ರಾತ್ರಿ ಬಂದ 230 ಮತ ಖಾತ್ರಿ ಯಂತ್ರಗಳು

7

ರಾತ್ರಿ ಬಂದ 230 ಮತ ಖಾತ್ರಿ ಯಂತ್ರಗಳು

Published:
Updated:

ದಾವಣಗೆರೆ: ಮತದಾನ ಖಾತ್ರಿ ಯಂತ್ರಗಳು ಮಂಗಳವಾರ ರಾತ್ರಿ ಜಿಲ್ಲೆಗೆ ಬಂದಿಳಿದಿವೆ. ಇವಿಎಂ ಜತೆಗೆ 230 ವಿವಿ ಪ್ಯಾಟ್ (ವೋಟರ್ ವೆರಿಫೈಯೇಬಲ್‌ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳನ್ನು ಜಿಲ್ಲಾಡಳಿತದ ಭದ್ರತಾ ಕೊಠಡಿಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯಲ್ಲಿ ಇಡಲಾಗಿದೆ.

ಶಸ್ತ್ರಸಜ್ಜಿತ ಪೊಲೀಸ್‌ ಭದ್ರತೆಯಲ್ಲಿ ಟ್ರಕ್‌ ಮೂಲಕ ಈ ಯಂತ್ರಗಳನ್ನು ತರಲಾಗಿದೆ. ಚಿತ್ರದುರ್ಗ, ದಾವಣಗೆರೆ, ಧಾರವಾಡ ಜಿಲ್ಲೆಗಳಿಗೆ ಈ ಯಂತ್ರಗಳನ್ನು ಬೆಲ್‌ ಕಂಪನಿ ಪೂರೈಸಿದೆ. ಟ್ರಕ್‌ಗೆ ಆಯಾ ಜಿಲ್ಲೆಗಳ ನೋಡಲ್‌ ಅಧಿಕಾರಿಗಳ ಜತೆ ಆಯಾ ಜಿಲ್ಲೆಗಳ ಪೊಲೀಸರು ಬೆಂಗಳೂರಿನಿಂದ ಬೆಂಗಾವಲು ನೀಡಿದ್ದರು ಎಂದು ಜಿಲ್ಲಾಡಳಿತದ ಚುನಾವಣಾ ವಿಭಾಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜನರಿಗೆ ಈ ಯಂತ್ರಗಳ ಬಗ್ಗೆ ಮಾಹಿತಿ ನೀಡಲು ಮತಗಟ್ಟೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುವುದು. ಚುನಾವಣಾ ಆಯೋಗದ ಸೂಚನೆಗೆ ಮೇರೆಗೆ ಈ ಪ್ರಾತ್ಯಕ್ಷಿಕೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಮತದಾರರು ಮತದಾನ ಮಾಡಿದ್ದು ಖಾತ್ರಿಯಾಗಬೇಕಾದರೆ ಈ ವಿವಿಪ್ಯಾಟ್‌ ನೆರವಿಗೆ ಬರಲಿದೆ. ಮತ ಚಲಾಯಿಸಿದ ತಕ್ಷಣ ಇವಿಎಂ ಜತೆಗಿನ ವಿವಿ ಪ್ಯಾಟ್ ಯಂತ್ರವು ಮತವನ್ನು ಮುದ್ರಿಸುತ್ತದೆ. ಈ ಮುದ್ರಿತ ಮತ ಮತದಾರರಿಗೆ 7 ಸೆಕೆಂಡ್‌ಗಳ ಕಾಲ ಗೋಚರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry