ಕೈಗಾರಿಕಾ ಪ್ರಗತಿ 17 ತಿಂಗಳ ಗರಿಷ್ಠ

7

ಕೈಗಾರಿಕಾ ಪ್ರಗತಿ 17 ತಿಂಗಳ ಗರಿಷ್ಠ

Published:
Updated:

ನವದೆಹಲಿ : ದೇಶದ ಕೈಗಾರಿಕಾ ಪ್ರಗತಿಯು ನವೆಂಬರ್‌ನಲ್ಲಿ 17 ತಿಂಗಳ ಗರಿಷ್ಠ ಮಟ್ಟವಾದ ಶೇ 8.4ಕ್ಕೆ ಏರಿಕೆ ಕಂಡಿದೆ. ತಯಾರಿಕೆ ಮತ್ತು ಬಂಡವಾಳ ಸರಕುಗಳ ವಲಯದ ಉತ್ತಮ ಸಾಧನೆಯಿಂದ ಕೈಗಾರಿಕಾ ಪ್ರಗತಿ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಕೈಗಾರಿಕಾ ಪ್ರಗತಿಯು 2016ರ ನವೆಂಬರ್‌ನಲ್ಲಿ ಶೇ 5.1 ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಮಾಹಿತಿ ನೀಡಿದೆ.

2016ರ ಜೂನ್‌ನಲ್ಲಿ ಶೇ 8.9 ರಷ್ಟು ಗರಿಷ್ಠ ಮಟ್ಟದ ಪ್ರಗತಿ ಕಂಡಿತ್ತು. 2017ರ ಅಕ್ಟೋಬರ್‌ಗೆ ಪ್ರಗತಿಯನ್ನು ಪರಿಷ್ಕರಣೆ ಮಾಡಿದ್ದು ಶೇ 2.2 ರಿಂದ ಶೇ 2ಕ್ಕೆ ತಗ್ಗಿಸಲಾಗಿದೆ. ಐಐಪಿಗೆ ಶೇ 77.63 ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯವು ನವೆಂಬರ್‌ನಲ್ಲಿ ಶೇ 10.2 ರಷ್ಟು ಪ್ರಗತಿ ದಾಖಲಿಸಿದೆ. ಬಂಡವಾಳ ಸರಕುಗಳ ವಲಯ ಶೇ 9.4 ರಷ್ಟು ಪ್ರಗತಿ ಸಾಧಿಸಿದೆ.

23 ಕೈಗಾರಿಕೆಗಳಲ್ಲಿ 15 ಕೈಗಾರಿಗಳು ಸಕಾರಾತ್ಮಕ ಮಟ್ಟದ ಪ್ರಗತಿ ಕಂಡಿವೆ. ಉತ್ತಮ ಪ್ರಗತಿಯ ನಿರೀಕ್ಷೆ: ನವೆಂಬರ್‌ ತಿಂಗಳ ಕೈಗಾರಿಕಾ ಪ್ರಗತಿಯ ಬಗ್ಗೆ ಉದ್ಯಮ ವಲಯ ಹರ್ಷ ವ್ಯಕ್ತಪಡಿಸಿದೆ. ಮುಂದಿನ ತ್ರೈಮಾಸಿಕಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ವಾಣಿಜ್ಯ ವಾಹನಗಳ ವಿಭಾಗದ ಬೆಳವಣಿಗೆ ಹೆಚ್ಚುತ್ತಿರುವುದು ಮತ್ತು ಬ್ಯಾಂಕ್‌ ಸಾಲ ನೀಡಿಕೆಯಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವುದರಿಂದ ಐಐಪಿ ಗರಿಷ್ಠ ಪ್ರಗತಿ ಕಂಡಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಪ್ರಧಾನ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

‘ಜಿಎಸ್‌ಟಿಯಿಂದ ಉಂಟಾಗಿದ್ದ ಸಮಸ್ಯೆಗಳು ಬಹುತೇಕ ಕಡಿಮೆ ಆಗಿದೆ. ಕೈಗಾರಿಕಾ ಪ್ರಗತಿ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಗರಿಷ್ಠ ಪ್ರಮಾಣದ ಪ್ರಗತಿ ಸಾಧ್ಯವಾಗಲಿದೆ’ ಎಂದು ಪಿಎಚ್‌ಡಿ ಚೇಂಬರ್‌ನ ಅಧ್ಯಕ್ಷ ಅನಿಲ್‌ ಖೇತಾನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry