ಸಂಚಾರ ದಟ್ಟಣೆ ಮಾಹಿತಿಗೆ ಪ್ರತ್ಯೇಕ ಆ್ಯಪ್

7

ಸಂಚಾರ ದಟ್ಟಣೆ ಮಾಹಿತಿಗೆ ಪ್ರತ್ಯೇಕ ಆ್ಯಪ್

Published:
Updated:

ಬೆಂಗಳೂರು: ನಗರದಲ್ಲಿ ಉಂಟಾಗುವ ಸಂಚಾರ ದಟ್ಟಣೆಯ ಬಗ್ಗೆ ಮಾಹಿತಿ ನೀಡಲು ಸಂಚಾರ ಪೊಲೀಸರಿಗಾಗಿ ‘ಟ್ರಾಫಿಕ್‌ ಅನ್‌ಲೈಸರ್‌’ ಹೆಸರಿನ ಪ್ರತ್ಯೇಕ ಆ್ಯಪ್‌ ರೂಪಿಸಲಾಗಿದೆ.

ಗೂಗಲ್‌ ಸಂಸ್ಥೆ ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಈ ಆ್ಯಪ್‌ ಸಿದ್ಧಪಡಿಸಲಾಗಿದೆ. ಸದ್ಯ ಎಸಿಪಿಗಳು  ಆ್ಯಪ್‌ ಬಳಕೆ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲ ಸಿಬ್ಬಂದಿಗೂ ಆ್ಯಪ್‌ ಲಭ್ಯವಾಗಲಿದೆ.

ನಗರದ ಯಾವ ರಸ್ತೆಯಲ್ಲಿ ದಟ್ಟಣೆ ಇದೆ ಎಂಬ ಮಾಹಿತಿಯನ್ನು ಆ್ಯಪ್‌ ತೋರಿಸಲಿದೆ. ಅದು ದಟ್ಟಣೆ ನಿಯಂತ್ರಿಸಲು ಸಿಬ್ಬಂದಿಗೆ ನೆರವಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಗೂಗಲ್‌ ಮ್ಯಾಪ್ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸಲಿದೆ.

ಮೂರು ಬಣ್ಣಗಳ ಮೂಲಕ ದಟ್ಟಣೆಯ ಪ್ರಮಾಣ ಗೋಚರಿಸಲಿದೆ. ವಿರಳ ಸಂಚಾರ ದಟ್ಟಣೆಗೆ ಹಳದಿ, ಹೆಚ್ಚಿನ ಸಂಚಾರ ದಟ್ಟಣೆ ಇದ್ದರೆ ಕೆಂಪು ಹಾಗೂ ವಾಹನಗಳ ಸಂಚಾರ ಸುಗಮವಾಗಿದ್ದರೆ ಹಸಿರು ಬಣ್ಣವನ್ನು ತೋರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry