ಅವಲಕ್ಕಿಯ ಸಿಹಿ ಖಾರ ಪೊಂಗಲ್

7

ಅವಲಕ್ಕಿಯ ಸಿಹಿ ಖಾರ ಪೊಂಗಲ್

Published:
Updated:
ಅವಲಕ್ಕಿಯ ಸಿಹಿ ಖಾರ ಪೊಂಗಲ್

–ಉಮಾ ಸರ್ವೇಶ್

ಅವಲಕ್ಕಿ ಸಿಹಿ ಪೊಂಗಲ್

ಬೇಕಾಗುವ ಸಾಮಗ್ರಿ
: ಗಟ್ಟಿ ಅವಲಕ್ಕಿ ಒಂದು ಕಪ್, ಹೆಸರುಬೇಳೆ ಮುಕ್ಕಾಲು ಕಪ್, ಬೆಲ್ಲ ಒಂದು ಕಪ್, ಅರ್ಧ ಕಪ್ ಹಾಲು‌, ಅರ್ಧ ಚಮಚ ಒಣ ಶುಂಠಿ ಪುಡಿ , ತುಪ್ಪ ಅರ್ಧ ಕಪ್, ಗೋಡಂಬಿ, ದ್ರಾಕ್ಷಿ , ಏಲಕ್ಕಿ ಪುಡಿ ರುಚಿಗೆ ತಕ್ಕಷ್ಟು. ಕೊಬ್ಬರಿತುರಿ ಒಂದು ಕಪ್

ಮಾಡುವ ವಿಧಾನ: ಮೊದಲು ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ನೆನೆಸಿಡಿ. ಹೆಸರುಬೇಳೆ ಹುರಿದು ಒಂದು ಕಪ್ ನೀರುಹಾಕಿ ಕುಕ್ಕರಿನಲ್ಲಿ ಬೇಯಿಸಿ. (ಒಂದು ವಿಷಲ್ ಸಾಕು). ನಂತರ ಬೆಲ್ಲವನ್ನು ಕರಗಿಸಿ ಸೋಸಿಕೊಳ್ಳಿ, ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿ ಕೆಂಪಗೆ ಹುರಿದುಕೊಳ್ಳಿ. ಸ್ವಲ್ಪ ಕೊಬ್ಬರಿಯನ್ನು ಉದ್ದಕ್ಕೆ ಕತ್ತರಿಸಿ ಸ್ವಲ್ಪ ಕೆಂಬಣ್ಣ ಬರುವಂತೆ ಹುರಿದುಕೊಳ್ಳಿ. ಬೆಂದಿರುವ ಹೆಸರುಬೇಳೆಗೆ ಕೊಬ್ಬರಿ ತುರಿ ಹಾಗೂ ಸ್ವಲ್ಪ ನೀರು ಮತ್ತು ಅವಲಕ್ಕಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಹಾಲು, ಕುದಿಸಿ ಸೋಸಿದ ಬೆಲ್ಲ ಹಾಕಿ ಕೊನೆಗೆ ತುಪ್ಪದಲ್ಲಿ ಹುರಿದಿಟ್ಟ ಗೋಡಂಬಿ, ದ್ರಾಕ್ಷಿಯನ್ನು ಹಾಕಿ, ನಂತರ ಏಲಕ್ಕಿಪುಡಿ, ಶುಂಠಿ ಪುಡಿ ಎಲ್ಲವನ್ನೂ ಹಾಕಿ. ಆರಂಭದಲ್ಲಿ ಈ ಮಿಶ್ರಣ ನೀರಿನಂತಿದ್ದರು ಸ್ವಲ್ಪ ಹೊತ್ತಿನ ನಂತರ ಗಟ್ಟಿಯಾಗುತ್ತದೆ. ಈಗ ಅವಲಕ್ಕಿ ಸಿಹಿ ಪೊಂಗಲ್ ಸವಿಯಲು ಸಿದ್ಧ.

*

ಅವಲಕ್ಕಿ ಖಾರ ಪೊಂಗಲ್

ಬೇಕಾಗುವ ಸಾಮಗ್ರಿ:
ಗಟ್ಟಿ ಅವಲಕ್ಕಿ ಒಂದು ಕಪ್, ಹೆಸರುಬೇಳೆ ಮುಕ್ಕಾಲು ಕಪ್, ತುಪ್ಪ ಅರ್ಧಕಪ್, ಕರಿಮೆಣಸು ಮತ್ತು ಜೀರಿಗೆ ಒಂದು ಚಮಚ, ಗೋಡಂಬಿ, ಉಪ್ಪು, ಶುಂಠಿ, ಇಂಗು, ಕರಿಬೇವು, ಹಸಿಮೆಣಸಿನಕಾಯಿ ಎರಡು, ಚಿಟಿಕೆ ಅರಿಶಿನ ಪುಡಿ, ಒಂದು ಕಪ್ ಕಾಯಿತುರಿ

ಮಾಡುವ ವಿಧಾನ: ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ನೆನೆಸಿಡಿ. ಹೆಸರುಬೇಳೆಯನ್ನು ಘಮ್ ಎನ್ನುವವರೆಗೆ ಹುರಿದು ಕುಕ್ಕರ್‌ನಲ್ಲಿರಿಸಿ ಒಂದು ವಿಷಲ್ ಕೂಗಿಸಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಕರಿ ಮೆಣಸು–ಜೀರಿಗೆ, ಗೋಡಂಬಿ, ಶುಂಠಿ, ಮೆಣಸಿನಕಾಯಿ, ಕರಿಬೇವು ಇಂಗು ಎಲ್ಲ ಬಾಡಿಸಿ, ಬೆಂದಿರುವ ಹೆಸರು ಬೇಳೆಗೆ ನೆನೆಸಿಟ್ಟ ಅವಲಕ್ಕಿ ಮತ್ತು ಸ್ವಲ್ಪ ನೀರುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಕುದಿ ಬಂದಮೇಲೆ ಹುರಿದಿಟ್ಟ ಪದಾರ್ಥ, ಕಾಯಿತುರಿ, ತುಪ್ಪ ಹಾಕಿ ಕೈಯಾಡಿಸಿ. ಈಗ ಬಿಸಿಬಿಸಿಯಾದ ರುಚಿಕರ ಅವಲಕ್ಕಿ ಕಾರ ಪೊಂಗಲ್ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry