ದುನಿಯಾ ವಿಜಯ್‌ಗೆ ನಲವತ್ಮೂರು

7

ದುನಿಯಾ ವಿಜಯ್‌ಗೆ ನಲವತ್ಮೂರು

Published:
Updated:
ದುನಿಯಾ ವಿಜಯ್‌ಗೆ ನಲವತ್ಮೂರು

ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್‌ ಎಂದೇ ಖ್ಯಾತಿ ಗಳಿಸಿರುವ ವಿಜಯ್‌ಕುಮಾರ್‌ ಬಿ.ಆರ್‌. ಜನಿಸಿದ್ದು 1974 ಜನವರಿ 20ರಂದು. ಅವರಿಗೀಗ 43ರ ಹರೆಯ. ಕಷ್ಟಗಳ ಸುರಿಮಳೆಯನ್ನೇ ಎದುರಿಸಿದರೂ ಆತ್ಮವಿಶ್ವಾಸದಿಂದ ಬೆಳೆದವರು ವಿಜಯ್‌.

ಸಿನಿಮಾಗಳಲ್ಲಿನ ಗುರುತಾಗದ ಅನೇಕ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಾ ಮೊದಲಿಗೆ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಪ್ರಧಾನ ಪಾತ್ರ ಅದರಲ್ಲೂ ನಾಯಕನಾಗಿ ನಟಿಸುವ ಮೊದಲ ಅವಕಾಶ ಅವರಿಗೆ ಸಿಕ್ಕಿದ್ದು ‘ದುನಿಯಾ’ ಸಿನಿಮಾ ಮೂಲಕ. ಆ್ಯಕ್ಷನ್‌ ಹಾಗೂ ರೊಮ್ಯಾನ್ಸ್‌ ಭರಿತ ಈ ಚಿತ್ರ ಸಿಕ್ಕಾಪಟ್ಟೆ ಹೆಸರು ಮಾಡಿದ್ದಲ್ಲದೆ ವಿಜಯ್‌ ಪ್ರತಿಭೆ ಎಲ್ಲೆಡೆ ಗುರುತಾಗುವಂತೆ ಮಾಡಿತು.

ಬಾಕ್ಸ್‌ ಆಫೀಸಿನಲ್ಲಿ ಉತ್ತಮ ಗಳಿಕೆಯನ್ನೂ ಕಂಡು ವಿಜಯ್‌ಗೆ ಉತ್ತಮ ನಟ ಪ‍್ರಶಸ್ತಿಯನ್ನೂ ಬಾಚಿಕೊಟ್ಟಿತು. ಅಲ್ಲಿಂದ ಪ್ರಾರಂಭವಾದ ಪಯಣ ‘ಯುಗ’, ‘ಗೆಳೆಯ’, ‘ಚಂಡ’, ‘ಅವ್ವ’, ‘ಸ್ಲಮ್‌ ಬಾಲ’, ‘ಜಂಗ್ಲಿ‘, ‘ತಾಕತ್‌’, ‘ಶಂಕರ್‌ ಐಪಿಎಸ್‌’, ‘ಕರಿಚಿರತೆ’, ‘ಮಾಸ್ತಿಗುಡಿ’ ಮುಂತಾದ ಚಿತ್ರಗಳನ್ನು ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry