ಮೇಣದ ಪ್ರತಿಮೆಯಲ್ಲಿ ಸನ್ನಿ!

7

ಮೇಣದ ಪ್ರತಿಮೆಯಲ್ಲಿ ಸನ್ನಿ!

Published:
Updated:
ಮೇಣದ ಪ್ರತಿಮೆಯಲ್ಲಿ ಸನ್ನಿ!

ನೀಲಿ ಚಿತ್ರಗಳಿಂದ ಬಂದು ಬಾಲಿವುಡ್‌ನಲ್ಲಿ ಮಿಂಚಿದ ಹಸಿಬಿಸಿ ತಾರೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಇಲ್ಲೊಂದು ಸಂತಸ ಸುದ್ದಿ ಇದೆ.

ದೆಹಲಿಯಲ್ಲಿರುವ ಮೇಡಂ ಟುಸ್ಸಾಡ್ ಮೇಣದ ಪ್ರತಿಮೆ ಸಂಗ್ರಹಾಲಯದಲ್ಲಿ ಸನ್ನಿಯ ಪ್ರತಿಮೆ ರೂಪುಗೊಳ್ಳಲಿದೆ. ವಸ್ತು ಸಂಗ್ರಹಾಲಯದ ಸಿಬ್ಬಂದಿ ಈಗಾಗಲೇ ಮುಂಬೈನಲ್ಲಿರುವ ಸನ್ನಿಯನ್ನು ಭೇಟಿ ಮಾಡಿ ದೇಹದ ಅಳತೆ, ಕಣ್ಣಿನ ಬಣ್ಣ, ಕೂದಲ ಬಣ್ಣ ಇತ್ಯಾದಿಗಳ ಅಳತೆ ಮತ್ತು ವಿವರಗಳನ್ನು ಪಡೆದುಕೊಂಡಿದ್ದಾರಂತೆ.

ಬಾಲಿವುಡ್‌ ಸ್ಟಾರ್‌ಗಳಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯಾ ರೈ ಮೊದಲಾದವರ ಮೇಣದ ಪ್ರತಿಮೆ ರೂಪುಗೊಂಡಿದೆ. ಈ ಸಾಲಿಗೆ ತಾನು ಸೇರುತ್ತಿರುವುದು ಸನ್ನಿಗೆ ಅಪಾರ ಸಂತಸ ತಂದಿದೆಯಂತೆ. ‘ಮೇಣದ ಪ್ರತಿಮೆಯಲ್ಲಿ ನಾನು ಹೇಗೆ ಕಾಣಿಸುತ್ತೇನೆ ಎಂಬ ಬಗ್ಗೆ ಅಪಾರ ಕುತೂಹಲವಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry