ಸಮಾಧಿಯನ್ನು ಸಿದ್ಧಪಡಿಸಿದ ಶಿಯಾ ಮುಖ್ಯಸ್ಥ!

7

ಸಮಾಧಿಯನ್ನು ಸಿದ್ಧಪಡಿಸಿದ ಶಿಯಾ ಮುಖ್ಯಸ್ಥ!

Published:
Updated:

ಲಖನೌ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಬೇಕು ಹಾಗೂ ಮದರಸಾಗಳನ್ನು ಮುಚ್ಚಬೇಕು ಎಂದು ಹೇಳಿಕೆ ನೀಡಿದ್ದ ಶಿಯಾ ವಕ್ಫ್‌ ಮಂಡಳಿಯ ಅಧ್ಯಕ್ಷ ವಸೀಂ ರಿಜ್ವಿ ಅವರು ತನ್ನ ‘ಸಮಾಧಿ’ಯನ್ನು ಈಗಾಗಲೇ ನಿರ್ಮಿಸಿರುವುದಾಗಿ ಹೇಳಿದ್ದಾರೆ.

‘ನನಗೆ ಬೆದರಿಕೆಗಳು ಹೆಚ್ಚುತ್ತಿದ್ದು, ತಲ್‌ಕಟೋರಾದಲ್ಲಿ ನಾಮಫಲಕ ಅಳವಡಿಸಿ, ಸಮಾಧಿ ಕೆಲಸವನ್ನು ಪೂರ್ಣಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ದೂರವಾಣಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬೆದರಿಕೆಗಳು ಬರುತ್ತಿವೆ. ಯಾವುದೇ ಸಂದರ್ಭದಲ್ಲೂ ನನಗೆ ಅಪಾಯ ಸಂಭವಿಸುವ ಸಾಧ್ಯತೆಯಿದ್ದು, ಇದಕ್ಕಾಗಿ ನಾನು ಸಮಾಧಿ ನಿರ್ಮಿಸಿದ್ದೇನೆ’ ತಿಳಿಸಿದರು.

‘ರಿಜ್ವಿ ಅವರ ನಡೆಯನ್ನು ಮುಸ್ಲಿಂ ಧಾರ್ಮಿಕ ಗುರುಗಳು ಟೀಕಿಸಿದ್ದು, ಸರ್ಕಾರದಿಂದ ಭದ್ರತೆ ಪಡೆಯಲು ರಿಜ್ವಿ ಈ ರೀತಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry