ಬೆಂಗಳೂರಿನಲ್ಲಿ 24ರಿಂದ ರಾಷ್ಟ್ರೀಯ ಬಾಕ್ಸಿಂಗ್

7

ಬೆಂಗಳೂರಿನಲ್ಲಿ 24ರಿಂದ ರಾಷ್ಟ್ರೀಯ ಬಾಕ್ಸಿಂಗ್

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಬಾಕ್ಸಿಂಗ್ ಸಂಸ್ಥೆ ಮತ್ತು ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಷನ್‌ ಆಶ್ರಯದಲ್ಲಿ ರಾಷ್ಟ್ರೀಯ ಸೀನಿಯರ್ ಮಹಿಳೆಯರ ಮತ್ತು ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಇದೇ 24ರಿಂದ 28ರವರೆಗೆ ನಡೆಯಲಿದೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ.ರಾಜು ಅರುಣಾಚಲಂ ‘ಎರಡು ದಶಕಗಳ ನಂತರ ಬೆಂಗಳೂರಿನಲ್ಲಿ ಚಾಂಪಿಯನ್‌ಷಿಪ್ ನಡೆಯುತ್ತಿದ್ದು ಸಮಗ್ರ ಪ್ರಶಸ್ತಿ ಗೆಲ್ಲುವ ತಂಡಕ್ಕೆ ಡಾ.ರಾಜ್‌ಕುಮಾರ್ ಕಪ್ ನೀಡಲಾಗುವುದು’ ಎಂದರು.

‘30 ರಾಜ್ಯಗಳ ತಂಡಗಳೊಂದಿಗೆ ಸರ್ವಿಸಸ್‌ನ ಬಾಕ್ಸರ್‌ಗಳು ಸೇರಿದಂತೆ 450ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಇವರ ಪೈಕಿ 200ಕ್ಕೂ ಹೆಚ್ಚು ಮಂದಿ ಮಹಿಳೆಯರು. 45 ಕೆ.ಜಿ ವರೆಗಿನ ಲೈಟ್ ಫ್ಲೈ ವೇಟ್‌ ವಿಭಾಗ ಮತ್ತು 91 ಕೆ.ಜಿಗೂ ಮೇಲಿನವರ ಸೂಪರ್ ಹೆವಿ ವೇಟ್‌ ವಿಭಾಗ ಒಳಗೊಂಡಂತೆ 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದರು.

ಕಾರ್ಯದರ್ಶಿ ಎ.ಜಯಕುಮಾರ್‌, ಖಜಾಂಚಿ ರಾಜ್‌ಕುಮಾರ್‌, ಕೋಚ್‌ ಡಾಮಿನಿಕ್‌ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry