ಒತ್ತಡ ಸರಿಯಲ್ಲ

7

ಒತ್ತಡ ಸರಿಯಲ್ಲ

Published:
Updated:

ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಏರಿಕೆ (ಪ್ರ.ವಾ., ಜ. 11) ವರದಿ ಆತಂಕ ಮೂಡಿಸುತ್ತದೆ.

ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ಅಂಶ ಆಘಾತಕಾರಿಯಾಗಿದೆ.ಜೀವನದಲ್ಲಿ ಅನೇಕ ಪ್ರಯತ್ನಗಳಲ್ಲಿ ವಿಫಲರಾದರೂ ಸೋಲುಗಳಿಂದ ಎದೆಗುಂದದೆ, ಆತ್ಮವಿಶ್ವಾಸದಿಂದ ಮುನ್ನಡೆದುದರಿಂದಲೇ ಅಬ್ರಹಾಂ ಲಿಂಕನ್‌ ಅವರಿಗೆ ಅಮೆರಿಕದ ಅಧ್ಯಕ್ಷರಾಗಲು ಸಾಧ್ಯವಾಯಿತು.

ವಿದ್ಯಾರ್ಥಿ ಜೀವನದಲ್ಲಿ ಸೋಲು ಕಂಡ ಅನೇಕರು ನಾನಾ ಕ್ಷೇತ್ರಗಳಲ್ಲಿ ಮಹತ್‌ ಸಾಧನೆ ಮೆರೆದಿದ್ದಾರೆ ಎಂಬುದರ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.

-ದಿನೇಶ್ ಕೆ. ಕಾರ್ಯಪ್ಪ, ಮಡಿಕೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry