ಸಿರಿಧಾನ್ಯ ಮೇಳದಲ್ಲಿ 350 ಕಂಪನಿ ಭಾಗಿ

7
ಜ.19ರಿಂದ 21ರವರೆಗೆ ನಡೆಯುವ ಮೇಳಕ್ಕೆ ಅರಮನೆ ಸಜ್ಜು

ಸಿರಿಧಾನ್ಯ ಮೇಳದಲ್ಲಿ 350 ಕಂಪನಿ ಭಾಗಿ

Published:
Updated:
ಸಿರಿಧಾನ್ಯ ಮೇಳದಲ್ಲಿ 350 ಕಂಪನಿ ಭಾಗಿ

ಬೆಂಗಳೂರು: ಇದೇ ಮೊದಲ ಬಾರಿಗೆ ಜ.19ರಿಂದ 21ರವರೆಗೆ ನಡೆಯಲಿರುವ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಸಿಲಿಕಾನ್‌ ಸಿಟಿಯ ಅರಮನೆ ಸಜ್ಜಾಗುತ್ತಿದೆ.

350 ಮಳಿಗೆಗಳನ್ನು ಅರಮನೆ ಪ್ರಾಂಗಣದಲ್ಲಿ ಸಿದ್ಧಪಡಿಸಲಾಗುತ್ತಿದೆ. ಅಮೆರಿಕ, ಯುರೋಪ್‌, ಜರ್ಮನಿ, ಸ್ವಿಟ್ಜರ್‌ಲೆಂಡ್‌, ಯುಎಇ, ದಕ್ಷಿಣ ಕೊರಿಯಾ, ಉಗಾಂಡ, ಚೀನಾ ಸೇರಿ 10 ರಾಷ್ಟ್ರಗಳ ತಜ್ಞರು ಮತ್ತು ಖರೀದಿದಾರರು ಭಾಗವಹಿಸಲಿದ್ದಾರೆ.

ಪ್ರಮಾಣೀಕೃತ ಸಾವಯವ ಸಿರಿಧಾನ್ಯಗಳು ಮತ್ತು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲು 350 ಕಂಪನಿಗಳು ಪಾಲ್ಗೊಳ್ಳಲಿವೆ. ರಾಜ್ಯದ 14 ಸಾವಯವ ರೈತರ ಒಕ್ಕೂಟಗಳೂ ಉತ್ಪನ್ನ ಮಾರಾಟ ಮಾಡಲಿವೆ.

ಮೇಳದಲ್ಲಿ ಆಹಾರ ಮಳಿಗೆಗಳೂ ಇರಲಿದ್ದು, ದೇಶದ ಹೆಸರಾಂತ 20 ರೆಸ್ಟೊರೆಂಟ್‌ಗಳು ಸಾವಯವ ಸಿರಿಧಾನ್ಯ ಖಾದ್ಯ ಪರಿಚಯಿಸಲಿವೆ. ಅಡುಗೆ ಪ್ರದರ್ಶನ ಮತ್ತು ಅಡುಗೆ ತಯಾರಿಕೆ ಸ್ಪರ್ಧೆಯೂ ಇರಲಿದೆ. 20 ರೀಟೆಲ್‌ ಕಂಪನಿಗಳ ಸಿಇಒಗಳು ಖರೀದಿದಾರರಾಗಿ ಭಾಗವಹಿಸಲಿದ್ದಾರೆ.

‘ಸಾವಯವ ಮತ್ತು ಸಿರಿಧಾನ್ಯ ಬೆಳೆಯುವ ರೈತರು, ಉದ್ಯಮದಾರರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಕೊಂಡಿ ಬೆಸೆಯಲು ಮೇಳ ಆಯೋಜಿಸಲಾಗಿದೆ.

ಸುಮಾರು 10,000 ರೈತರು ಪಾಲ್ಗೊಳ್ಳಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry