ಭಾರತೀಯ ಸೇನೆಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

7

ಭಾರತೀಯ ಸೇನೆಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

Published:
Updated:
ಭಾರತೀಯ ಸೇನೆಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ನವದೆಹಲಿ: ಭಾರತೀಯ ಸೇನೆ ಸೋಮವಾರ 70ನೇ ವರ್ಷದ ‘ಸೇನಾ ದಿನ’ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಶುಭಾಶಯ ಕೋರಿದ್ದಾರೆ.

ಭಾರತೀಯ ಸೇನೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು, ‘ಭಾರತೀಯ ಸೇನೆಯ ವೀರ ಯೋಧರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಸೇನಾ ದಿನದ ಅಭಿನಂದನೆಗಳು. ನಮ್ಮ ಸ್ವಾತಂತ್ರ್ಯದ ಕಾವಲುಗಾರರಾದ ನೀವು ಈ ದೇಶದ ಹೆಮ್ಮೆ. ನೀವು ಎಚ್ಚರದಿಂದಿದ್ದು ಗಡಿ ಕಾಯುತ್ತಿರುವುದರಿಂದಲೇ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವುದು’ ಎಂದು ಹೇಳಿದ್ದಾರೆ.

‘ಸೇನಾ ದಿನಾಚರಣೆಯ ಈ ಸಂದರ್ಭದಲ್ಲಿ ಯೋಧರು ಮತ್ತು ಅವರ ಕುಟುಂಬದವರಿಗೆ ನನ್ನ ಶುಭಾಶಯಗಳು. ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ಸೇನೆಯ ಬಗ್ಗೆ ಗೌರವ, ನಂಬಿಕೆ ಮತ್ತು ಹೆಮ್ಮೆ ಇದೆ. ರಾಷ್ಟ್ರವನ್ನು ರಕ್ಷಿಸುವುದರ ಜತೆಗೆ ನೈಸರ್ಗಿಕ ವಿಕೋಪಗಳಂಥ ಸಂದರ್ಭಗಳಲ್ಲಿ ಮಾನವೀಯ ಸಹಾಯಕ್ಕೆ ಧಾವಿಸುವ ಸೇನೆಯ ಬಗ್ಗೆ ಗೌರವ ಇದ್ದೇ ಇದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರೂ ಸೇನಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry