರ್ಗಿ ಜಿಲ್ಲಾ ಸಂಚಾಲಕಿ ಟೀನಾ ಝೇವಿಯರ್‌.

‘ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ಒಂಬತ್ತು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ತಪಾಸಣೆ ಮತ್ತು ಒಂದು ಬಾರಿಯಾದರೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಂದ ಸಲಹೆ ದೊರೆಯುವುದು ದುಸ್ತರವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಯಂತ್ರ ಇರಲ್ಲ. ತಾಲ್ಲೂಕು ಆಸ್ಪತ್ರೆಗಳಲ್ಲಿ ಯಂತ್ರ ಇದ್ದರೂ ರೇಡಿಯಾಲಜಿಸ್ಟ್‌ ಇರಲ್ಲ. ಹೀಗಾಗಿ ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅವರಿಗೆ ಆರೋಗ್ಯ ಶಿಕ್ಷಣವೂ ದೊರೆಯುವುದಿಲ್ಲ’ ಎಂದು ಅವರು ಹೇಳುತ್ತಾರೆ.

‘ಕಲಬುರ್ಗಿಯ ಆರು ತಾಲ್ಲೂಕು ಆಸ್ಪತ್ರೆಗಳಲ್ಲಿ ಮೂರರಲ್ಲಿ ಅರಿವಳಿಕೆ ತಜ್ಞರು ಇಲ್ಲ. ತಾಲ್ಲೂಕು ಆಸ್ಪತ್ರೆಗಳಿಗೆ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಯಂತ್ರಗಳನ್ನು ಸರ್ಕಾರ ಪೂರೈಸಿದೆ. ಜೇವರ್ಗಿ ಹೊರತುಪಡಿಸಿದರೆ ಉಳಿದ ತಾಲ್ಲೂಕು ಆಸ್ಪತ್ರೆಗಳಿಗೆ ರೇಡಿಯಾಲಜಿಸ್ಟ್‌ ಹುದ್ದೆಗಳ ಮಂಜೂರಾತಿಯೂ ಇಲ್ಲ. ನಾವು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ಸಮಜಾಯಿಷಿ ನೀಡುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎ.ಎಸ್‌. ರುದ್ರವಾಡಿ.

ಮೃತಪಟ್ಟ ತಾಯಂದಿರ ಕುಟುಂಬಗಳನ್ನು ಕರ್ನಾಟಕ ಜನಾರೋಗ್ಯ ಚಳವಳಿಯವರು ಭೇಟಿಯಾಗಿ, ಪ್ರಸವಪೂರ್ವ ಆರೈಕೆ, ಅವರು ಚಿಕಿತ್ಸೆಗೆ ದಾಖಲಾದ ಆಸ್ಪತ್ರೆಗಳು, ಎದುರಾದ ತೊಡಕು ಹಾಗೂ ಮರಣಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದ್ದಾರೆ (ವಿವರಗಳು ಕೋಷ್ಟಕದಲ್ಲಿವೆ).

‘ನಾವು ಅಧ್ಯಯನ ನಡೆಸಿದ 48 ಪ್ರಕರಣಗಳಲ್ಲಿ ಒಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಜಿಲ್ಲಾ ಆಸ್ಪತ್ರೆಯಂತಹ ತುರ್ತು ಪರಿಸ್ಥಿತಿ ನಿಭಾಯಿಸಲು ಸಾಮರ್ಥ್ಯ ಹೊಂದಿರುವ ಆಸ್ಪತ್ರೆ ತಲುಪಿದ್ದರು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆತಿದ್ದರೆ ಅವರೆಲ್ಲ ಬದುಕುಳಿಯಬಹುದಿತ್ತು. ಆಸ್ಪತ್ರೆಗೆ ತೆರಳುವಲ್ಲಿ ಆದ ವಿಳಂಬ, ಅಸಮರ್ಪಕ ವೈದ್ಯಕೀಯ ಸೇವೆ ಮತ್ತು ಖಾಸಗಿ ಆಸ್ಪತ್ರೆಯವರು ಕೊನೆ ಗಳಿಗೆಯಲ್ಲಿ ಇನ್ನೊಂದು ಆಸ್ಪತ್ರೆಗೆ ಸಾಗಹಾಕುವುದು– ಇವು ತಾಯಂದಿರ ಮರಣಕ್ಕೆ ಕಾರಣವಾಗಿವೆ’ ಎನ್ನುವುದು ಅವರ ವಿವರಣೆ.

‘ಸಾಮಾನ್ಯ ಹೆರಿಗೆಯಾದರೂ 48ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇಟ್ಟುಕೊಳ್ಳಬೇಕು. ಬೆಡ್‌ ಕೊರತೆ, ಮನೆಯವರ ಕೋರಿಕೆ ಮತ್ತಿತರ ಕಾರಣಗಳಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮನೆಗೆ ಕಳಿಸಲಾಗುತ್ತಿದೆ. ಪ್ರಸವ ನಂತರದ ಅವಧಿಯಲ್ಲಿ ಸಂಭವಿಸಿದ ತಾಯಂದಿರ ಸಾವಿನ ಪ್ರಮಾಣ ಶೇ 82ರಷ್ಟು. ಹೆರಿಗೆಯ 3ನೇ ಹಾಗೂ 4ನೇ ಹಂತಗಳ ನಿರ್ವಹಣೆಯ ಗಂಭೀರ ಲೋಪವೇ ಇದಕ್ಕೆ ಕಾರಣ’ ಎನ್ನುತ್ತಾರೆ ಅವರು.

ಆಂಬುಲೆನ್ಸ್‌ ಸೇವೆಯ ಕೊರತೆ ಇನ್ನೊಂದು ಬಗೆಯದು. ‘ನಾವು ಅಧ್ಯಯನ ನಡೆಸಿದ 48 ಪ್ರಕರಣಗಳಲ್ಲಿ ಐವರಿಗೆ ಮಾತ್ರ ಆಂಬುಲೆನ್ಸ್‌ ಸೇವೆ ಸಮರ್ಪಕವಾಗಿ ದೊರೆತಿತ್ತು’ ಎನ್ನುತ್ತಾರೆ ಚಳವಳಿಯವರು. ಸಂತ್ರಸ್ತ ಕುಟುಂಬದವರೊಬ್ಬರು ಹೇಳಿದ ಆಂಬುಲೆನ್ಸ್‌ ಕತೆ ಹೀಗಿದೆ, ‘ಹೆರಿಗೆಯ ನಂತರ ಬಾಣಂತಿಯು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತಿ ರಕ್ತಸ್ರಾವಕ್ಕೆ ಒಳಗಾದರು. ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಿದೆವು. ಆಂಬುಲೆನ್ಸ್‌ ಬರುವ ಹೊತ್ತಿಗೆ ಒಂದೂವರೆ ಗಂಟೆ ಉರುಳಿತ್ತು. ವೈದ್ಯರು ಮತ್ತು ನರ್ಸ್‌ ನಮ್ಮೊಟ್ಟಿಗೆ ಅದೇ ಆಂಬುಲೆನ್ಸ್‌ನಲ್ಲಿ ಬಂದರು. ಆದರೆ, 45 ನಿಮಿಷದ ನಂತರ ಮಾರ್ಗಮಧ್ಯೆಯೇ ಆಕೆ ಮೃತಪಟ್ಟರು’.

‘ಈಗ ಜಿಲ್ಲೆಯಲ್ಲಿ ಆರೋಗ್ಯ ಕವಚ (108) ಆಂಬುಲೆನ್ಸ್‌ಗಳು 25 ಹಾಗೂ ನಮ್ಮ ಇಲಾಖೆಯ 33 ಆಂಬುಲೆನ್ಸ್‌ ಇವೆ. ಪ್ರತಿ ಹತ್ತು ಕಿ.ಮೀ.ಗೊಂದು ಆಂಬುಲೆನ್ಸ್‌ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ’ ಎನ್ನುತ್ತಾರೆ ಡಿಎಚ್‌ಒ. ಜಿಲ್ಲೆಯ ಆರು ತಾಲ್ಲೂಕು ಆಸ್ಪತ್ರೆಗಳಲ್ಲಿ ಮೂರರಲ್ಲಿ ಅರಿವಳಿಕೆ ತಜ್ಞರು ಇಲ್ಲ. ಹೀಗಾಗಿ ಅಲ್ಲಿ ಸಿಜೇರಿಯನ್‌ ಸೇವೆ ದೊರೆಯುತ್ತಿಲ್ಲ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ, ವೈದ್ಯರು ಇಲ್ಲದ ಕಾರಣ ಗರ್ಭಿಣಿ–ಬಾಣಂತಿಯರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಹಾಕಲಾಗುತ್ತಿದ್ದು, ಜಿಲ್ಲಾ ಆಸ್ಪತ್ರೆಯ ಮೇಲೆ ಹೊರೆ ಹೆಚ್ಚಾಗಿದೆ. ಒಂದೇ ಹಾಸಿಗೆಯಲ್ಲಿ 2–3 ಮಕ್ಕಳನ್ನು ಹಾಕುವ ಸ್ಥಿತಿ ಇದೆ.

‘ಯಾವ ವೈದ್ಯರೂ ರೋಗಿಯ ಸಾವು ಬಯಸುವುದಿಲ್ಲ. ನಾವು ಕೇಂದ್ರ ಸ್ಥಳದಲ್ಲಿಯೇ ತಂಗಲು ಕನಿಷ್ಠ ಸೌಲಭ್ಯ ಇರುವ ವಸತಿಗೃಹ ಇಲ್ಲ. ವಾಹನ ಸೌಲಭ್ಯ ಇಲ್ಲ. ಇಷ್ಟೆಲ್ಲ ಇಲ್ಲಗಳ ಮಧ್ಯೆಯೂ ನಾವು ಉತ್ತಮ ಸೇವೆ ನೀಡುತ್ತಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್‌ ಕೊಟ್ಟರೆ ಅನುಕೂಲ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೊಬ್ಬರು.

‘ಅಪೌಷ್ಟಿಕತೆ, ಗಂಡು ಮಗು ಬೇಕು ಎಂಬ ಹಪಹಪಿಯಿಂದ ಹೆಚ್ಚು ಮಕ್ಕಳನ್ನು ಹೆರುವುದು, ಎರಡು ಹೆರಿಗೆ ನಡುವೆ ಕಡಿಮೆ ಅಂತರ ಮತ್ತು ಕೌಟುಂಬಿಕ ಸಮಸ್ಯೆಗಳು ತಾಯಿಯ ಸಾವಿಗೆ ಕಾರಣವಾಗುತ್ತಿವೆ. ಗರ್ಭಿಣಿರಿಗೆ ನಾವು ಆಪ್ತಸಮಾಲೋಚನೆ ನೀಡುತ್ತೇವೆ. ಬಹುಪಾಲು ಪ್ರಕರಣಗಳಲ್ಲಿ ಗರ್ಭಿಣಿಯನ್ನು ಮಾತ್ರ ಆಸ್ಪತ್ರೆಗೆ ಕಳಿಸುತ್ತಾರೆ. ಪೌಷ್ಟಿಕ ಆಹಾರ ಸೇವನೆ–ಆರೈಕೆಯ ಬಗೆಗೆ ನಾವು ಆಕೆಗೆ ತಿಳಿವಳಿಕೆ ನೀಡಿದರೂ ಪ್ರಯೋಜನವಾಗುವುದಿಲ್ಲ. ಏಕೆಂದರೆ ಬಹುಪಾಲು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸಬಲತೆ– ಬೇಕಿದ್ದನ್ನು ಮಾಡಿಕೊಳ್ಳುವ ಇಲ್ಲವೇ ಖರೀದಿಸಿ ತಿನ್ನುವ ಸ್ವಾತಂತ್ರ್ಯವೂ ಇರುವುದಿಲ್ಲ. ಗಂಡ ಅಥವಾ ಅತ್ತೆಯನ್ನು ಜೊತೆಗೆ ಕರೆದುಕೊಂಡು ಬನ್ನಿ ಎಂದು ನಾವೇ ಅವರನ್ನು ಒತ್ತಾಯಿಸುತ್ತೇವೆ’ ಎನ್ನುತ್ತಾರೆ ಅವರು.

‘ಹೆರಿಗೆಗೆ ತವರಿಗೆ ಹೋಗುವುದು ಸಂಪ್ರದಾಯದಂತೆ ಪಾಲನೆಯಾಗುತ್ತಿದೆ. ಹೀಗಾಗಿ ಆ ಗರ್ಭಿಣಿಗೆ ಒಂದೇ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ದೊರೆಯುವುದಿಲ್ಲ. ರಕ್ತಹೀನತೆ ಮತ್ತಿತರ ಗಂಭೀರ ಸಮಸ್ಯೆ ಇದ್ದರೆ ತಾಯಿ ಕಾರ್ಡ್‌ನಲ್ಲಿ ನಾವು ಅದನ್ನು ದಾಖಲಿಸಿರುತ್ತೇವೆ. ಇನ್ನೊಂದು ಆಸ್ಪತ್ರೆಯವರು ಅದನ್ನು ಗಮನಿಸಿ ವಿಶೇಷ ಕಾಳಜಿ ವಹಿಸುವ ಕೆಲಸವಾಗಬೇಕು’ ಎಂಬುದು ಮಹಿಳಾ ವೈದ್ಯಾಧಿಕಾರಿಯೊಬ್ಬರ ಕಳಕಳಿ.

‘ಗರ್ಭವತಿಯಾದ ನಾಲ್ಕನೇ ತಿಂಗಳಿಗೆ ಸ್ಕ್ಯಾನಿಂಗ್‌ ಮಾಡಿಸಬೇಕಾಗುತ್ತದೆ. ಸ್ಕ್ಯಾನಿಂಗ್‌ ವ್ಯವಸ್ಥೆಯು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಲ್ಲ. ಆಗ ಅನಿವಾರ್ಯವಾಗಿ ಅವರು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ. ಅಲ್ಲಿಂದ ಅವರ ಸುಲಿಗೆ ಆರಂಭಗೊಳ್ಳುತ್ತದೆ. ಖಾಸಗಿ ಆಸ್ಪತ್ರೆಗೆ ತೆರಳುವ ಕಡುಬಡವರೂ ಸಾಮಾನ್ಯ ಹೆರಿಗೆಗೆ ಕನಿಷ್ಠ 15 ಸಾವಿರ ರೂಪಾಯಿ, ಸಿಜೇರಿಯನ್‌ಗೆ 75 ಸಾವಿರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ' ಎಂದು ಹೇಳುತ್ತಾರೆ ಕರ್ನಾಟಕ ಜನಾರೋಗ್ಯ ಚಳವಳಿಯ ಸಂಚಾಲಕಿ ಅಖಿಲಾ ವಾಸನ್‌.

‘ಪ್ರಸವಪೂರ್ವ ಆರೈಕೆಯಲ್ಲಿ ನಿರಂತರತೆ ಇರಲ್ಲ. ಮೊದಲು ಸರ್ಕಾರಿ ಆಸ್ಪತ್ರೆಗೆ, ಆ ನಂತರ ಅವರಿಗಿಂತ ಇವರು ಉತ್ತಮ ಎಂದು ಇನ್ನೊಬ್ಬ ಖಾಸಗಿ ವೈದ್ಯರ ಬಳಿ ಹೋಗುತ್ತಾರೆ. ಕೊನೆಗೆ ಖರ್ಚಿಗೆ ಹೆದರಿ ಇಲ್ಲವೇ ಹಣವೆಲ್ಲ ಖಾಲಿಯಾದ ಮೇಲೆ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ.  ಎಲ್ಲ ಗರ್ಭಿಣಿಯರ ಪ್ರಸವಪೂರ್ವ ಆರೈಕೆಯನ್ನು ಸರ್ಕಾರವೇ ಕಡ್ಡಾಯವಾಗಿ ವಹಿಸಿಕೊಳ್ಳಬೇಕು’ ಎನ್ನುತ್ತಾರೆ ಟೀನಾ ಝೇವಿಯರ್‌.

‘ಇಂತಹ ಸಾವುಗಳು ಮತ್ತು ವೆಚ್ಚದ ಸಂಗತಿ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಆತಂಕ ಹುಟ್ಟಿಸುತ್ತಿವೆ. ಈ ಚಿಂತೆಯಿಂದಾಗಿಯೇ ಬಹುಪಾಲು ಗರ್ಭಿಣಿಯರು ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ’ ಎಂದು ವಿಷಾದಿಸುತ್ತಾರೆ ರಾಯಚೂರಿನ ದಲಿತ–ಕೂಲಿಕಾರರ ಜನಜಾಗೃತಿ ಮಹಿಳಾ ಸಂಘದ ಚಿನ್ನಮ್ಮ.

‘ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು. ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆ ಉತ್ತಮಗೊಳ್ಳಬೇಕು ಎಂಬ ಆಗ್ರಹದೊಂದಿಗೆ ನಾವು ಜನಾಂದೋಲನ ಆರಂಭಿಸಿದ್ದೇವೆ. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಜನವರಿ 8ರಂದು ಮಹಿಳಾ ಸಮಾವೇಶವನ್ನೂ ಮಾಡಿ ಹಕ್ಕೊತ್ತಾಯ ಮಂಡಿಸಿದ್ದೇವೆ. ಎಲ್ಲೆಡೆ ಈ ಒತ್ತಾಯ ಹೆಚ್ಚಿ ಸರ್ಕಾರ ಸ್ಪಂದಿಸಿ ಆರೋಗ್ಯ ಸೇವೆ ಸುಧಾರಣೆಯಾದರೆ ತಾಯಂದಿರ ಜೀವ ಉಳಿಸಬಹುದು’ ಎಂಬ ಆಶಾವಾದ ಅವರದ್ದು.

ಹೈದರಾಬಾದ್‌ ಕರ್ನಾಟಕ ಪ್ರದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ರಚನೆಯಲ್ಲಿ ತೊಡಗಿದ್ದ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ಅವರು, ‘ಈ ಪ್ರದೇಶದಲ್ಲಿ ರಕ್ತ ಸಂಬಂಧದಲ್ಲಿ ವಿವಾಹ, ಬಾಲ್ಯ ವಿವಾಹ ಹೆಚ್ಚು. ಇದು ರಕ್ತಹೀನತೆ, ಅಪೌಷ್ಟಿಕತೆಗೆ ಕಾರಣವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಸೌದೆಯನ್ನು ಬಳಸುತ್ತಿದ್ದು, ಹೊಗೆಯಿಂದಾಗಿ ಮಹಿಳೆಯರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿವೆ. ಬಹುತೇಕ ಕಡೆಗಳಲ್ಲಿ ಕುಡಿಯಲು ಶುದ್ಧ ನೀರೂ ದೊರೆಯುತ್ತಿಲ್ಲ. ಮನೆಗಳಲ್ಲಿ ಶೌಚಾಲಯ ಇರುವುದಿಲ್ಲ. ಇವೆಲ್ಲವೂ ಪರೋಕ್ಷವಾಗಿ ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ’ ಎನ್ನುತ್ತಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 2015–16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯನ್ನು ಅವರು ಮುಂದಿಡುತ್ತಾರೆ.

‘ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿ ಪ್ರಕಾರ ಸಾವಿರ ಜನರಿಗೆ ಒಬ್ಬರು ವೈದ್ಯರು ಇರಬೇಕು. ನಮ್ಮಲ್ಲಿ ಇರುವುದು 1,700 ಜನರಿಗೆ ಒಬ್ಬ ವೈದ್ಯರು. ತಜ್ಞ ವೈದ್ಯರು ನಗರ ಕೇಂದ್ರೀಕೃತವಾಗುತ್ತಿದ್ದಾರೆ. ಹೀಗಾಗಿ ಗ್ರಾಮೀಣರಿಗೆ ಸಕಾಲಕ್ಕೆ ತುರ್ತು ಸೇವೆ ದೊರೆಯುತ್ತಿಲ್ಲ. ದೇಶದಲ್ಲಿ ಅತಿ ಹೆಚ್ಚು ವೈದ್ಯರು ಹೊರಬರುತ್ತಿರುವುದು ನಮ್ಮ ರಾಜ್ಯದಿಂದ. ಆದರೂ, ಇಲ್ಲಿಯ ಸ್ಥಿತಿ ಹೀಗಿದೆ’ ಎಂದು ಹಳಹಳಿಸುತ್ತಾರೆ.

‘ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಪ್ರಸೂತಿಗೆ ಮುನ್ನ, ಪ್ರಸೂತಿ ಸಮಯದಲ್ಲಿ ರಕ್ತಸ್ರಾವವಾದರೆ ಅದನ್ನು ನಿರ್ಲಕ್ಷಿಸುತ್ತಾರೆ. ನನಗೂ ಹೀಗೇ ಆಗಿತ್ತು; ಏನೂ ಆಗಲ್ಲ ಬಿಡು ಎಂಬ ಹಿರಿಯ ಮಹಿಳೆಯರ ಉಪದೇಶವೂ ಅದಕ್ಕೆ ಕಾರಣ. ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ತೆರಳುತ್ತಾರೆ. ಹೈದರಾಬಾದ್‌ ಕರ್ನಾಟಕದಲ್ಲಿ ಇಂತಹ ಮನೋಭಾವ ಹೆಚ್ಚು. ಸರಿಯಾದ ಪೌಷ್ಟಿಕ ಆಹಾರ, ಚಿಕಿತ್ಸೆ ಪಡೆಯದೇ ನಿಷ್ಕಾಳಜಿ ವಹಿಸುವ ಮಹಿಳೆ, ತನಗರಿವಿಲ್ಲದಂತೆ ತನ್ನ ಮಗುವನ್ನೂ ಅನಾರೋಗ್ಯಕ್ಕೆ, ಸಾವಿನ ಕೂಪಕ್ಕೆ ದೂಡುತ್ತಾಳೆ’ ಎಂದು ಅವರು ಹೇಳುತ್ತಾರೆ.

‘ತಾಯಿ ಕಾರ್ಡ್‌ ಪಡೆದಿರುವ ಮಹಿಳೆಯ ಬಗ್ಗೆ ನಿಗಾ ವಹಿಸುವುದರಿಂದ ತಾಯಿ ಮರಣ ಪ್ರಕರಣಗಳೆಲ್ಲ ದಾಖಲಾಗುತ್ತಿವೆ. ಹೀಗಾಗಿ ಅಂಕಿ–ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2020ರ ವೇಳೆಗೆ ಒಂದು ಲಕ್ಷ ಜೀವಂತ ಜನನಕ್ಕೆ ತಾಯಂದಿರ ಮರಣ ಪ್ರಮಾಣ 100 ಕಡಿಮೆ ಮಾಡಬೇಕು ಎಂಬುದು ಗುರಿ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂಬುದು ಆರೋಗ್ಯ ಇಲಾಖೆಯ ವಿವರಣೆ.

*******

ಬಾಣಂತಿಯರ ಸಾವಿನ ಪ್ರಮಾಣವು ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಅಧಿಕ. ಹಿಂದುಳಿದ ಪ್ರದೇಶವಾಗಿರುವ ಹೈದರಾಬಾದ್‌ ಕರ್ನಾಟಕದಲ್ಲಿ ಇದು ಇನ್ನೂ ಹೆಚ್ಚು.

ರಕ್ತಹೀನತೆ, ರಕ್ತದ ಅತಿ ಒತ್ತಡ, ಪ್ರಸವ ನಂತರ ತೀವ್ರ ರಕ್ತಸ್ರಾವ, ಸೋಂಕು... ಇವು ಹೆರಿಗೆ ಸಂದರ್ಭದಲ್ಲಿ ಮತ್ತು ನಂತರದ ಕೆಲ ದಿನಗಳ ಅವಧಿಯಲ್ಲಿ ತಾಯಿಯ ಸಾವಿಗೆ ಪ್ರಮುಖ ಕಾರಣಗಳಾಗುತ್ತಿವೆ. ಪ್ರಸವ ನಂತರದ ಸೋಂಕುಗಳಿಗೆ ತಾಯಿ ಸುಲಭವಾಗಿ ತುತ್ತಾಗಲು ರಕ್ತಹೀನತೆ ಪ್ರಮುಖ ಕಾರಣವಾಗುತ್ತಿದೆ. ಇದು ಬಹುಪಾಲು ತಾಯಂದಿರ ಪ್ರಾಣಕ್ಕೆ ಎರವಾಗುತ್ತಿದೆ. ಕಾಮಾಲೆ ಮತ್ತು ಅಪೌಷ್ಟಿಕತೆ ನವಜಾತ ಶಿಶುಗಳ ಪ್ರಾಣ ಹಿಂಡುತ್ತಿವೆ.

ಪ್ರಸೂತಿ ಆರೈಕೆ, ಮಡಿಲು, ತಾಯಿಭಾಗ್ಯ, ಜನನಿ ಸುರಕ್ಷಾ, ತಾಯಂದಿರ ಆರೋಗ್ಯ ತರಬೇತಿ... ಹೀಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೂ, ಮಾತೃಮರಣ ಪ್ರಮಾಣ ಕಡಿಮೆಯಾಗುತ್ತಿಲ್ಲ.

ಮದುವೆ ಮಾಡುವುದೇ ದೊಡ್ಡ ಸಾಹಸ. ಮುಂದೆ ಮಗಳು ಮತ್ತು ಆಕೆಯ ಮಗುವಿನ ಚಿಕಿತ್ಸೆಗೆ ಮತ್ತೆ ಸಾಲ ಮಾಡುವ ದುಃಸ್ಥಿತಿ ಬಡ ಪೋಷಕರದು. ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಬೇಕು ಎಂಬ ಜಾಗೃತಿ ಗ್ರಾಮೀಣ ಪ್ರದೇಶದವರಲ್ಲಿಯೂ ಹೆಚ್ಚಿದೆ. ಇದರಿಂದಾಗಿ ಮನೆಯಲ್ಲೇ ಹೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದು ನಿಜ. ಆದರೆ ಪ್ರಸವಪೂರ್ವ ಮತ್ತು ಪ್ರಸವದ ನಂತರದ ಆರೈಕೆ, ಗುಣಮಟ್ಟದ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಕುಟುಂಬಗಳ ವಲಸೆ ಸಮಸ್ಯೆಯೂ ಇದಕ್ಕೆ ಕಾರಣ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಟೆಂಗಳಿಯ ಜಯಶ್ರೀ ಅವರ ದುರಂತ ಅಂತ್ಯದ ಕತೆ ಹೀಗಿದೆ... ಜಯಶ್ರೀ ಅವರನ್ನು ಹುಚ್ಚೇಶ್ವರ ಹಡಪದ ಅವರ ಜೊತೆ ವಿವಾಹ ಮಾಡಿಕೊಡಲಾಯಿತು. ಈ ದಂಪತಿ ದುಡಿಯಲು ಬೆಂಗಳೂರಿಗೆ ಹೋದರು. ಗರ್ಭವತಿಯಾದ ಐದು ತಿಂಗಳಿಗೆ ಊರಿಗೆ ವಾಪಸಾದ ಜಯಶ್ರೀ, ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು. ಅಲ್ಲಿ ಅವರ ‘ತಾಯಿ ಕಾರ್ಡ್‌’ ಸಹ ಮಾಡಲಾಯಿತು. ಪತಿಯ ತಂದೆ ವೀರಭದ್ರ ಅವರು ಕಲಬುರ್ಗಿ ಎಪಿಎಂಸಿಯಲ್ಲಿ ಹಮಾಲಿ. ಕಲಬುರ್ಗಿಯಲ್ಲಿ ಮನೆ ಮಾಡಿಕೊಂಡಿದ್ದಾರೆ. ಒಳ್ಳೆಯ ಚಿಕಿತ್ಸೆ ಕೊಡಿಸಲು ಸೊಸೆಯನ್ನು ಕಲಬುರ್ಗಿಗೆ ಕರೆತಂದರು.

ಕಲಬುರ್ಗಿಯಲ್ಲಿ ಖಾಸಗಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಬಳಿ ಚಿಕಿತ್ಸೆ ಕೊಡಿಸಿದರು. ಹೆರಿಗೆಗೆ ತವರೂರು ಚಿತ್ತಾಪುರ ತಾಲ್ಲೂಕು ಹೆಬ್ಬಾಳಕ್ಕೆ ಕಳಿಸಿದರು. ಹೆಬ್ಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಯಿತು. ತಾಯಿ–ಮಗಳು ಇಬ್ಬರೂ ಆರೋಗ್ಯವಾಗಿದ್ದರು.

‘ಹೆರಿಗೆಯ ಮರುದಿನವೇ ಆಸ್ಪತ್ರೆಯವರು ಮನೆಗೆ ಕಳಿಸಿದರು. ದಿನ ಉರುಳುವಷ್ಟರಲ್ಲಿ ಮಗು ಅನಾರೋಗ್ಯಕ್ಕೆ ಈಡಾಯಿತು. ಕಲಬುರ್ಗಿಯ ದೊಡ್ಡ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದೆ. ಕೆಲ ದಿನಗಳ ನಂತರ ತಾಯಿಗೂ ವಿಪರೀತ ಜ್ವರ. ಇಬ್ಬರನ್ನೂ ಒಂದೇ ಆಸ್ಪತ್ರೆಗೆ ಸೇರಿಸಿದೆ. ತಾಯಿ ಚಿಕಿತ್ಸೆಗೆ 40 ಸಾವಿರ ರೂಪಾಯಿ ಕಟ್ಟಬೇಕಾಗುತ್ತದೆ ಎಂದರು ಆಸ್ಪತ್ರೆಯವರು. ಅಷ್ಟರಲ್ಲಿ ನನ್ನ ಹತ್ತಿರ ಇದ್ದ ಹಣವೆಲ್ಲ ಖಾಲಿ ಆಗಿತ್ತು. ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆ. ಆಗ ನನ್ನ ಬಳಿ ಇದ್ದದ್ದು ₹ 200 ಮಾತ್ರ. ಅಲ್ಲಿದ್ದವರಿಂದ ₹ 100 ಕೈಗಡ ಪಡೆದು ಆಂಬುಲೆನ್ಸ್‌ನವರಿಗೆ ₹ 300 ಕೊಟ್ಟು ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಿದೆ. ಫಿಟ್ಸ್‌ ಬಂದು ಆಕೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಳು. ಶವ ಊರಿಗೆ ಒಯ್ಯಲು ₹ 2,600 ಖರ್ಚಾಯಿತು. ಊರವರು ಹಣ ಹೊಂದಿಸಿಕೊಟ್ಟರು’ ಎನ್ನುತ್ತ ಮೌನಕ್ಕೆ ಶರಣಾದರು ವೀರಭದ್ರ.

‘ಮೊಮ್ಮಗಳು ಈಗ ಅಜ್ಜಿ ಮನೆಯಲ್ಲಿ (ತಾಯಿ ತವರು) ಇದ್ದಾಳೆ. ಆಕೆಗೆ ಭಾಗ್ಯಲಕ್ಷ್ಮಿ ಬಾಂಡ್‌ ಮಾಡಿಕೊಡಿ ಎಂದರೆ ಏನೇನೋ ದಾಖಲೆ ಕೇಳುತ್ತಿದ್ದಾರೆ’ ಎಂದು ಅಲವತ್ತುಕೊಂಡರು.

ಕಲಬುರ್ಗಿ ತಾಲ್ಲೂಕು ಅಷ್ಟಗಾ ಗ್ರಾಮದ ಮಲ್ಲಮ್ಮ ಅವರದ್ದು ಇನ್ನೊಂದು ಮನಕಲಕುವ ಪ್ರಕರಣ. ಮಲ್ಲಮ್ಮ ಪದವೀಧರೆ. ಆಳಂದ ತಾಲ್ಲೂಕು ಬಸವಂತವಾಡಿಯ ಬಸವರಾಜ ಬಿರಾದಾರ ಅವರೊಂದಿಗೆ ಮದುವೆ ಆಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸಿಜೇರಿಯನ್‌ನ ಹೊಲಿಗೆ ತೆಗೆಯುವ ಸಮಯದಲ್ಲಿ ಆರಂಭವಾದ ರಕ್ತಸ್ರಾವ ನಿಯಂತ್ರಣಕ್ಕೆ ಬಾರದೆ ಅವರು ಮೃತಪಟ್ಟರು.

ಅಷ್ಟಗಿ ಗ್ರಾಮದ ಮನೆಯಲ್ಲಿ ಅಳುತ್ತಲೇ ಮಾತು ಆರಂಭಿಸಿದ ಮಲ್ಲಮ್ಮ ಅವರ ತಾಯಿ ವಿಮಲಾಬಾಯಿ ನೀಲಕಂಠ ನಿಡಂಚಿ, ‘ಗುಲ್ಬರ್ಗಾದ ದವಾಖಾನಿ ಡಾಕ್ಟರ್ರು ಆಪರೇಷನ್‌ನ್ಯಾಗ ಫಾಲ್ಟ್‌ ಮಾಡಿದ್ದರಿಂದ ನಮ್‌ ಮಗ್ಳು ಸತ್ಲು’ ಎಂದು ಹಣೆಗೆ ಕೈಹಚ್ಚಿ ಕೂತರು.

‘ಮಲ್ಲಮ್ಮಳದ್ದು ಬಾಲ್ಯ ವಿವಾಹ ಅಲ್ಲ. ಹತ್ತಿರದ ರಕ್ತ ಸಂಬಂಧದಲ್ಲೂ ವಿವಾಹ ಮಾಡಿಲ್ಲ’ ಎಂದು ದನಿಗೂಡಿಸಿದರು ಮಲ್ಲಮ್ಮಳ ಅಕ್ಕ ಸುಧಾರಾಣಿ.

‘ಗರ್ಭವತಿಯಾದ ನಂತರ ಪ್ರತಿ ತಿಂಗಳೂ ಮಲ್ಲಮ್ಮ ಆಳಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಳು. ಪ್ರಸೂತಿಗೆ ಕರೆತಂದಿದ್ದೆವು. ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಅವರು ಸಿಜೇರಿಯನ್‌ ಮಾಡಿದ್ದರು. ಆ ನಂತರ ಎಂಟು ದಿನ ಅಲ್ಲೇ ಇದ್ದಳು. ಕೊನೇ ದಿನ ಹೊಲಿಗೆ ಬಿಚ್ಚಿದ ನಂತರ ರಕ್ತಸ್ತಾವ ಆರಂಭವಾಯಿತು. ಅಲ್ಲಿಂದ ಕಲಬುರ್ಗಿಯ ಬೋಧನಾ ಆಸ್ಪತ್ರೆಯೊಂದಕ್ಕೆ ಕಳಿಸಿದರು. ಅಲ್ಲಿ ಆಕೆ ಮೃತಪಟ್ಟಳು’ ಎಂದರು.

‘ಹೊಲಿಗಿ ಬಿಚ್ಚಿದ್‌ಮ್ಯಾಗ್‌ ರಕ್ತ ಹಂಗ ಸೋರಾಕ್‌ ಹತ್ತಿತ್ತು. ಅಲ್ಲಿ ಡಾಕ್ಟರ್‌ ಒಳಗ ಕರಕೊಂಡ ಹ್ವಾದ್ರು. ಸತ್ನೆ ಯವ್ವಾ... ಬಿಡ್ರೆ ಯವ್ವಾ... ಎಂದು ಮಗ್ಳು ಚೀರಿದ್‌ ಕೇಳ್ಸಿತು. ಅಲ್ಲಿ ಏನ್‌ ಮಾಡಿದ್ರೊ ಏನೋ?’ ಎಂದು ರೋದಿಸಲಾರಂಭಿಸಿದರು ವಿಮಲಾಬಾಯಿ.

‘ಕೂಸು ಹುಟ್ಟಿದಾಗ ಎರಡ್‌ ಕಿಲೋ ಇತ್ತು. ಕಾಮನಿ (ಕಾಮಾಲೆ) ಆಗೇತಿ ಅಂತ ಹೇಳಿ ಕಾಜಿನ್ಯಾಗ (ಇನ್‌ಕ್ಯುಬಿಟರ್‌) ಇಟ್ರು. ಅದ್ಕೂ ಭಾಳ್‌ ರೊಕ್ಕಾ ಹಾಕ್ದಿವಿ. 7–8 ತಿಂಗಳ ಪೌಡರ್‌ ಹಾಲು ಕೊಟ್ವಿ. ಈಗ ಆಕಳ ಹಾಲು ಹಾಕಾಕತ್ತೀವಿ. ಆಕಿ ಅಜ್ಜ ಆಕಳಾ ತಂದಾನ’ ಎಂದು 10 ತಿಂಗಳ ಮೊಮ್ಮಗ ಮಹಾದೇವನನ್ನು ಅಪ್ಪಿಕೊಂಡರು.

‘ಈ ಮಗುವಿನ ಚಿಕಿತ್ಸೆಗೆ ತಿಂಗಳಿಗೆ ಎರಡು ಸಾವಿರ ಬೇಕು. ತವರಿನವರಿಗೂ ಇರಲು ಸ್ವಂತ ಮನೆ ಇಲ್ಲ– ಜಮೀನು ಇಲ್ಲ. ಸಾಲ ಮಾಡಿ ಮದುವೆ ಮಾಡಿದ್ದಾರೆ. ಮಲ್ಲಮ್ಮಳ ಚಿಕಿತ್ಸೆಗೂ ಸಾಲ ಮಾಡಿದ್ದಾರೆ. ಈಗ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸುವುದೂ ಕಷ್ಟವಾಗುತ್ತಿದೆ’ ಎಂದು ಕಣ್ಣೀರಾದರು ಸುಧಾರಾಣಿ.

‘ಇಷ್ಟೆಲ್ಲ ಆದ್ರೂ ಸರ್ಕಾರಿ ಆಸ್ಪತ್ರೆಯವರು ಬಂದಿಲ್ಲ. ಕೂಸು ಹೆಂಗೈತಿ ಅಂತ ಕೇಳಿಲ್ಲ. ಈಗ ಅಂಗನವಾಡಿ ಅವ್ರು ಬಂದ್‌ ಪೌಡರ್‌ (ಪೌಷ್ಟಿಕ ಆಹಾರ) ಒಯ್ರಿ ಅಂತಾರ. ನಾವು ಆ ಪೌಡರ್‌ ತಂದಿಲ್ಲ’ ಎಂದರು ವಿಮಲಾಬಾಯಿ. ತಾಯಿ ಮರಣ–ಅನಾಥ ಶಿಶುಗಳ ಪಾಲನೆಯ ವಿಷಯದಲ್ಲಿ ಅದೆಷ್ಟೋ ಕುಟುಂಬಗಳು ಹೀಗೆ ನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿವೆ.

ಕಲಬುರ್ಗಿ ಜಿಲ್ಲೆಯಲ್ಲಿ 2016–17ರಲ್ಲಿ ಹೆರಿಗೆ ಸಂಬಂಧದಲ್ಲಿ 52 ತಾಯಿ ಮರಣ ಸಂಭವಿಸಿದ್ದರೆ, ಈ ವರ್ಷ ಒಂಬತ್ತು ತಿಂಗಳಲ್ಲಿ 80 ತಾಯಂದಿರು ಮೃತಪಟ್ಟಿದ್ದಾರೆ. ತಾಯಿ ಮರಣ ಪ್ರಮಾಣ ನಮ್ಮ ರಾಜ್ಯದಲ್ಲಿ ಒಂದು ಲಕ್ಷಕ್ಕೆ 134 ಇದ್ದರೆ, ಕಲಬುರ್ಗಿ ಜಿಲ್ಲೆಯ ಸರಾಸರಿ 199 ರಷ್ಟು.

‘ಇದು ಸರ್ಕಾರಿ ಲೆಕ್ಕ. ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಇಂತಹ ಬಹುಪಾಲು ಸಾವುಗಳು ದಾಖಲಾಗದೇ ಹೋಗುತ್ತಿವೆ’ ಎನ್ನುತ್ತಾರೆ ಕರ್ನಾಟಕ ಜನಾರೋಗ್ಯ ಚಳವಳಿಯ ಕಲಬುರ್ಗಿ ಜಿಲ್ಲಾ ಸಂಚಾಲಕಿ ಟೀನಾ ಝೇವಿಯರ್‌.

‘ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ಒಂಬತ್ತು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ತಪಾಸಣೆ ಮತ್ತು ಒಂದು ಬಾರಿಯಾದರೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಂದ ಸಲಹೆ ದೊರೆಯುವುದು ದುಸ್ತರವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಯಂತ್ರ ಇರಲ್ಲ. ತಾಲ್ಲೂಕು ಆಸ್ಪತ್ರೆಗಳಲ್ಲಿ ಯಂತ್ರ ಇದ್ದರೂ ರೇಡಿಯಾಲಜಿಸ್ಟ್‌ ಇರಲ್ಲ. ಹೀಗಾಗಿ ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅವರಿಗೆ ಆರೋಗ್ಯ ಶಿಕ್ಷಣವೂ ದೊರೆಯುವುದಿಲ್ಲ’ ಎಂದು ಅವರು ಹೇಳುತ್ತಾರೆ.

‘ಕಲಬುರ್ಗಿಯ ಆರು ತಾಲ್ಲೂಕು ಆಸ್ಪತ್ರೆಗಳಲ್ಲಿ ಮೂರರಲ್ಲಿ ಅರಿವಳಿಕೆ ತಜ್ಞರು ಇಲ್ಲ. ತಾಲ್ಲೂಕು ಆಸ್ಪತ್ರೆಗಳಿಗೆ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಯಂತ್ರಗಳನ್ನು ಸರ್ಕಾರ ಪೂರೈಸಿದೆ. ಜೇವರ್ಗಿ ಹೊರತುಪಡಿಸಿದರೆ ಉಳಿದ ತಾಲ್ಲೂಕು ಆಸ್ಪತ್ರೆಗಳಿಗೆ ರೇಡಿಯಾಲಜಿಸ್ಟ್‌ ಹುದ್ದೆಗಳ ಮಂಜೂರಾತಿಯೂ ಇಲ್ಲ. ನಾವು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ಸಮಜಾಯಿಷಿ ನೀಡುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎ.ಎಸ್‌. ರುದ್ರವಾಡಿ.

ಮೃತಪಟ್ಟ ತಾಯಂದಿರ ಕುಟುಂಬಗಳನ್ನು ಕರ್ನಾಟಕ ಜನಾರೋಗ್ಯ ಚಳವಳಿಯವರು ಭೇಟಿಯಾಗಿ, ಪ್ರಸವಪೂರ್ವ ಆರೈಕೆ, ಅವರು ಚಿಕಿತ್ಸೆಗೆ ದಾಖಲಾದ ಆಸ್ಪತ್ರೆಗಳು, ಎದುರಾದ ತೊಡಕು ಹಾಗೂ ಮರಣಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದ್ದಾರೆ.

‘ಮರಣ ಹೊಂದಿದವರಲ್ಲಿ ಶೇ 45ರಷ್ಟು ಮಹಿಳೆಯರು 25ಕ್ಕಿಂತ ಕಡಿಮೆ ವಯಸ್ಸಿನವರು. ಶೇ 36ರಷ್ಟು ಮಹಿಳೆಯರು ಮೊದಲ ಬಾರಿಗೆ ಗರ್ಭ ಧರಿಸಿದ್ದವರು. ಮರಣ ಹೊಂದಿದ ತಾಯಂದಿರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮುಸ್ಲಿಂ ಸಮುದಾಯಗಳವರ ಪ್ರಮಾಣ ಶೇ 71ರಷ್ಟು. ನಾವು ಅಧ್ಯಯನ ನಡೆಸಿದ 48 ಪ್ರಕರಣಗಳಲ್ಲಿ ಒಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಜಿಲ್ಲಾ ಆಸ್ಪತ್ರೆಯಂತಹ ತುರ್ತು ಪರಿಸ್ಥಿತಿ ನಿಭಾಯಿಸಲು ಸಾಮರ್ಥ್ಯ ಹೊಂದಿರುವ ಆಸ್ಪತ್ರೆ ತಲುಪಿದ್ದರು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆತಿದ್ದರೆ ಅವರೆಲ್ಲ ಬದುಕುಳಿಯಬಹುದಿತ್ತು. ಆಸ್ಪತ್ರೆಗೆ ತೆರಳುವಲ್ಲಿ ಆದ ವಿಳಂಬ, ಅಸಮರ್ಪಕ ವೈದ್ಯಕೀಯ ಸೇವೆ ಮತ್ತು ಖಾಸಗಿ ಆಸ್ಪತ್ರೆಯವರು ಕೊನೆ ಗಳಿಗೆಯಲ್ಲಿ ಇನ್ನೊಂದು ಆಸ್ಪತ್ರೆಗೆ ಸಾಗಹಾಕುವುದು– ಇವು ತಾಯಂದಿರ ಮರಣಕ್ಕೆ ಕಾರಣವಾಗಿವೆ’ ಎನ್ನುವುದು ಅವರ ವಿವರಣೆ.

‘ಸಾಮಾನ್ಯ ಹೆರಿಗೆಯಾದರೂ 48ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇಟ್ಟುಕೊಳ್ಳಬೇಕು. ಬೆಡ್‌ ಕೊರತೆ, ಮನೆಯವರ ಕೋರಿಕೆ ಮತ್ತಿತರ ಕಾರಣಗಳಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮನೆಗೆ ಕಳಿಸಲಾಗುತ್ತಿದೆ. ಪ್ರಸವ ನಂತರದ ಅವಧಿಯಲ್ಲಿ ಸಂಭವಿಸಿದ ತಾಯಂದಿರ ಸಾವಿನ ಪ್ರಮಾಣ ಶೇ 82ರಷ್ಟು. ಶೇ 37ರಷ್ಟು ಮಹಿಳೆಯರು ಪ್ರಸವದ ದಿನ (ಅಂದರೆ 24 ಗಂಟೆಗಳ ಅವಧಿಯಲ್ಲಿ) ಮೃತಪಟ್ಟವರು. ಇವರೂ ಸೇರಿದಂತೆ ಶೇ 71ರಷ್ಟು ಮಹಿಳೆಯರು ಪ್ರಸವದ ಮೊದಲ ವಾರದ ಅವಧಿಯಲ್ಲಿ ಮೃತಪಟ್ಟವರು. ಹೆರಿಗೆಯ 3ನೇ ಹಾಗೂ 4ನೇ ಹಂತಗಳ ನಿರ್ವಹಣೆಯ ಗಂಭೀರ ಲೋಪವೇ ಇದಕ್ಕೆ ಕಾರಣ’ ಎನ್ನುತ್ತಾರೆ ಅವರು.

‘ಮೃತರಲ್ಲಿ ಶೇ 77ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದರು’ ಎಂಬುದನ್ನು ಅವರು ಗುರುತಿಸಿದ್ದಾರೆ.

ಆಂಬುಲೆನ್ಸ್‌ ಸೇವೆಯ ಕೊರತೆ ಇನ್ನೊಂದು ಬಗೆಯದು. ‘ನಾವು ಅಧ್ಯಯನ ನಡೆಸಿದ 48 ಪ್ರಕರಣಗಳಲ್ಲಿ ಐವರಿಗೆ ಮಾತ್ರ ಆಂಬುಲೆನ್ಸ್‌ ಸೇವೆ ಸಮರ್ಪಕವಾಗಿ ದೊರೆತಿತ್ತು’ ಎನ್ನುತ್ತಾರೆ ಚಳವಳಿಯವರು.

ಸಂತ್ರಸ್ತ ಕುಟುಂಬದವರೊಬ್ಬರು ಹೇಳಿದ ಆಂಬುಲೆನ್ಸ್‌ ಕತೆ ಹೀಗಿದೆ, ‘ಹೆರಿಗೆಯ ನಂತರ ಬಾಣಂತಿಯು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತಿ ರಕ್ತಸ್ರಾವಕ್ಕೆ ಒಳಗಾದರು. ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಿದೆವು. ಆಂಬುಲೆನ್ಸ್‌ ಬರುವ ಹೊತ್ತಿಗೆ ಒಂದೂವರೆ ಗಂಟೆ ಉರುಳಿತ್ತು. ವೈದ್ಯರು ಮತ್ತು ನರ್ಸ್‌ ನಮ್ಮೊಟ್ಟಿಗೆ ಅದೇ ಆಂಬುಲೆನ್ಸ್‌ನಲ್ಲಿ ಬಂದರು. ಆದರೆ, 45 ನಿಮಿಷದ ನಂತರ ಮಾರ್ಗಮಧ್ಯೆಯೇ ಆಕೆ ಮೃತಪಟ್ಟರು’.

‘ಈಗ ಜಿಲ್ಲೆಯಲ್ಲಿ ಆರೋಗ್ಯ ಕವಚ (108) ಆಂಬುಲೆನ್ಸ್‌ಗಳು 25 ಹಾಗೂ ನಮ್ಮ ಇಲಾಖೆಯ 33 ಆಂಬುಲೆನ್ಸ್‌ ಇವೆ. ಪ್ರತಿ ಹತ್ತು ಕಿ.ಮೀ.ಗೊಂದು ಆಂಬುಲೆನ್ಸ್‌ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ’ ಎನ್ನುತ್ತಾರೆ ಡಿಎಚ್‌ಒ.

ಜಿಲ್ಲೆಯಲ್ಲಿ 85 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಎರಡರಲ್ಲಿ ವೈದ್ಯರಿಲ್ಲ. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂವರು ಶುಶ್ರೂಷಕರು ಇರಬೇಕಿದ್ದು, 47 ಹುದ್ದೆಗಳು ಖಾಲಿ ಇವೆ. ಆರು ತಾಲ್ಲೂಕು ಆಸ್ಪತ್ರೆಗಳಲ್ಲಿ ಮೂರರಲ್ಲಿ ಅರಿವಳಿಕೆ ತಜ್ಞರು ಇಲ್ಲ. ಹೀಗಾಗಿ ಅಲ್ಲಿ ಸಿಜೇರಿಯನ್‌ ಸೇವೆ ದೊರೆಯುತ್ತಿಲ್ಲ.

ಜಿಲ್ಲೆಯಲ್ಲಿ 16 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಒಂದು ಆಸ್ಪತ್ರೆಯಲ್ಲಿ ಒಬ್ಬರಂತೆ 16 ಸ್ತ್ರೀರೋಗ ತಜ್ಞ ಹುದ್ದೆಗಳ ಪೈಕಿ 11 ಹುದ್ದೆಗಳು ಖಾಲಿ ಇವೆ. ಇಲ್ಲಿ ಅಗತ್ಯ ಸಿಬ್ಬಂದಿ, ವೈದ್ಯರು ಇಲ್ಲದ ಕಾರಣ ಗರ್ಭಿಣಿ–ಬಾಣಂತಿಯರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಹಾಕಲಾಗುತ್ತಿದ್ದು, ಜಿಲ್ಲಾ ಆಸ್ಪತ್ರೆಯ ಮೇಲೆ ಹೊರೆ ಹೆಚ್ಚಾಗಿ ಬೆಡ್‌ ಸಹ ಸಿಗಲ್ಲ. ಒಂದೇ ಹಾಸಿಗೆಯಲ್ಲಿ 2–3 ಮಕ್ಕಳನ್ನು ಹಾಕುವ ಸ್ಥಿತಿ ಇದೆ.

‘ಯಾವ ವೈದ್ಯರೂ ರೋಗಿಯ ಸಾವು ಬಯಸುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಿಂಗಳಿಗೆ ಸರಾಸರಿ 15ಹೆರಿಗೆ ಆಗುತ್ತವೆ. ನಿತ್ಯ ನಾಲ್ಕೈದು ಒಳರೋಗಿಗಳು ಇರುತ್ತಾರೆ. ನಿತ್ಯ ಸರಾಸರಿ 40 ಜನ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ನಾವು ಕೇಂದ್ರ ಸ್ಥಳದಲ್ಲಿಯೇ ತಂಗಲು ಕನಿಷ್ಠ ಸೌಲಭ್ಯ ಇರುವ ವಸತಿಗೃಹ ಇಲ್ಲ. ವಾಹನ ಸೌಲಭ್ಯ ಇಲ್ಲ. ಇಷ್ಟೆಲ್ಲ ಇಲ್ಲಗಳ ಮಧ್ಯೆಯೂ ನಾವು ಉತ್ತಮ ಸೇವೆ ನೀಡುತ್ತಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್‌ ಕೊಟ್ಟರೆ ಅನುಕೂಲ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೊಬ್ಬರು.

‘ಅಪೌಷ್ಟಿಕತೆ, ಗಂಡು ಮಗು ಬೇಕು ಎಂಬ ಹಪಹಪಿಯಿಂದ ಹೆಚ್ಚು ಮಕ್ಕಳನ್ನು ಹೆರುವುದು, ಎರಡು ಹೆರಿಗೆ ನಡುವೆ ಕಡಿಮೆ ಅಂತರ ಮತ್ತು ಕೌಟುಂಬಿಕ ಸಮಸ್ಯೆಗಳು ತಾಯಿಯ ಸಾವಿಗೆ ಕಾರಣವಾಗುತ್ತಿವೆ. ಗರ್ಭಿಣಿರಿಗೆ ನಾವು ಆಪ್ತಸಮಾಲೋಚನೆ ನೀಡುತ್ತೇವೆ. ಬಹುಪಾಲು ಪ್ರಕರಣಗಳಲ್ಲಿ ಗರ್ಭಿಣಿಯನ್ನು ಮಾತ್ರ ಆಸ್ಪತ್ರೆಗೆ ಕಳಿಸುತ್ತಾರೆ. ಪೌಷ್ಟಿಕ ಆಹಾರ ಸೇವನೆ–ಆರೈಕೆಯ ಬಗೆಗೆ ನಾವು ಆಕೆಗೆ ತಿಳಿವಳಿಕೆ ನೀಡಿದರೂ ಪ್ರಯೋಜನವಾಗುವುದಿಲ್ಲ. ಏಕೆಂದರೆ ಬಹುಪಾಲು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸಬಲತೆ– ಬೇಕಿದ್ದನ್ನು ಮಾಡಿಕೊಳ್ಳುವ ಇಲ್ಲವೇ ಖರೀದಿಸಿ ತಿನ್ನುವ ಸ್ವಾತಂತ್ರ್ಯವೂ ಇರುವುದಿಲ್ಲ. ಗಂಡ ಅಥವಾ ಅತ್ತೆಯನ್ನು ಜೊತೆಗೆ ಕರೆದುಕೊಂಡು ಬನ್ನಿ ಎಂದು ನಾವೇ ಅವರನ್ನು ಒತ್ತಾಯಿಸುತ್ತೇವೆ’ ಎನ್ನುತ್ತಾರೆ ಅವರು.

‘ಹೆರಿಗೆಗೆ ತವರಿಗೆ ಹೋಗುವುದು ಸಂಪ್ರದಾಯದಂತೆ ಪಾಲನೆಯಾಗುತ್ತಿದೆ. ಹೀಗಾಗಿ ಆ ಗರ್ಭಿಣಿಗೆ ಒಂದೇ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ದೊರೆಯುವುದಿಲ್ಲ. ರಕ್ತಹೀನತೆ ಮತ್ತಿತರ ಗಂಭೀರ ಸಮಸ್ಯೆ ಇದ್ದರೆ ತಾಯಿ ಕಾರ್ಡ್‌ನಲ್ಲಿ ನಾವು ಅದನ್ನು ದಾಖಲಿಸಿರುತ್ತೇವೆ. ಇನ್ನೊಂದು ಆಸ್ಪತ್ರೆಯವರು ಅದನ್ನು ಗಮನಿಸಿ ವಿಶೇಷ ಕಾಳಜಿ ವಹಿಸುವ ಕೆಲಸವಾಗಬೇಕು’ ಎಂಬುದು ಮಹಿಳಾ ವೈದ್ಯಾಧಿಕಾರಿಯೊಬ್ಬರ ಕಳಕಳಿ.

ಗ್ರಾಮೀಣ ಮಹಿಳೆಯರಿಗೆ ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಹೆರಿಗೆ ಸೇವೆ ನೀಡುವ ಕೇಂದ್ರ ಸರ್ಕಾರದ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಇದೆ. ಔಷಧಿ, ಪ್ರಯೋಗಾಲಯ ಪರೀಕ್ಷೆ, ರಕ್ತ ತಪಾಸಣೆ, ಪೌಷ್ಟಿಕ ಆಹಾರ ಪೂರೈಕೆ ಉಚಿತವಾಗಿದ್ದು, ಹೆರಿಗೆಗೆ ಬಂದು ಹೋಗುವ ಸಾರಿಗೆ ವೆಚ್ಚವನ್ನೂ ನೀಡಲಾಗುತ್ತದೆ. ರಾಜ್ಯ ಸರ್ಕಾರವೂ ಇದಕ್ಕೆ ಪೂರಕವಾಗಿ ‘ತಾಯಿಭಾಗ್ಯ’ ಯೋಜನೆ ರೂಪಿಸಿದೆ.

‘ಗರ್ಭವತಿಯಾದ ನಾಲ್ಕನೇ ತಿಂಗಳಿಗೆ ಸ್ಕ್ಯಾನಿಂಗ್‌ ಮಾಡಿಸಬೇಕಾಗುತ್ತದೆ. ಸ್ಕ್ಯಾನಿಂಗ್‌ ವ್ಯವಸ್ಥೆಯು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಲ್ಲ. ಆಗ ಅನಿವಾರ್ಯವಾಗಿ ಅವರು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ. ಅಲ್ಲಿಂದ ಅವರ ಸುಲಿಗೆ ಆರಂಭಗೊಳ್ಳುತ್ತದೆ. ಖಾಸಗಿ ಆಸ್ಪತ್ರೆಗೆ ತೆರಳುವ ಕಡುಬಡವರೂ ಸಾಮಾನ್ಯ ಹೆರಿಗೆಗೆ ಕನಿಷ್ಠ 15 ಸಾವಿರ ರೂಪಾಯಿ, ಸಿಜೇರಿಯನ್‌ಗೆ ₹ 75 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಇದು ಬಡವರನ್ನು ಮತ್ತಷ್ಟು ಬಡತನದ ಕೂಪಕ್ಕೆ ತಳ್ಳುವ ವ್ಯವಸ್ಥಿತ ಹುನ್ನಾರ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಕರ್ನಾಟಕ ಜನಾರೋಗ್ಯ ಚಳವಳಿಯ ಸಂಚಾಲಕಿ ಅಖಿಲಾ ವಾಸನ್‌.

‘ಪ್ರಸವಪೂರ್ವ ಆರೈಕೆಯಲ್ಲಿ ನಿರಂತರತೆ ಇರಲ್ಲ. ಮೊದಲು ಸರ್ಕಾರಿ ಆಸ್ಪತ್ರೆಗೆ, ಆ ನಂತರ ಅವರಿಗಿಂತ ಇವರು ಉತ್ತಮ ಎಂದು ಇನ್ನೊಬ್ಬ ಖಾಸಗಿ ವೈದ್ಯರ ಬಳಿ ಹೋಗುತ್ತಾರೆ. ಕೊನೆಗೆ ಖರ್ಚಿಗೆ ಹೆದರಿ ಇಲ್ಲವೇ ಹಣವೆಲ್ಲ ಖಾಲಿಯಾದ ಮೇಲೆ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ.  ಎಲ್ಲ ಗರ್ಭಿಣಿಯರ ಪ್ರಸವಪೂರ್ವ ಆರೈಕೆಯನ್ನು ಸರ್ಕಾರವೇ ಕಡ್ಡಾಯವಾಗಿ ವಹಿಸಿಕೊಳ್ಳಬೇಕು’ ಎನ್ನುತ್ತಾರೆ ಟೀನಾ ಝೇವಿಯರ್‌.

‘ಇಂತಹ ಸಾವುಗಳು ಮತ್ತು ವೆಚ್ಚದ ಸಂಗತಿ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಆತಂಕ ಹುಟ್ಟಿಸುತ್ತಿವೆ. ಈ ಚಿಂತೆಯಿಂದಾಗಿಯೇ ಬಹುಪಾಲು ಗರ್ಭಿಣಿಯರು ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ’ ಎಂದು ವಿಷಾದಿಸುತ್ತಾರೆ ರಾಯಚೂರಿನ ದಲಿತ–ಕೂಲಿಕಾರರ ಜನಜಾಗೃತಿ ಮಹಿಳಾ ಸಂಘದ ಚಿನ್ನಮ್ಮ.

‘ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು. ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆ ಉತ್ತಮಗೊಳ್ಳಬೇಕು ಎಂಬ ಆಗ್ರಹದೊಂದಿಗೆ ನಾವು ಜನಾಂದೋಲನ ಆರಂಭಿಸಿದ್ದೇವೆ. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಜನವರಿ 8ರಂದು ಮಹಿಳಾ ಸಮಾವೇಶವನ್ನೂ ಮಾಡಿ ಹಕ್ಕೊತ್ತಾಯ ಮಂಡಿಸಿದ್ದೇವೆ. ಎಲ್ಲೆಡೆ ಈ ಒತ್ತಾಯ ಹೆಚ್ಚಿ ಸರ್ಕಾರ ಸ್ಪಂದಿಸಿ ಆರೋಗ್ಯ ಸೇವೆ ಸುಧಾರಣೆಯಾದರೆ ತಾಯಂದಿರ ಜೀವ ಉಳಿಸಬಹುದು’ ಎಂಬ ಆಶಾವಾದ ಅವರದ್ದು.

ಹೈದರಾಬಾದ್‌ ಕರ್ನಾಟಕ ಪ್ರದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ರಚನೆಯಲ್ಲಿ ತೊಡಗಿದ್ದ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ಅವರು, ‘ಈ ಪ್ರದೇಶದಲ್ಲಿ ರಕ್ತ ಸಂಬಂಧದಲ್ಲಿ ವಿವಾಹ, ಬಾಲ್ಯ ವಿವಾಹ ಹೆಚ್ಚು. ಇದು ರಕ್ತಹೀನತೆ, ಅಪೌಷ್ಟಿಕತೆಗೆ ಕಾರಣವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಸೌದೆಯನ್ನು ಬಳಸುತ್ತಿದ್ದು, ಹೊಗೆಯಿಂದಾಗಿ ಮಹಿಳೆಯರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿವೆ. ಬಹುತೇಕ ಕಡೆಗಳಲ್ಲಿ ಕುಡಿಯಲು ಶುದ್ಧ ನೀರೂ ದೊರೆಯುತ್ತಿಲ್ಲ. ಮನೆಗಳಲ್ಲಿ ಶೌಚಾಲಯ ಇರುವುದಿಲ್ಲ. ಇವೆಲ್ಲವೂ ಪರೋಕ್ಷವಾಗಿ ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ’ ಎನ್ನುತ್ತಾರೆ.

‘ರಾಜ್ಯದಲ್ಲಿ ಶೇ 54.7ರಷ್ಟು ಕುಟುಂಬಗಳು ಮಾತ್ರ ಅಡುಗೆಗೆ ಎಲ್‌ಪಿಜಿ ಅಥವಾ ಶುದ್ಧ ಇಂಧನ ಬಳಸುತ್ತಿವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿವಾಹವಾದವರ ಪ್ರಮಾಣ ಶೇ 21.4ರಷ್ಟು. ಶೇ 70ರಷ್ಟು ಗರ್ಭಿಣಿಯರು ಮಾತ್ರ ಗರ್ಭವತಿ ಅವಧಿಯಲ್ಲಿ ನಾಲ್ಕು ತಪಾಸಣೆಗೆ ಒಳಗಾಗಿರುತ್ತಾರೆ. ಕಬ್ಬಿಣಾಂಶದ ಮಾತ್ರೆ ಸೇವಿಸುವ ಗರ್ಭಿಣಿಯರ ಪ್ರಮಾಣ ಶೇ 45.3 ಮಾತ್ರ. ರಾಜ್ಯದಲ್ಲಿ 2,353 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವೈದ್ಯರು 414 ಮಾತ್ರ. ನಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಕೊರತೆಯ ಪ್ರಮಾಣ ಶೇ 76ರಷ್ಟಿದೆ’ ಎನ್ನುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 2015–16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯನ್ನು ಅವರು ಮುಂದಿಡುತ್ತಾರೆ.

‘ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿ ಪ್ರಕಾರ ಸಾವಿರ ಜನರಿಗೆ ಒಬ್ಬರು ವೈದ್ಯರು ಇರಬೇಕು. ನಮ್ಮಲ್ಲಿ ಇರುವುದು 1,700 ಜನರಿಗೆ ಒಬ್ಬ ವೈದ್ಯರು. ತಜ್ಞ ವೈದ್ಯರು ನಗರ ಕೇಂದ್ರೀಕೃತವಾಗುತ್ತಿದ್ದಾರೆ. ಹೀಗಾಗಿ ಗ್ರಾಮೀಣರಿಗೆ ಸಕಾಲಕ್ಕೆ ತುರ್ತು ಸೇವೆ ದೊರೆಯುತ್ತಿಲ್ಲ. ದೇಶದಲ್ಲಿ ಅತಿ ಹೆಚ್ಚು ವೈದ್ಯರು ಹೊರಬರುತ್ತಿರುವುದು ನಮ್ಮ ರಾಜ್ಯದಿಂದ. ಆದರೂ, ಇಲ್ಲಿಯ ಸ್ಥಿತಿ ಹೀಗಿದೆ’ ಎಂದು ಹಳಹಳಿಸುತ್ತಾರೆ.

‘ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಪ್ರಸೂತಿಗೆ ಮುನ್ನ, ಪ್ರಸೂತಿ ಸಮಯದಲ್ಲಿ ರಕ್ತಸ್ರಾವವಾದರೆ ಅದನ್ನು ನಿರ್ಲಕ್ಷಿಸುತ್ತಾರೆ. ನನಗೂ ಹೀಗೇ ಆಗಿತ್ತು; ಏನೂ ಆಗಲ್ಲ ಬಿಡು ಎಂಬ ಹಿರಿಯ ಮಹಿಳೆಯರ ಉಪದೇಶವೂ ಅದಕ್ಕೆ ಕಾರಣ. ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ತೆರಳುತ್ತಾರೆ. ಹೈದರಾಬಾದ್‌ ಕರ್ನಾಟಕದಲ್ಲಿ ಇಂತಹ ಮನೋಭಾವ ಹೆಚ್ಚು. ಸರಿಯಾದ ಪೌಷ್ಟಿಕ ಆಹಾರ, ಚಿಕಿತ್ಸೆ ಪಡೆಯದೇ ನಿಷ್ಕಾಳಜಿ ವಹಿಸುವ ಮಹಿಳೆ, ತನಗರಿವಿಲ್ಲದಂತೆ ತನ್ನ ಮಗುವನ್ನೂ ಅನಾರೋಗ್ಯಕ್ಕೆ, ಸಾವಿನ ಕೂಪಕ್ಕೆ ದೂಡುತ್ತಾಳೆ’ ಎಂದು ಅವರು ಹೇಳುತ್ತಾರೆ.

‘ತಾಯಿ ಕಾರ್ಡ್‌ ಪಡೆದಿರುವ ಮಹಿಳೆಯ ಬಗೆಗೆ ನಿರಂತರ ನಿಗಾ ವಹಿಸುವುದರಿಂದ ತಾಯಿ ಮರಣ ಪ್ರಕರಣಗಳೆಲ್ಲ ದಾಖಲಾಗುತ್ತಿವೆ. ಹೀಗಾಗಿ ಅಂಕಿ–ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2020ರ ವೇಳೆಗೆ ಒಂದು ಲಕ್ಷ ಜೀವಂತ ಜನನಕ್ಕೆ ತಾಯಂದಿರ ಮರಣ ಪ್ರಮಾಣ 100 ಕಡಿಮೆ ಮಾಡಬೇಕು ಎಂಬುದು ಗುರಿ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂಬುದು ಆರೋಗ್ಯ ಇಲಾಖೆಯ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry