ಅಶ್ವಿನ್‌, ಇಶಾಂತ್‌ ಮಿಂಚಿನ ಬೌಲಿಂಗ್‌: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ 335 ರನ್‌ಗೆ ಆಲೌಟ್‌

7

ಅಶ್ವಿನ್‌, ಇಶಾಂತ್‌ ಮಿಂಚಿನ ಬೌಲಿಂಗ್‌: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ 335 ರನ್‌ಗೆ ಆಲೌಟ್‌

Published:
Updated:
ಅಶ್ವಿನ್‌, ಇಶಾಂತ್‌ ಮಿಂಚಿನ ಬೌಲಿಂಗ್‌: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ 335 ರನ್‌ಗೆ ಆಲೌಟ್‌

ಸೆಂಚೂರಿಯನ್‌, ದಕ್ಷಿಣ ಆಫ್ರಿಕಾ: ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಭಾನುವಾರ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು.

ಶನಿವಾರ ಆರಂಭಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ  ಭಾರತದ ವಿರುದ್ಧ ಟಾಸ್‌ ಗೆದ್ದ ಆತಿಥೇಯರು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು.

ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡಕ್ಕೆ 269 ರನ್ ಗಳಿಸಿತ್ತು. ಭಾನುವಾರ ಆರ್‌.ಅಶ್ವಿನ್‌ ಹಾಗೂ ವೇಗಿ ಇಶಾಂತ್‌ ಶರ್ಮಾ ಮಿಂಚಿನ ಬೌಲಿಂಗ್‌ ದಾಳಿಗೆ ತತ್ತರಿಸಿದ ಎದುರಾಳಿ ತಂಡ 335 ರನ್‌ ಗಳಿಸಿ ಆಲೌಟ್‌ ಆಗಿದೆ.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್‌ 31, ಏಡನ್‌ ಮರ್ಕರಮ್‌ 94, ಹಾಶೀಂ ಆಮ್ಲಾ 82, ಎ.ಬಿ ಡಿವಿಲಿರ್ಯಸ್‌ 20, ಫಾಫ್‌ ಡು ಪ್ಲೆಸಿ 63, ಕ್ವಿಂಟನ್ ಡಿ ಕಾಕ್‌ 00, ವೆರ್ನಾನ್ ಫಿಲ್ಯಾಂಡರ್‌ 00, ಕೇಶವ್ ಮಹಾರಾಜ್‌ 18, ಕಗಿಸೊ ರಬಾಡ 11, ಮಾರ್ನೆ ಮಾರ್ಕೆಲ್‌ 06, ಲುಂಗಿ ಜಿಡಿ ಬ್ಯಾಟಿಂಗ್‌ 01 ರನ್‌ ಗಳಿಸಿದ್ದಾರೆ.

ಭಾರತದ ಪರ: ಆರ್‌.ಅಶ್ವಿನ್‌ 4, ಇಶಾಂತ್ ಶರ್ಮಾ 3, ಮಹಮ್ಮದ್ ಶಮಿ 1 ವಿಕೆಟ್‌ ಪಡೆದರು.

ಸದ್ಯ ಮೊದಲ ಇನಿಂಗ್ಸ್‌ ಆರಂಭಿಸಿರುವ ಭಾರತ 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry