₹ 1 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ

7
ಮೈಸೂರಿನ ತಜ್ಞರ ತಂಡ ಭೇಟಿ; ಪರಿಶೀಲನೆ

₹ 1 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ

Published:
Updated:
₹ 1 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ

ಕುಶಾಲನಗರ: ಪಟ್ಟಣದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ತಾವರೆಕೆರೆ ಪುನಶ್ಚೇತನಕ್ಕೆ ಇಲ್ಲಿನ ಪಟ್ಟಣ ಪಂಚಾಯಿತಿ ಮುಂದಾಗಿದೆ. ₹ 1 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಮೈಸೂರಿನ ಕೇಡ್ ಫಾರಂ ಪ್ರತಿನಿಧಿಗಳು ಮತ್ತು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಈಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಯೋಜನೆಗೆ ₹ 50 ಲಕ್ಷ ಅನುದಾನವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ₹ 50 ಲಕ್ಷ ಅನುದಾನವನ್ನು ನಗರ ಯೋಜನಾ ಪ್ರಾಧಿಕಾರ ಭರಿಸಲಿದೆ. ಪ್ರವಾಸೋದ್ಯ ಮಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ತಾವರೆಕೆರೆ ಅಭಿವೃದ್ಧಿಗೆ ಪ.ಪಂ. ಯೋಜನೆ ರೂಪಿಸಿದ್ದು, ವಿಸ್ತೃತ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಮುಖ್ಯಾಧಿಕಾರಿ ಎ.ಶ್ರೀಧರ್ ಅವರಿಗೆ ತಜ್ಞರ ಸಮಿತಿ ಸಲಹೆ ನೀಡಿತು.

‘ಮೂರು ಎಕರೆ ವಿಸ್ತೀರ್ಣದ ತಾವರೆಕೆರೆಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿರುವ ಶಂಕೆ ಇದ್ದು, ಸರ್ವೆ ಬಳಿಕ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಪ.ಪಂ. ಅಧ್ಯಕ್ಷೆ ರೇಣುಕಾ ಜಗದೀಶ್ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry