ಮುಂಬೈ: ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಕೈಬಿಡಲಾಗಿದ್ದ ಮರಾಠಿ ಚಲನಚಿತ್ರ ‘ನ್ಯೂಡ್’ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಯಾವುದೇ ದೃಶ್ಯ ಕತ್ತರಿಸಿಲ್ಲ.
ನಟಿ ವಿದ್ಯಾ ಬಾಲನ್ ನೇತೃತ್ವದ ಮಂಡಳಿಯ ವಿಶೇಷ ಜ್ಯೂರಿ ತಂಡಕ್ಕೆ ನಿರ್ದೇಶಕ ರವಿ ಜಾಧವ್ ಟ್ವಿಟರ್ ಮೂಲಕ ಧನ್ಯವಾದ ಹೇಳಿದ್ದಾರೆ.