ಡಿವಿಎಸ್‌ ಮುಖ್ಯಮಂತ್ರಿ ಮಾಡಿದ್ದೇ ನಾನು: ಎಚ್‌ಡಿಕೆ

7

ಡಿವಿಎಸ್‌ ಮುಖ್ಯಮಂತ್ರಿ ಮಾಡಿದ್ದೇ ನಾನು: ಎಚ್‌ಡಿಕೆ

Published:
Updated:
ಡಿವಿಎಸ್‌ ಮುಖ್ಯಮಂತ್ರಿ ಮಾಡಿದ್ದೇ ನಾನು: ಎಚ್‌ಡಿಕೆ

ಬೆಂಗಳೂರು:‘ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದೇ ನನ್ನ ಹೋರಾಟದಿಂದ’ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ನನ್ನ ಪರಿಶ್ರಮ, ಹೋರಾಟ ಇಲ್ಲದಿದ್ದರೆ ಅವರು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ’ ಎಂದು ಅವರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ತಮ್ಮ ಕುರಿತು ಸದಾನಂದಗೌಡ ನೀಡಿದ ಹೇಳಿಕೆ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕಾಗಿ ನನ್ನ ಬಳಿ ಬಂದವರು ಈಗ ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಮಂತ್ರಿ ಮಾಡಿ ಎಂದು ಬಿ.ಎಸ್‌.ಯಡಿಯೂರಪ್ಪ ಅರ್ಜಿ ಹಿಡಿದುಕೊಂಡು ಬಂದಿದ್ದರು. ಪಕ್ಷ ಒಡೆಯಲು ಸಿದ್ಧರಿದ್ದರು. ಆದರೆ, ನಾವು ಅವರ ಪಕ್ಷ ಒಡೆಯಲು ಹೋಗಲಿಲ್ಲ. ಅಧಿಕಾರಕ್ಕಾಗಿ ಬಿಜೆಪಿಯವರೇ ನನ್ನ ಮನೆಯ ಬಳಿಗೆ ಬಂದರೇ ಹೊರತು, ನಾನು ಅವರ ಮನೆಗೆ ಹೋಗಲಿಲ್ಲ’ ಎಂದು ತಿಳಿಸಿದರು.

ಸದಾನಂದಗೌಡರು ರಾಜ್ಯದಲ್ಲಿ ಎಷ್ಟರಮಟ್ಟಿಗೆ ಹೋರಾಟ ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಅವರ ಶಕ್ತಿ ಏನೆಂಬುದು ಗೊತ್ತು. ನಮ್ಮ ಪಕ್ಷದ ಬಗ್ಗೆ ಅವರು ನೀಡಿರುವ ಎರಡಂಕಿ ಹೇಳಿಕೆ ಖಂಡನೀಯ. ಇದು ಅವರ ಭ್ರಮೆ ಎಂದು ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry