ಕ್ಯಾಂಪ್ಕೊಗೆ ರಫ್ತು ಪ್ರಶಸ್ತಿ

5

ಕ್ಯಾಂಪ್ಕೊಗೆ ರಫ್ತು ಪ್ರಶಸ್ತಿ

Published:
Updated:
ಕ್ಯಾಂಪ್ಕೊಗೆ ರಫ್ತು ಪ್ರಶಸ್ತಿ

ಮಂಗಳೂರು: ಭಾರತೀಯ ರಫ್ತು ಸಂಸ್ಥೆಗಳ ಸಾಧನೆಯನ್ನು ಗುರುತಿಸಿ, ಕೇಂದ್ರ ವಾಣಿಜ್ಯ ಸಚಿವಾಲಯ ಆಶ್ರಯದ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ ನೀಡುತ್ತಿರುವ ದಕ್ಷಿಣ ವಲಯ ರಫ್ತು ಪ್ರಶಸ್ತಿಗೆ ಕ್ಯಾಂಪ್ಕೊ ಸಂಸ್ಥೆ ಭಾಜವಾಗಿದೆ.

ಚೆನ್ನೈನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಈ ಪ್ರಶಸ್ತಿ ಸ್ವೀಕರಿಸಿದರು.

ಕ್ಯಾಂಪ್ಕೊ ಚಾಕಲೇಟ್‌ ಕಾರ್ಖಾನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಈ ಕಾರ್ಖಾನೆಯಲ್ಲಿ ಆರೋಗ್ಯ ಪೂರ್ಣವಾದ, ವೈವಿಧ್ಯಮಯ ಚಾಕಲೇಟು ಉತ್ಪನ್ನಗಳು, ಕೊಕ್ಕೋ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಅವುಗಳನ್ನು ದೇಶ ಹಾಗೂ ವಿದೇಶಗಳ ಗ್ರಾಹಕರರಿಗೆ ಮಾರಾಟ ಮಾಡಲಾಗುತ್ತಿದೆ.

ಕ್ಯಾಂಪ್ಕೊ ಕಳೆದ ವರ್ಷ 1,324 ಟನ್ ಚಾಕಲೇಟ್ ಅನ್ನು ಆಫ್ರಿಕಾದ ದೇಶಗಳಿಗೆ ರಫ್ತು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry