ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ

7

ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ

Published:
Updated:
ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ

ತುಮಕೂರು: ನಗರದ ಜಯನಗರ ಪೂರ್ವ 1ನೇ ಕ್ರಾಸ್‌ನಲ್ಲಿರುವ ರಂಗನಾಥ್ ಎಂಬುವರ ಮನೆಗೆ ಶನಿವಾರ ಬೆಳಿಗ್ಗೆ ಚಿರತೆ ನುಗ್ಗಿದೆ.

ನಗರಕ್ಕೆ ಚಿರತೆ ಬಂದಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಧಾವಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಗೋವಿಂದರಾಜ್ ಅವರ ಬೆನ್ನಿಗೆ ಚಿರತೆ ಪರಚಿದೆ. ಬಳಿಕ ಓಡಿ ಹೋಗಿ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರ ರಂಗನಾಥ್‌ರ ಮನೆಗೆ ನುಗ್ಗಿದೆ.

ಚಿರತೆ ಮನೆಯೊಳಕ್ಕೆ ನುಗ್ಗುತ್ತಿದ್ದಂತೆ ಕುಟುಂಬದ ಸದಸ್ಯರು ಭಯಗೊಂಡು, ದಿಕ್ಕುಪಾಲಾಗಿ ಓಡಿ ಹೋಗಿ ಬಾತ್‌ರೂಮ್‌ನಲ್ಲಿ ರಕ್ಷಣೆ ಪಡೆದಿದ್ದಾರೆ. ರಂಗನಾಥ್‌ರ ಪತ್ನಿ ವನಜಾಕ್ಷಿ, ಸೊಸೆ ವಿನೂತಾ ಬಾತ್‌ರೂಮ್‌ನಲ್ಲಿ ಅಡಗಿ ಕುಳಿತಿದ್ದಾರೆ.

ಇಲಾಖೆ ಸಿಬ್ಬಂದಿ ಹಾಸನದಿಂದ ಬರುತ್ತಿರುವ ಅರಿವಳಿಕೆ ತಜ್ಞ ಡಾ.ಮುರಳೀಧರ್ ಮತ್ತು ತಂಡದ ನಿರೀಕ್ಷೆಯಲ್ಲಿ ಇದ್ದಾರೆ.

ಗೋವಿಂದರಾಜ್ ಅವರ ಬೆನ್ನಿಗೆ ಚಿರತೆ ಪರಚಿರುವುದು

 ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಮನೆ ಸುತ್ತಮುತ್ತಲ ಕುತೂಹಲದಿಂದ ಸೇರಿದ ಜನರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry