24ರಿಂದ ಅಮ್ಮಾಜಿ ಕರಿಯಮ್ಮದೇವಿ ಪ್ರತಿಷ್ಠಾಪನೆ

7

24ರಿಂದ ಅಮ್ಮಾಜಿ ಕರಿಯಮ್ಮದೇವಿ ಪ್ರತಿಷ್ಠಾಪನೆ

Published:
Updated:
24ರಿಂದ ಅಮ್ಮಾಜಿ ಕರಿಯಮ್ಮದೇವಿ ಪ್ರತಿಷ್ಠಾಪನೆ

ಚಿತ್ರದುರ್ಗ: ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅಮ್ಮಾಜಿ ಕರಿಯಮ್ಮ ದೇವಿ ಮತ್ತು ಶ್ರೀಮಾರಮ್ಮ ದೇವಿ ಪ್ರತಿಷ್ಠಾಪನೆ, ಕುಂಭಾಭಿಷೇಕ ಸಮಾರಂಭ ಇದೇ 24ರಿಂದ 27ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಉತ್ಸವದ ಅಂಗವಾಗಿ 24ರ ಮಧ್ಯಾಹ್ನ 2ಕ್ಕೆ ಜಲಧಿ ಮಹೋತ್ಸವ, ಸಂಜೆ 6ರಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಗಂಗೆ ಪೂಹೆ, ಸ್ವಸ್ತಿ ಪುಣ್ಯಾಹ ವಾಚನ, ಪಂಚಗವ್ಯ ಮೇಲನ ಅಂಕುರರಾರ್ಪಣೆ, ಸುಧಾ ಕಲಾಶಧಿ ಮಂತ್ರಣ ಪೂಜೆ, ನಾಂಧಿ ಕಂಕಣ ಪೂಜೆ, ಮಂಟಪ ಪೂಜೆ, ಋತ್ವಿಕ್ ವರುಣೆ, ಕಲಶ ಸ್ಥಾಪನ ಪೂರ್ವಕ ಪೂಜೆ, ವಾಸ್ತುಪೂಜೆ, ವಾಸ್ತು ರಕ್ಷೋಜ್ಞ ಹೋಮ, ದಿಕ್ಪಾಲಕ ಬಲಿ ಪ್ರಧಾನ, ಪೂರ್ಣಾಹುತಿ, ಮಂಗಳಾರತಿ ನಡೆಯಲಿದೆ.

25ರ ಬೆಳಿಗ್ಗೆ ಮಂಗಳ ಪಠಣ ಪೂರ್ವಕ ಮಹಾಗಣಪತಿ ಹೋಮ, ನವಗ್ರಹ ಹೋಮ, ದುರ್ಗಾ ಹೋಮ, ಶ್ರೀಸೂಕ್ತ ಹೋಮ, ಪುರ್ಣಾಹುತಿ, ಸಂಜೆ ದುರ್ಗಾ ದೀಪ ನಮಸ್ಕಾರ, ಬಿಂಬ ಶುದ್ಧಿ, ಆದಿವಾಸ ಪೂಜೆ, ಹೋಮ ನಡೆಯಲಿದೆ. 26 ಬೆಳಿಗ್ಗೆ 10ರಿಂದ 10.15ರವರೆಗೆ ದೇವಿಯ ಪ್ರತಿಷ್ಠಾಪನೆ ತತ್ವ ಹೋಮ, ಲೋಕ ಕಲ್ಯಾಣಾರ್ಥ ಚಂಡಿಕಾಯಾಗ ಮಧ್ಯಾಹ್ನ 2ರಿಂದ ಆರತಿ ಮಹೋತ್ಸವ ನಡೆಯಲಿದೆ. ನಾಲ್ಕು ದಿನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ’

ಸುಗ್ಗಿ ಸಂಭ್ರಮ: ಉತ್ಸವದ ಹಿನ್ನೆಲೆಯಲ್ಲಿ 27ರಂದು ಬೆಳಿಗ್ಗೆ 11ಕ್ಕೆ ಸುಗ್ಗಿ ಸಂಭ್ರಮ ನಡೆಯಲಿದೆ. ವೇಣುಕಲ್ಲು ಗುಡ್ಡದ ಶ್ರೀಹಾಲಪ್ಪಯ್ಯ ಸ್ವಾಮಿ ಮಠದ ವಿ.ಎಂ.ಚಂದ್ರಶೇಖರಯ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಮ್ಮಾಜಿ ಕರಿಯಮ್ಮ ದೇವಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಜಿ.ಚಿಕ್ಕಣ್ಣ ಅಧ್ಯಕ್ಷತೆವಹಿಸಲಿದ್ದು.

ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಎಚ್.ಆಂಜನೇಯ, ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕರಾದ ಡಿ.ಸುಧಾಕರ್, ಜಿ.ಎಚ್.ತಿಪ್ಪಾರೆಡ್ಡಿ, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ ಭಾಗವಹಿಸಲಿದ್ದಾರೆ ಎಂದು ಸಮಿತಿ ಸಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry