ಇಂದಿನಿಂದ ಆಸ್ಟ್ರೇಲಿಯಾ ಓಪನ್ ಟೆನಿಸ್‌

7
ಸೆಂಟರ್‌ ಕೋರ್ಟ್‌ನ ಮೊದಲ ಪಂದ್ಯದಲ್ಲಿ ವೀನಸ್ ವಿಲಿಯಮ್ಸ್‌ಗೆ ಬೆಲಿಂಡಾ ಸವಾಲು

ಇಂದಿನಿಂದ ಆಸ್ಟ್ರೇಲಿಯಾ ಓಪನ್ ಟೆನಿಸ್‌

Published:
Updated:
ಇಂದಿನಿಂದ ಆಸ್ಟ್ರೇಲಿಯಾ ಓಪನ್ ಟೆನಿಸ್‌

ಮೆಲ್ಬರ್ನ್‌ (ರಾಯಿಟರ್ಸ್‌): ಸ್ವಿಟ್ಜರ್ಲೆಂಡ್‌ನ ಯುವ ಪ್ರತಿಭೆ ಬೆಲಿಂದಾ ಬೆನ್ಸಿಕ್‌ ಮತ್ತು ಕಳೆದ ಬಾರಿ ಫೈನಲ್‌ನಲ್ಲಿ ಆಡಿದ ವೀನಸ್ ವಿಲಿಯಮ್ಸ್ ನಡುವಿನ ಹಣಾಹಣಿಯೊಂದಿಗೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದೆ.

ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿ ಶುಭಾರಂಭ ಮಾಡಲು ಆಟಗಾರರು ಕಾತರರಾಗಿದ್ದಾರೆ. ರಾಡ್‌ ಲಾವೆರ್‌ ಅರೆನಾದ ಸೆಂಟರ್‌ ಕೋರ್ಟ್‌ನಲ್ಲಿ ಯುವ ಮತ್ತು ಹಿರಿಯ ಆಟಗಾರ್ತಿಯರ ನಡುವಿನ ಮೊದಲ ಕಾದಾಟದ ಮೂಲ ಟೂರ್ನಿ ರೋಮಾಂಚಕ ಆರಂಭ ಕಾಣಲಿದೆ.

ಎಂಟು ವರ್ಷಗಳ ನಂತರ ಕಳೆದ ಬಾರಿ ವೀನಸ್ ವಿಲಿಯಮ್ಸ್‌ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಸಹೋದರಿ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತಿದ್ದರು. ಇತ್ತೀಚೆಗೆ ತಾಯಿಯಾಗಿರುವ ಸೆರೆನಾ ಈ ಬಾರಿ ಟೂರ್ನಿಯಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ಹೀಗಾಗಿ ಮಹಿಳಾ ವಿಭಾಗ ಭಾರಿ ಕುತೂಹಲ ಕೆರಳಿಸಿದೆ. 2008ರ ವಿಂಬಲ್ಡನ್ ಪ್ರಶಸ್ತಿಯ ನಂತರ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಕನಸಿ

ನಲ್ಲಿರುವ ವೀನಸ್‌ ಕೂಡ ಭರವಸೆಯಲ್ಲಿದ್ದಾರೆ.

ನಡಾಲ್‌ಗೆ ವಿಕ್ಟರ್ ಎದುರಾಳಿ: ಟೂರ್ನಿಯಲ್ಲಿ ಮೊದಲ ಶ್ರೇಯಾಂಕಿತ ಆಟಗಾರ ರಫೆಲ್ ನಡಾಲ್‌ ಸಂಜೆ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ವಿಕ್ಟರ್ ಎಸ್ಟ್ರೆಲಾ ಬರ್ಗೊಸ್ ಅವರನ್ನು ಎದುರಿಸುವರು. ಮೊಣಕಾಲು ನೋವಿನಿಂದ ಚೇತರಿಸಿಕೊಂಡಿರುವ ನಡಾಲ್‌ಗೆ ಈ ಟೂರ್ನಿಗಾಗಿ ಹೆಚ್ಚು ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ. 17ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಅವರಿಗೆ ಮೊದಲ ಪಂದ್ಯ ಮಹತ್ವದ್ದಾಗಿದೆ. ಜೆಲೆನಾ ಓಸ್ತಪೆಂಕೊ, ಫ್ರಾನ್ಸೆಸ್ಕಾ ಶವೋನಿ, ಸ್ಲಾನ್ ಸ್ಟೀಫನ್ಸ್‌, ಜಾಂಗ್ ಶೂಯಿ ಮೊದಲಾದವರ ಪಂದ್ಯಗಳು ಕೂಡ ಮೊದಲ ದಿನ ಗಮನ ಸೆಳೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry