ಅಥಣಿ: ಮೋಟಗಿ ಮಠದ ಸ್ವಾಮೀಜಿ ಕಾಂಗ್ರೆಸ್‌ ಅಭ್ಯರ್ಥಿ?

7

ಅಥಣಿ: ಮೋಟಗಿ ಮಠದ ಸ್ವಾಮೀಜಿ ಕಾಂಗ್ರೆಸ್‌ ಅಭ್ಯರ್ಥಿ?

Published:
Updated:

ಬೆಳಗಾವಿ:ಜಿಲ್ಲೆಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರನ್ನು ಅಥಣಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ಪ್ರಯತ್ನ ನಡೆಸಿದೆ.

ಈ ಕ್ಷೇತ್ರದಿಂದ ಬಿಜೆಪಿಯ ಲಕ್ಷ್ಮಣ ಸವದಿ ಸತತ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಪ್ರಬಲರಾಗಿರುವ ಅವರನ್ನು ಎದುರಿಸಲು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ ಇರುವ ಕಾರಣ ಪಕ್ಷದ ಮುಖಂಡರು ಸ್ವಾಮೀಜಿ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಕ್ತರ ತೀರ್ಮಾನ: ‘ಕಾಂಗ್ರೆಸ್ಸಿನ ಪ್ರಮುಖರು ಚರ್ಚಿಸಿದ್ದು ನಿಜ. ಈ ವಿಷಯವನ್ನು ಮಠದ ಭಕ್ತರ ಮುಂದೆ ಇಟ್ಟಿದ್ದೇನೆ. ಅವರ ನಿರ್ಣಯಕ್ಕಾಗಿ ಕಾಯುತ್ತಿದ್ದೇನೆ. ರಾಜಕಾರಣದ ಮೂಲಕ ಸಮಾಜ ಸೇವೆ ಮಾಡಲು ಅವಕಾಶ ದೊರೆತರೆ ಅದಕ್ಕೆ ಸಿದ್ಧನಿದ್ದೇನೆ ಎಂದರು.

ಬಸವಣ್ಣನ ಮಾರ್ಗ: ‘ಅಧಿಕಾರದ ಮೂಲಕ ಹೆಚ್ಚು ಜನರ ಸೇವೆ ಮಾಡಬಹುದು ಎನ್ನುವುದನ್ನು ಬಸವಣ್ಣ ತೋರಿಸಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ನಡೆಯಲು ಸಿದ್ಧನಿದ್ದೇನೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry