ಏರ್‌ಬ್ಯಾಗ್ ದೋಷ: 22 ಸಾವಿರ ಹೋಂಡಾ ಕಾರ್ ವಾಪಸ್‌

7

ಏರ್‌ಬ್ಯಾಗ್ ದೋಷ: 22 ಸಾವಿರ ಹೋಂಡಾ ಕಾರ್ ವಾಪಸ್‌

Published:
Updated:

ನವದೆಹಲಿ : ಏರ್‌ಬ್ಯಾಗ್‌ನಲ್ಲಿ ದೋಷ ಕಾಣಿಸಿಕೊಂಡಿರುವುದರಿಂದ ಅಕಾರ್ಡ್‌, ಸಿಟಿ ಮತ್ತು ಜಾಜ್‌ ಮಾದರಿಯ ಒಟ್ಟು 22,834 ಕಾರುಗಳನ್ನು ವಾಪಸ್‌ ಕರೆಸಿಕೊಳ್ಳುತ್ತಿರುವುದಾಗಿ ಹೋಂಡಾ ಕಾರ್ಸ್ ಇಂಡಿಯಾ ಹೇಳಿದೆ.

2013ರಲ್ಲಿ ತಯಾರಾಗಿರುವ ಈ ಕಾರುಗಳಲ್ಲಿ ಅಳವಡಿಸಿರುವ ಟಕಾಟ ಕಂಪನಿಯ ಏರ್‌ಬ್ಯಾಗ್‌ಗಳಲ್ಲಿ  ದೋಷ ಕಂಡುಬಂದಿದ್ದು, ಉಚಿತವಾಗಿ ಬದಲಿಸಿ ಕೊಡುವುದಾಗಿ ತಿಳಿಸಿದೆ.

ಹಿಂದಿನ ವರ್ಷವೂ ಏರ್‌ಬ್ಯಾಗ್‌ ದೋಷದ ಕಾರಣ ನೀಡಿ ಕಂಪನಿ 41,580 ವಾಹನಗಳನ್ನು ವಾಪಸ್‌ ಕರೆಸಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry