ಅಡುಗೆ ಕೋಣೆಯ ಸಜ್ಜಾ ಮೇಲೆ ಅಡಗಿ ಕುಳಿತಿದ್ದ ಚಿರತೆಗೆ ತಜ್ಞರಿಂದ ಅರವಳಿಕೆ; ಕಾರ್ಯಾಚರಣೆ ಯಶಸ್ವಿ

7

ಅಡುಗೆ ಕೋಣೆಯ ಸಜ್ಜಾ ಮೇಲೆ ಅಡಗಿ ಕುಳಿತಿದ್ದ ಚಿರತೆಗೆ ತಜ್ಞರಿಂದ ಅರವಳಿಕೆ; ಕಾರ್ಯಾಚರಣೆ ಯಶಸ್ವಿ

Published:
Updated:
ಅಡುಗೆ ಕೋಣೆಯ ಸಜ್ಜಾ ಮೇಲೆ ಅಡಗಿ ಕುಳಿತಿದ್ದ ಚಿರತೆಗೆ ತಜ್ಞರಿಂದ ಅರವಳಿಕೆ; ಕಾರ್ಯಾಚರಣೆ ಯಶಸ್ವಿ

ತುಮಕೂರು: ನಗರದ ಜಯನಗರ ಪೂರ್ವ 1ನೇ ಕ್ರಾಸ್‌ನಲ್ಲಿರುವ ರಂಗನಾಥ್ ಎಂಬುವರ ಮನೆಗೆ ಶನಿವಾರ ಬೆಳಿಗ್ಗೆ ಚಿರತೆ ನುಗ್ಗಿದ್ದು, ಅದು ಅಡುಗೆ ಮನೆಯ ಸಜ್ಜಾ ಮೇಲೆ ಕುಳಿತಿತ್ತು. ಚಿರತೆಗೆ ಅರವಳಿಕೆ ನೀಡುವಲ್ಲಿ ತಜ್ಞರು ಯಶಸ್ವಿಯಾಗಿದ್ದಾರೆ.

ಸತತ ಪ್ರಯತ್ನದ ಬಳಿಕ ಅರವಳಿಕೆ ತಜ್ಞರ ಕಾರ್ಯಾಚರಣೆ ಯಶಸ್ವಿಯಾಗಿದೆ. ಎರಡನೇ ಪ್ರಯತ್ನದಲ್ಲಿ ಚಿರತೆ ಕುಸಿದು ಬಿದ್ದು ಮಂಪರಿಗೆ ಜಾರಿತು. ಡಾ.ಸುಜಯ್, ಡಾ.ಮುರಳೀದರ್ ಕಾರ್ಯಾಚರಣೆ ನಡೆಸಿದರು. ಬಳಿಕ ಚಿರತೆಯನ್ನು ಸೆರೆ ಹಿಡಿಯಲಾಯಿತು.

ಅರವಳಿಕೆ ತಜ್ಞರು ಕಾರ್ಯಾಚರಣೆ ನಡೆಸಿದ ವೇಳೆ ಚಿರತೆ ಅಡುಗೆ ಮನೆಯಲ್ಲಿ ಅತ್ತಿತ್ತ ಓಡಾಡುತ್ತಿತ್ತು, ಕಿಟಕಿಯ ಬಳಿ ಬಂದು ಅಬ್ಬರಿಸಿತು.

ಚಿರತೆಗೆ ಅರವಳಿಕೆ ನೀಡಿರುವುದು.

ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಚಿರತೆ ಹೊರ ತರಲು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಮನೆ ಹೊರಗಡೆ ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿಗೆ ಸೂಚನೆ ನೀಡಿದರು.

ಬೆಳಿಗ್ಗೆ ನಗರಕ್ಕೆ ಚಿರತೆ ಬಂದಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಧಾವಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಗೋವಿಂದರಾಜ್ ಅವರ ಬೆನ್ನಿಗೆ ಚಿರತೆ ಪರಚಿದೆ. ಬಳಿಕ ಓಡಿ ಹೋಗಿ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರ ರಂಗನಾಥ್‌ರ ಮನೆಗೆ ನುಗ್ಗಿದೆ.

ಚಿರತೆ ಮನೆಯೊಳಕ್ಕೆ ನುಗ್ಗುತ್ತಿದ್ದಂತೆ ಕುಟುಂಬದ ಸದಸ್ಯರು ಭಯಗೊಂಡು, ದಿಕ್ಕುಪಾಲಾಗಿ ಓಡಿ ಹೋಗಿ ಬಾತ್‌ರೂಮ್‌ನಲ್ಲಿ ರಕ್ಷಣೆ ಪಡೆದಿದ್ದಾರೆ. ರಂಗನಾಥ್‌ರ ಪತ್ನಿ ವನಜಾಕ್ಷಿ, ಸೊಸೆ ವಿನೂತಾ ಬಾತ್‌ರೂಮ್‌ನಲ್ಲಿ ಅಡಗಿ ಕುಳಿತಿದ್ದರು.

* ಇವನ್ನೂ ಓದಿ...

ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry