ಎನ್‌ಬಿಎಫ್‌ಸಿ: ಉತ್ತಮ ಆರ್ಥಿಕ ಸಾಧನೆ ನಿರೀಕ್ಷೆ

7

ಎನ್‌ಬಿಎಫ್‌ಸಿ: ಉತ್ತಮ ಆರ್ಥಿಕ ಸಾಧನೆ ನಿರೀಕ್ಷೆ

Published:
Updated:
ಎನ್‌ಬಿಎಫ್‌ಸಿ: ಉತ್ತಮ ಆರ್ಥಿಕ ಸಾಧನೆ ನಿರೀಕ್ಷೆ

ನವದೆಹಲಿ: ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕಿಂಗ್‌ ವಲಯಕ್ಕಿಂತಲೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಆರ್ಥಿಕ ಸಾಧನೆ ಉತ್ತಮವಾಗಿರಲಿದೆ ಎನ್ನುವುದು ತಜ್ಞರ ನಿರೀಕ್ಷೆಯಾಗಿದೆ.‌

ವಸೂಲಿಯಾಗದ ಸಾಲ (ಎನ್‌ಪಿಎ) ಗರಿಷ್ಠ ಮಟ್ಟದಲ್ಲಿ ಇರುವುದು ಬ್ಯಾಂಕ್‌ಗಳ ಆರ್ಥಿಕ ಸಾಧನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಆದರೆ ಎನ್‌ಬಿಎಫ್‌ಸಿ ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವುದರಿಂದ ಫಲಿತಾಂಶವೂ  ಉತ್ತಮವಾಗಿರಲಿದೆ (ಶೇ 30–ಶೇ 40ರಷ್ಟು ಪ್ರಗತಿ) ಎಂದು ಕೋಟಕ್‌ ಇನ್‌ಸ್ಟಿಟ್ಯೂಷನಲ್‌ ಈಕ್ವಿಟೀಸ್‌ ವರದಿಯಲ್ಲಿ ತಿಳಿಸಿದೆ.

ಸಾಲದ ಮೇಲಿನ ವೆಚ್ಚ ಇಳಿಕೆ ಕಾಣುತ್ತಿದೆ. ರೇರಾದಿಂದಾಗಿ ಗೃಹ ಸಾಲ ನೀಡಿಕೆಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೆಚ್ಚಾಗುತ್ತಿದೆ.ಹಬ್ಬದ ಸಂದರ್ಭದಲ್ಲಿನ ಬೇಡಿಕೆಯೂ ಎನ್‌ಬಿಎಫ್‌ಸಿಗಳ ಪ್ರಗತಿಗೆ ನೆರವಾಗಲಿದೆ ಎಂದೂ ಹೇಳಿದೆ.

ಎನ್‌ಬಿಎಫ್‌ಸಿಗಳ ಚಿಲ್ಲರೆ ಸಾಲ ನೀಡಿಕೆಯು ಶೇ 16 ರಿಂದ ಶೇ 18ರಷ್ಟು ಪ್ರಗತಿ ಕಾಣಲಿದ್ದು ₹ 6.6 ಲಕ್ಷ ಕೋಟಿಗಳಿಗೆ ತಲುಪಲಿದೆ ಎಂದು ಇಂಡಿಯನ್‌ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ (ಇಕ್ರಾ) ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry