ಭೈರವೇಶ್ವರನಿಗೆ ಮದ್ಯಾರಾಧನೆ!

7

ಭೈರವೇಶ್ವರನಿಗೆ ಮದ್ಯಾರಾಧನೆ!

Published:
Updated:
ಭೈರವೇಶ್ವರನಿಗೆ ಮದ್ಯಾರಾಧನೆ!

ಹುಲಿಯೂರುದುರ್ಗ: ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಸಮೀಪದ ವರದರಾಜ ಸ್ವಾಮಿ ಮಠದ ಆವರಣದ ಓಡೇ ಭೈರವೇಶ್ವರ ದೇವಾಲಯದ ತಪ್ಪಲಿನಲ್ಲಿ ಇತ್ತೀಚೆಗೆ ನಡೆದ ಮದ್ಯಾರಾಧನೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

ಹೇಮಗಿರಿ ಬೆಟ್ಟದ ದಕ್ಷಿಣ ಭಾಗದಲ್ಲಿ ಬೆಟ್ಟ ಕೊರೆದು ನಿರ್ಮಿಸಿರುವ ಗುಹೆಯಂತಹ ಪ್ರಾಂಗಣದಲ್ಲಿ ಓಡೇ ಭೈರವನ ಶಿಲಾ ಮೂರ್ತಿ ಇದೆ. ಇಲ್ಲಿ ಪ್ರತಿ ವರ್ಷ ಸಂಕ್ರಾಂತಿ ಮುಗಿದ ಮೇಲೆ ಮದ್ಯಾರಾಧನೆ ಮತ್ತು ಭಂಗೀಸೇವೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಅರಮನೆ ಹೊನ್ನಮಾಚನಹಳ್ಳಿ ಗ್ರಾಮದ ಜನರು ಅನಾದಿ ಕಾಲದಿಂದಲೂ ಬೈರವನಿಗೆ ಸಾಮೂಹಿಕವಾಗಿ ಮದ್ಯಾರಾಧನೆಯ ಸೇವೆ ಸಲ್ಲಿಸುವರು. ಎಲ್ಲರೂ ಒಗ್ಗೂಡಿ ದೇವರಿಗೆ ‍ಪೂಜೆ ಸಲ್ಲಿಸಿ ಮದ್ಯ ಸೇವಿಸುವರು. ದೇವರಿಗೂ ಇದನ್ನೇ ನೈವೇದ್ಯ ಮಾಡುವರು. ಮಂಡ್ಯ, ರಾಮನಗರ, ಮೈಸೂರು, ಬೆಂಗಳೂರು, ತುಮಕೂರು ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯಲ್ಲಿ ಪಾಲ್ಗೊಳ್ಳುವರು.

ದೀಕ್ಷೆ ಪಡೆದ ಜೋಗತಿಯರು ಹಾಗೂ ಜಾತ್ರೆಯಲ್ಲಿ ಮಕ್ಕಳ ಆಟಿಕೆಗಳ ಮಾರಾಟಕ್ಕೆ ಬರುವ ಮಹಿಳೆಯರು ಮಕ್ಕಳಷ್ಟೇ ಮದ್ಯ ಸೇವನೆ ಮಾಡುತ್ತಾರೆ.

-ಎಚ್.ಎನ್.ನಾರಾಯಣ, ನ್ಯಾಯಬೆಲೆ ಅಂಗಡಿ ಮಾಲೀಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry