ಖುಷಿಖುಷಿ ಪ್ರೇಮದ ಚಿತ್ರ

7

ಖುಷಿಖುಷಿ ಪ್ರೇಮದ ಚಿತ್ರ

Published:
Updated:
ಖುಷಿಖುಷಿ ಪ್ರೇಮದ ಚಿತ್ರ

‘ಮೈಬ್ರದರ್ ನಿಖಿಲ್‌’ ಮತ್ತು ’ಐ ಆ್ಯಮ್‌’ನಂಥ ಭಿನ್ನ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ನಿರ್ದೇಶಕ ಓನಿರ್ ಈಗ ಮತ್ತೊಂದು ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಓನಿರ್ ನಿರ್ದೇಶನದ ‘ಕುಛ್ ಭೀಗಿ ಅಲ್ಫಾಜ್’ ರೊಮಾಂಟಿಕ್ ಸಿನಿಮಾ ಫೆ.16ಕ್ಕೆ ತೆರೆ ಕಾಣಲಿದೆ. ಪ್ರೇಕ್ಷಕರಷ್ಟೇ ಅಲ್ಲ, ಓನಿರ್ ಸಹ ಈ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಯುವ ಜೋಡಿಯೊಂದರ ಪ್ರೇಮ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಆರ್‌.ಜೆ. ಅಲ್ಫಾಜ್ ಆಗಿ ಜೈರ್ ಖಾನ್ ದುರಾನಿ ಮತ್ತು ಮೀಮ್ ಕಲಾವಿದೆ ಅರ್ಚನಾ ಪಾತ್ರವಾಗಿ ಗೀತಾಂಜಲಿ ಥಾಪಾ ಅಭಿನಯಿಸಿದ್ದಾರೆ.

ಚಿತ್ರೀಕರಣ ಸಂಪೂರ್ಣ ಮುಗಿದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರೇಮಿಗಳ ದಿನಾಚರಣೆ ಬಿಸಿ ಆರುವ ಮೊದಲೇ ತೆರೆಗೆ ಬರಲಿರುವ ಈ ಚಿತ್ರ ಜೋಡಿಗಳು ಕೈಕೈ ಬೆಸೆದುಕೊಂಡು ನೋಡಬಹುದು ಎಂದು ಪ್ರತ್ಯೇಕವಾಗಿ ಹೇಳಬೇಕೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry