ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

7

ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

Published:
Updated:
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

ಹೈದರಾಬಾದ್‌: ಕನ್ನಡ ಚಿತ್ರರಂಗದ ನಿರ್ಮಾಪಕ ಸೇರಿದಂತೆ ಇತರೆ ಚಿತ್ರರಂಗದ ಆರು ಮಂದಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ಶೃತಿಹರಿಹರನ್‌ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಇಂಡಿಯಾ ಟುಡೇ ವಾಹಿನಿ ಗುರುವಾರ ಆಯೋಜಿಸಿದ್ದ ‘ಕಾನ್‌ ಕ್ಲೇವ್‌ ಸೌಥ್‌ 2018’(ಸಿನಿಮಾ ರಂಗದಲ್ಲಿ ಲೈಂಗಿಕತೆ) ಕುರಿತಾದ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು 18ನೇ ವಯಸ್ಸಿನಲ್ಲಿ ನೃತ್ಯಗಾರ್ತಿಯಾಗಿದ್ದೆ. ಕನ್ನಡ ಚಿತ್ರದಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದೆ. ಆಗ ನಿರ್ಮಾಪಕರೊಬ್ಬರು ನನ್ನನ್ನು ಹಾಸಿಗೆಗೆ ಬರುವಂತೆ ಕರೆದಿದ್ದರು. ಘಟನೆಯಿಂದ ತುಂಬಾ ಬೇಸರಗೊಂಡು ನಡೆದ ವಿಷಯವನ್ನು ನೃತ್ಯ ನಿರ್ದೇಶಕರ ಬಳಿ ಹೇಳಿಕೊಂಡಿದ್ದೆ’ ಎಂದಿದ್ದಾರೆ.

‘ನನ್ನದೇ ಕನ್ನಡ ಚಿತ್ರವೊಂದನ್ನು ತಮಿಳಿಗೆ ರಿಮೇಕ್‌ ಮಾಡುವ ಸಂದರ್ಭದಲ್ಲಿ ಹೆಸರಾಂತ ನಿರ್ಮಾಪಕರೊಬ್ಬರು ದೂರವಾಣಿ ಕರೆ ಮಾಡಿ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಮಾತು ಮುಂದುವರಿಸಿ ‘ನಾವು ಐದು ಮಂದಿ ನಿರ್ಮಾಪಕರಿದ್ದೇವೆ. ನಾವು ಬಯಸುವ ಹಾಗೆ ನಿಮ್ಮನ್ನು ವಿನಿಮಯ ಮಾಡಿಕೊಳುತ್ತೇವೆ’ ಎಂದು ಕೇಳಿದ್ದರು. ಆಗ ನಾನು ಚಪ್ಪಲಿ ಮುರಿಯುತ್ತದೆ ಎಂದಿದ್ದೆ’ ಎಂದು ಶೃತಿ ಹೇಳಿದ್ದಾರೆ.

‘ಆ ಘಟನೆಯ ಬಳಿಕ ತಮಿಳು ಚಿತ್ರಗಳಲ್ಲಿ ನಟಿಸಲು ಒಪ್ಪಿರಲಿಲ್ಲ. ಈಗ ಚಿತ್ರಕಥೆ ಇಷ್ಟವಾದರೆ ತಮಿಳಿನಲ್ಲಿಯೂ ನಟಿಸಲು ಸಿದ್ಧಳಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry