ಗಾಯಾಳು ಬಾಲಕನಿಗೆ ಶಿವರಾಜ್‌ಕುಮಾರ್ ಸಾಂತ್ವನ

7

ಗಾಯಾಳು ಬಾಲಕನಿಗೆ ಶಿವರಾಜ್‌ಕುಮಾರ್ ಸಾಂತ್ವನ

Published:
Updated:
ಗಾಯಾಳು ಬಾಲಕನಿಗೆ ಶಿವರಾಜ್‌ಕುಮಾರ್ ಸಾಂತ್ವನ

ಮೈಸೂರು: ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿರುವ ಬಾಲಕ ಉಲ್ಲೇಖ್‌ಗೆ ನಟ ಶಿವರಾಜ್‌ಕುಮಾರ್ ಇಲ್ಲಿ ಶನಿವಾರ ಸಾಂತ್ವನ ಹೇಳಿದರು.

‘ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಆಗ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಘಾತಕ್ಕೆ ಒಳಗಾದಾಗ ಧೈರ್ಯಗೆಡಬಾರದು. ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಆಗ ಯಶಸ್ಸು ಸಿಗುತ್ತದೆ’ ಎಂದು ಧೈರ್ಯ ತುಂಬಿದರು.

ಸದ್ವಿದ್ಯಾ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಉಲ್ಲೇಖ್ ಕಳೆದ ಅಕ್ಟೋಬರ್‌ನಲ್ಲಿ ಬಸ್‌ ಹತ್ತುವಾಗ ಬಿದ್ದು ಕಾಲು ಕಳೆದುಕೊಂಡಿದ್ದ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡುವ ಆಸೆ ವ್ಯಕ್ತಪಡಿಸಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry