ದಂಗಲ್‌ಗೆ ಜಯ

7

ದಂಗಲ್‌ಗೆ ಜಯ

Published:
Updated:

ನವದೆಹಲಿ: ಕೊನೆಯಲ್ಲಿ ‘ಹ್ಯಾಟ್ರಿಕ್’ ಜಯ ಸಾಧಿಸಿದ ಯು.ಪಿ.ದಂಗಲ್ ತಂಡ ಪ್ರೊ ಕುಸ್ತಿ ಲೀಗ್‌ನಲ್ಲಿ ಡೆಲ್ಲಿ ಸುಲ್ತಾನ್ಸ್ ವಿರುದ್ಧ 4–3ರಿಂದ ಗೆದ್ದಿತು. ಇಲ್ಲಿನ ಸಿರಿ ಪೋರ್ಟ್‌ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದ ಮೊದಲ ಬೌಟ್‌ನಲ್ಲಿ ಶುಭಾರಂಭ ಮಾಡಿದ ಡೆಲ್ಲಿ ನಂತರ ವೈಫಲ್ಯ ಕಂಡಿತು.

57 ಕೆಜಿ ವಿಭಾಗದ ಮೊದಲ ಬೌಟ್‌ನಲ್ಲಿ ನಿತಿನ್‌ ವಿರುದ್ಧ ಜಯ ಗಳಿಸಿ ಸಂದೀಪ್ ತೋಮರ್‌ ಡೆಲ್ಲಿ ಪಾಳಯದಲ್ಲಿ ಸಂಭ್ರಮ ಉಕ್ಕಿಸಿದರು. ಆದರೆ 76 ಕೆಜಿ ವಿಭಾಗದ ಎರಡನೇ ಬೌಟ್‌ನಲ್ಲಿ ಜನೆತ್‌ ನೆಮೆತ್‌ ಡೆಲ್ಲಿ ತಂಡದ ಇಬ್ರಾಹಿಂ ಹಂಝ ವಿರುದ್ಧ ಗೆದ್ದು ತಿರುಗೇಟು ನೀಡಿದರು.

ಮುಂದಿನ ಬೌಟ್‌ನಲ್ಲಿ ಡೆಲ್ಲಿ ಜಯ ಸಾಧಿಸಿತು. 92 ಕೆಜಿ ವಿಭಾಗದ ಈ ಬೌಟ್‌ನಲ್ಲಿ ಅಲ್ಬೊರೊವ್‌ ಅಸ್ಲಾನ್‌ ಏಕ‍ಪಕ್ಷೀಯವಾಗಿ ವಿಕ್ಕಿ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry