ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಜತೆ ಪತಂಜಲಿ ಉದ್ಯಮ ಸಹಯೋಗ

7

ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಜತೆ ಪತಂಜಲಿ ಉದ್ಯಮ ಸಹಯೋಗ

Published:
Updated:
ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಜತೆ ಪತಂಜಲಿ ಉದ್ಯಮ ಸಹಯೋಗ

ನವದೆಹಲಿ: ಯೋಗ ಗುರು ಬಾಬಾ ರಾಮ್‌ದೇವ್ ಒಡೆತನದ ‘ಪತಂಜಲಿ ಆಯುರ್ವೇದ’ ಸಂಸ್ಥೆಯು ಇ–ಕಾಮರ್ಸ್‌ ಕಂಪೆನಿಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಮತ್ತಿತರ ಕಂಪೆನಿಗಳ ಜತೆ ಉದ್ಯಮ ಸಹಯೋಗ ಮಾಡಿಕೊಂಡಿದೆ.

ಇನ್ನು ಪತಂಜಲಿ ಉತ್ಪನ್ನಗಳು ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ, ಬಿಗ್ ಬಾಸ್ಕೆಟ್, ಗ್ರೊಫರ್ಸ್, ನೆಟ್‌ಮೆಡ್ಸ್ ಮತ್ತು ಇತರ ಇ–ಕಾಮರ್ಸ್ ತಾಣಗಳಲ್ಲಿ ಲಭ್ಯವಿರಲಿವೆ. ಜತೆಗೆ, patanjaliayurved.net. ಎಂಬ ಆನ್‌ಲೈನ್‌ ತಾಣವನ್ನೂ ಪತಂಜಲಿ ಆರಂಭಿಸಿದೆ.

‘ನಿಯಮಗಳು ಮತ್ತು ವ್ಯಾಪಾರ ನೀತಿಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಪತಂಜಲಿ ಉತ್ಪನ್ನಗಳನ್ನು ಪ್ರತಿ ಮನೆಗಳಿಗೂ ತಲುಪಿಸುವುದನ್ನು ಖಚಿತಪಡಿಸುವುದರ ಜತೆಗೆ, ಸ್ವದೇಶಿ ಚಳವಳಿ ಕುರಿತು ಕಾಳಜಿ ವಹಿಸಲಾಗುವುದು’ ಎಂದು ರಾಮ್‌ದೇವ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry