ಆಭರಣಕ್ಕೂ ಬಂತು 3ಡಿ

7

ಆಭರಣಕ್ಕೂ ಬಂತು 3ಡಿ

Published:
Updated:
ಆಭರಣಕ್ಕೂ ಬಂತು 3ಡಿ

ಈಗ ‘3ಡಿ’ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ವಿಜ್ಞಾನ, ಗಣಿತ, ಒಟ್ಟಾರೆ ತಂತ್ರಜ್ಞಾನವನ್ನೊಳಗೊಂಡ ಎಲ್ಲಾ ಕ್ಷೇತ್ರದಲ್ಲೂ 3ಡಿ ಅಡಿಯಿಟ್ಟಿದೆ. ಅಷ್ಟೇ ಅಲ್ಲ, ಫ್ಯಾಷನ್‌ ಲೋಕದಲ್ಲೂ 3ಡಿಯದ್ದೇ ಸದ್ದು.

ಅದಕ್ಕೆ ಉದಾಹರಣೆಯಾಗಿರುವುದು ಈ ಆಭರಣ ಸಂಗ್ರಹ. 3ಡಿ ಪ್ರಿಂಟಿಂಗ್ ತಂತ್ರಜ್ಞಾನದಿಂದ ವಿನ್ಯಾಸಗೊಂಡ ಈ ಆಭರಣಗಳು, ಸೂಕ್ಷ್ಮ ವಿನ್ಯಾಸಗಳು ಎಷ್ಟೋ ಅಂತರರಾಷ್ಟ್ರೀಯ ಡಿಸೈನರ್‌ಗಳಿಗೆ ಪ್ರೇರಣೆಯನ್ನೂ ನೀಡಿವೆ. ಹೊಸ ಟ್ರೆಂಡ್ ಅನ್ನೂ ಸೃಷ್ಟಿಸಿವೆ.

ಸಂಕೀರ್ಣ ವಿನ್ಯಾಸವನ್ನೂ ಸುಲಭವಾಗಿ ರೂಪಿಸಬಹುದಾಗಿರುವುದು ಈ ತಂತ್ರಜ್ಞಾನದೆಡೆಗೆ ಒಲಿಯಲು ಬಹು ಮುಖ್ಯ ಕಾರಣ. ಸೂಕ್ಷ್ಮ ಕುಸುರಿ ಕೆಲಸ ಥಟ್ಟನೆ ಮುಗಿದು ನಿಮಿಷ ಮಾತ್ರಗಳಲ್ಲಿ ಆಭರಣ ಸಿದ್ಧಗೊಳ್ಳಬಲ್ಲವು.

ಇಟಲಿಯ ಡಿಸೈನ್ ಬ್ರ್ಯಾಂಡ್‌ ‘ಮೇಸನ್ 203’– ‘ಬಿಯರಿಂಗ್’ ಎಂಬ ಆಭರಣ ಸಂಗ್ರಹವನ್ನೇ ಹೊರತಂದಿದೆ. ವಿನ್ಯಾಸಕಿ ಗ್ಯೂಲಿಯೊ ಲ್ಯಾಚೆಟಿ ಈ ಸಂಗ್ರಹದ ರೂವಾರಿ. ತಂತ್ರಜ್ಞಾನ –ಫ್ಯಾಷನ್ ಕ್ಷೇತ್ರದಲ್ಲಿ ಏನೆಲ್ಲಾ ಸಾಧ್ಯತೆಗಳನ್ನು ಹೊರತರುತ್ತದೆ ಎಂಬುದನ್ನು ತಿಳಿಸುವ ಉದ್ದೇಶದೊಂದಿಗೆ ಈ ಸಂಗ್ರಹ ರೂಪಿತಗೊಂಡಿದೆಯಂತೆ.

ಮನುಷ್ಯನ ನರವ್ಯೂಹ, ರೇಖಾಗಣಿತ, ಪ್ರಾಣಿ, ಎಲೆ, ಹೂ, ಪಕ್ಷಿಗಳು, ಒಟ್ಟಾರೆ ಪ್ರಕೃತಿಯನ್ನೇ ಸ್ಫೂರ್ತಿಯನ್ನಾಗಿ ತೆಗೆದುಕೊಂಡು ಅದ್ಭುತವಾಗಿ ಕಿವಿಯೋಲೆ, ನೆಕ್‌ಲೇಸ್, ಬ್ರೇಸ್‌ಲೆಟ್, ರಿಂಗ್‌, ಪೆಂಡೆಂಟ್, ಕ್ಲಿಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ದುಬಾರಿಯೂ ಅಲ್ಲದ, ಸುಂದರವೂ ಆಗಿರುವ ಈ ಆಭರಣವನ್ನು ಯಾರಾದರೂ ಬೇಡ ಎನ್ನಲು ಸಾಧ್ಯವೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry