ಉತ್ತರ ಪ್ರದೇಶ: ₹ 100 ಕೋಟಿ ಮೌಲ್ಯದ ರದ್ದಾದ ನೋಟುಗಳು ಪತ್ತೆ

7

ಉತ್ತರ ಪ್ರದೇಶ: ₹ 100 ಕೋಟಿ ಮೌಲ್ಯದ ರದ್ದಾದ ನೋಟುಗಳು ಪತ್ತೆ

Published:
Updated:
ಉತ್ತರ ಪ್ರದೇಶ: ₹ 100 ಕೋಟಿ ಮೌಲ್ಯದ ರದ್ದಾದ ನೋಟುಗಳು ಪತ್ತೆ

ಕಾನ್ಪುರ (ಉತ್ತರಪ್ರದೇಶ): ಸುಮಾರು ₹ 100 ಕೋಟಿ ಮೌಲ್ಯದ ರದ್ದಾದ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ಇಲ್ಲಿನ ನಿರ್ಮಾಣ ಹಂತದಲ್ಲಿರುವ ಮನೆಯೊಂದರಿಂದ ವಶಪಡಿಸಿಕೊಳ್ಳಲಾಗಿದೆ.

ರದ್ದಾದ ನೋಟುಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಆರ್‌ಬಿಐ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಇಲ್ಲಿನ ಹೋಟೆಲ್ ಒಂದಕ್ಕೆ ದಾಳಿ ನಡೆಸಿ ಕೆಲವು ಜನರನ್ನು ವಶಕ್ಕೆ ಪಡೆದಿದೆ. ಇವರ ವಿಚಾರಣೆಯ ವೇಳೆ ಮನೆಯೊಂದರಲ್ಲಿ ನಗದು ಇಟ್ಟಿರುವ ಮಾಹಿತಿ ದೊರೆತಿದೆ. ನಂತರ ಮನೆ ಮೇಲೆ ದಾಳಿ ನಡೆಸಿದಾಗ ನೋಟುಗಳು ಪತ್ತೆಯಾಗಿವೆ. ಈ ಮನೆ ಉದ್ಯಮಿ ಹಾಗೂ ಬಿಲ್ಡರ್ ಅಶೋಕ್ ಖತ್ರಿ ಎಂಬುವವರಿಗೆ ಸೇರಿದ್ದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದುವರೆಗೆ ಲೆಕ್ಕ ಹಾಕಿರುವ ನೋಟುಗಳು ₹ 97 ಕೋಟಿ ಮೌಲ್ಯದ್ದಾಗಿವೆ. ಇನ್ನೂ ಹಲವಾರು ನೋಟುಗಳ ಲೆಕ್ಕ ಹಾಕುವಿಕೆ ಬಾಕಿ ಇದೆ.

16 ಜನರ ಬಂಧನ: ವಶಪಡಿಸಿಕೊಳ್ಳಲಾದ ನಗದು ಕೆಲವು ಜನರ ತಂಡಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಅಶೋಕ್ ಖತ್ರಿ ಅಕ್ರಮ ಹಣಕಾಸು ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತ‍ಪಡಿಸಿದ್ದಾರೆ. ‘ಪ್ರಕರಣಕ್ಕೆ ಸಂಬಂಧಿಸಿ 16 ಜನರನ್ನು ಬಂಧಿಸಲಾಗಿದ್ದು, ನೋಟು ಬದಲಾವಣೆ ಪ್ರಯತ್ನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಉತ್ತರ ಪ್ರದೇಶ ಪೊಲೀಸ್‌ನ ಹಂಗಾಮಿ ಮುಖ್ಯಸ್ಥ ಆನಂದ್ ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry