‘ಬಿಜೆಪಿ ಟಿಕೆಟ್‌ ಸಿಕ್ಕರೆ ಸ್ಪರ್ಧೆ

7

‘ಬಿಜೆಪಿ ಟಿಕೆಟ್‌ ಸಿಕ್ಕರೆ ಸ್ಪರ್ಧೆ

Published:
Updated:

ಕೆ.ಆರ್.ಪೇಟೆ: ತಾಲ್ಲುಕಿನಲ್ಲಿ ಬಿಜೆಪಿ ಸದೃಢಗೊಳಿಸಲು ತಾವೂ ಒತ್ತು ನೀಡಿದ್ದು, ಪಕ್ಷ ಬಯಸಿ ಟಿಕೆಟ್‌ ನೀಡಿದರೆ ಚುನಾವಣೆಗೆ ಸ್ಪಧಿರ್ಸಲು ಸಿದ್ಧ ಎಂದು ಬಿಜೆಪಿ ಹಿರಿಯ ಮುಖಂಡ ಬೂಕನಕೆರೆ ಪುಟ್ಟರಾಜು ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ‘ನಾನು 10 ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಕಳೆದ ಚುನಾವಣೆಯಲ್ಲಿ ಬೂಕನಕೆರೆ ಹೋಬಳಿಯಲ್ಲಿ ಪಕ್ಷ ಅತ್ಯಧಿಕ ಮತಗಳಿಸಲು ಪ್ರಾಮಾಣಿಕವಾಗಿ ಹೋರಾಡಿದ್ದೇನೆ. ಇದರ ಫಲವಾಗಿ ಪತ್ನಿ ಮೀನಾಕ್ಷಿ ಬೂಕನಕೆರೆ ಕ್ಷೇತ್ರದಿಂದ ತಾಲ್ಲೂಕು ಪಂಚಾಯಿತಿಗೆ ಆಯ್ಕೆಯಾದರು ಎಂದರು. ಪಕ್ಷದ ನಿಷ್ಟಾವಂತ ಕಾರ್ಯಕರ್ತ ನಾಗಿ ಪಕ್ಷ ಅಂತಿಮವಾಗಿ ಟಿಕೆಟ್‌ ನೀಡುವ ಅಭ್ಯರ್ಥಿ ಪರ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದರು.

ಬಿಜೆಪಿ ಮುಖಂಡರಾದ ಜೆಸಿಬಿ ಶ್ರೀನಿವಾಸ್, ಬಾಬು, ಬಿ. ಬಾಚಹಳ್ಳಿ ನಾಗಣ್ಣ, ಬಣ್ಣೇನಹಳ್ಳಿ ಬೋರೇ ಗೌಡ, ಐಚನಹಳ್ಳಿ ರಾಮಣ್ಣ, ಕೆರೆಮೇಗಲ ಕೊಪ್ಪಲು ವೆಂಕಟೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry