ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

7

ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

Published:
Updated:
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

ಮಾನ್ವಿ: ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲ್ಲೂಕಿನ ಪೋತ್ನಾಳ ಗ್ರಾಮ ಸಜ್ಜುಗೊಂಡಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಹಾಗೂ ಸಂಭ್ರಮ ಕಂಡು ಬರುತ್ತಿದೆ. ಜನವರಿ19, 20ರಂದು ನಡೆಯಲಿರುವ ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಪೋತ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಮ್ಮೇಳನ ಆಯೋಜನೆಗಾಗಿ ಬೃಹತ್‌ ವೇದಿಕೆ, ಮಂಟಪ ಸಿದ್ಧಗೊಳಿಸಲಾಗಿದೆ. ಸುಮಾರು ನಾಲ್ಕು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ರಾಯಚೂರು–ಸಿಂಧನೂರು ರಾಜ್ಯ ಹೆದ್ದಾರಿಯಿಂದ ಸಮ್ಮೇಳನದ ವೇದಿಕೆವರೆಗೆ ಮಹಾದ್ವಾರ ಹಾಗೂ 6 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ.

ಮುಖ್ಯ ವೇದಿಕೆಗೆ ಚನ್ನಬಸವಪ್ಪ ಬೆಟ್ಟದೂರು, ಮಂಟಪಕ್ಕೆ ಜಂಬಣ್ಣ ಅಮರಚಿಂತ ಹಾಗೂ ಮಹಾದ್ವಾರಕ್ಕೆ ವಿ.ಪಿ.ನಾಡಗೌಡ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗುವ ಪೋತ್ನಾಳ ಗ್ರಾಮದ ಹುಚ್ಚಬುಡ್ಡೇಶ್ವರ ದೇವಸ್ಥಾನದಿಂದ ಸರ್ಕಾರಿ ಪ್ರೌಢಶಾಲೆವರೆಗಿನ ರಸ್ತೆಯ ಅಕ್ಕಪಕ್ಕದಲ್ಲಿ ಕನ್ನಡ ಧ್ವಜಗಳನ್ನು ನೆಟ್ಟು ಅಲಂಕರಿಸಲಾಗಿದೆ.

ಮಹಾದ್ದಾರದ ಎಡ ಹಾಗೂ ಬಲ ಭಾಗದಲ್ಲಿ ವಾಹನಗಳ ನಿಲುಗಡೆಗೆ ಜಾಗ ಕಲ್ಪಿಸಲಾಗಿದೆ ಪ್ರೌಢಶಾಲೆಯ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಪಕ್ಕದ ಸ್ಥಳದಲ್ಲಿ ಸಮ್ಮೇಳನಕ್ಕೆ ಆಗಮಿ ಸುವ ಪ್ರತಿನಿಧಿಗಳಿಗೆ ಊಟದ ಸ್ಥಳದ ವ್ಯವಸ್ಥೆ ಮಾಡಲಾಗಿದೆ. ಪೋತ್ನಾಳ ಗ್ರಾಮದಲ್ಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿನಿಧಿಗಳ ಊಟಕ್ಕಾಗಿ ಸುಮಾರು 12 ಸಾವಿರ ಖಡಕ್‌ ರೊಟ್ಟಿಗಳನ್ನು ಸಂಗ್ರಹಿಸಲಾಗಿದೆ. ಪ್ರತಿನಿಧಿಗಳ ವಸತಿಗಾಗಿ ಪೋತ್ನಾಳ ಗ್ರಾಮದ ಹುಚ್ಚಬುಡ್ಡೇಶ್ವರ ಕಲ್ಯಾಣ ಮಂಟಪ, ಸರ್ಕಾರಿ ಪ್ರೌಢಶಾಲೆ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯ ಹಾಗೂ ಮಾನ್ವಿ ಎಪಿಎಂಸಿ ಹಾಗೂ ಪ್ರವಾಸಿ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನಕ್ಕೆ ತೆರಳುವ ಸಾಹಿತ್ಯಾ ಸಕ್ತರು, ಕನ್ನಡಾಭಿಮಾನಿಗಳಿಗೆ ಸಿಂಧನೂರು, ಸಿರವಾರ ಹಾಗೂ ಮಾನ್ವಿ ಯಿಂದ ಪೋತ್ನಾಳದವರೆಗೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ಉಚಿತ ಬಸ್‌ ಸೌಕರ್ಯ ಕಲ್ಪಿಸಲಾಗಿದೆ. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು, ಶಾಸಕ ಹಂಪಯ್ಯ ನಾಯಕ ಗುರುವಾರ ಪೋತ್ನಾಳ ಗ್ರಾಮಕ್ಕೆ ಭೇಟಿ ನೀಡಿ ಸಮ್ಮೇಳನದ ಸಿದ್ಧತೆಯನ್ನು ಪರಿಶೀಲಿಸಿದರು.

ರಾಷ್ಟ್ರಧ್ವಜಾರೋಹಣ : ಎನ್‌.ಎಸ್‌.ಬೋಸರಾಜು

ಧ್ವಜಾರೋಹಣ: ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್‌ ಬೆಟ್ಟದೂರು

ಧ್ವಜಾರೋಹಣ: ಬೆಳಿಗ್ಗೆ 8.30.

ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಸ್ಥಳ: ಹುಚ್ಚಬುಡ್ಡೇಶ್ವರ ದೇವಸ್ಥಾನ, ಬೆಳಿಗ್ಗೆ 9.ಸಮ್ಮೇಳನದ ಉದ್ಘಾಟನೆ

ಉದ್ಘಾಟನೆ: ತನ್ವೀರ್‌ ಸೇಠ್‌, ಜಿಲ್ಲಾ ಉಸ್ತುವಾರಿ ಸಚಿವ

ಆಶಯ ನುಡಿ: ಸಾಹಿತಿ ಡಾ.ಎಂ.ಎಸ್‌.ಆಶಾದೇವಿ

ಅಧ್ಯಕ್ಷತೆ: ಕತೆಗಾರ ಡಾ.ರಾಜಶೇಖರ ನೀರಮಾನ್ವಿ

ಉಪಸ್ಥಿತರು: ಸಂಸದರಾದ ಬಿ.ವಿ.ನಾಯಕ ಹಾಗೂ ಕರಡಿ ಸಂಗಣ್ಣ, ಶಾಸಕರಾದ ಎನ್‌.ಎಸ್‌.ಬೋಸರಾಜು, ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ , ಶಿವರಾಜ ಪಾಟೀಲ್‌, ತಿಪ್ಪರಾಜು ಹವಾಲ್ದಾರ್‌, ಶಿವನಗೌಡ ನಾಯಕ, ಮಾನಪ್ಪ ವಜ್ಜಲ್‌ ಮತ್ತು ಪ್ರತಾಪಗೌಡ ಪಾಟೀಲ್‌, ಜಿ.ಪಂ ಅಧ್ಯಕ್ಷೆ ವೀರಲಕ್ಷ್ಮೀ, ಜಿ.ಪಂ ಸದಸ್ಯೆ ಅನ್ನಪೂರ್ಣಮ್ಮ ಎಂ.ಈರಣ್ಣ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಸ್ವಾಮಿರಾವ್‌ ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್‌ ಬೆಟ್ಟದೂರು. ಸ್ಥಳ: ಚೆನ್ನಬಸವಪ್ಪ ಬೆಟ್ಟದೂರು ವೇದಿಕೆ, ಬೆಳಿಗ್ಗೆ 10.30.

ಗೋಷ್ಠಿ–1

ವಿಷಯ: ಒಕ್ಕಲುತನ; ಸಮಸ್ಯೆಗಳು, ಪರಿಹಾರೋಪಾಯಗಳು

ಅಧ್ಯಕ್ಷತೆ: ರೈತ ಮುಖಂಡ ಹನುಮನಗೌಡ ಬೆಳಗುರ್ಕಿ,

ವಿಷಯ ಮಂಡನೆ: ಚಾಮರಸ ಮಾಲೀಪಾಟೀಲ್‌ ಹಾಗೂ ಅಮರಣ್ಣ ಗುಡಿಹಾಳ

ಮಧ್ಯಾಹ್ನ2 ಗಂಟೆಗೆ

ಗೋಷ್ಠಿ–2 ವಿಷಯ: ಜಿಲ್ಲಾ ಸಾಹಿತ್ಯ ಅವಲೋಕನ, ಅಧ್ಯಕ್ಷತೆ: ಸಾಹಿತಿ ವೀರಹನುಮಾನ

ಆಶಯ ಭಾಷಣ: ಚಿದಾನಂದ ಸಾಲಿ,

ವಿಷಯ ಮಂಡನೆ: ಡಾ.ರಾಜಶ್ರೀ ಕಲ್ಲೂರು, ಬಾಬು ಭಂಡಾರಿಗಲ್‌ ಹಾಗೂ ಡಾ.ಎನ್‌.ಕೆ.ಪದ್ಮನಾಭ

ಸಮಯ: ಮಧ್ಯಾಹ್ನ3.30ಗಂಟೆಗೆ

ವಿಶೇಷ ಉಪನ್ಯಾಸ

ವಿಷಯ: ಸಮ್ಮೇಳನಾಧ್ಯಕ್ಷ ಡಾ.ರಾಜಶೇಖರ ನೀರಮಾನ್ವಿಯವರ ಬದುಕು–ಬರಹ

ಅಧ್ಯಕ್ಷತೆ: ಮಹಾಂತೇಶ ಮಸ್ಕಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ

ಉಪನ್ಯಾಸ: ರಮೇಶಬಾಬು ಯಾಳಗಿ, ಉಪಸ್ಥಿತಿ: ಕೆ.ಸಿದ್ದಯ್ಯ ಸ್ವಾಮಿ ಹಾಗೂ ಡಿ.ಜಿ.ಕರ್ಕಿಹಳ್ಳಿ, ಸಂಜೆ 5.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ:6.30.

* * 

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು ಮತ್ತು ಕನ್ನಡಾಭಿಮಾನಿಗಳಿಗೆ ಊಟ, ವಸತಿ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಎಂ.ವೀರನಗೌಡ ಪೋತ್ನಾಳ ಪ್ರಚಾರ ಸಮಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry